ಮೋದಿ, ಚಾಯ್ ವಾಲಾರನ್ನು ಅಣಕಿಸಿದ ಕಾಂಗ್ರೆಸ್ ಗೆ ಜನರಿಂದ ಛೀಮಾರಿ

Posted By:
Subscribe to Oneindia Kannada

ನವದೆಹಲಿ, ನವೆಂಬರ್ 22: ಪ್ರಧಾನಿ ನರೇಂದ್ರ ಮೋದಿಯವರ ಇಂಗ್ಲಿಷ್ ಜ್ಞಾನವನ್ನು ಅಣಕಿಸುವಂಥ ಕಾರ್ಟೂನ್ ಒಂದನ್ನು ಕಾಂಗ್ರೆಸ್ ಆನ್ ಲೈನ್ ಮ್ಯಾಗಜಿನ್ 'ಯುವದೇಶ'ದಲ್ಲಿ ಪೋಸ್ಟ್ ಮಾಡಿರುವ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ಎದ್ದಿದೆ.

#CongChaiSelfgoal #CongChaiwalaAttack #Chaiwala ಮುಂತಾದ ಹ್ಯಾಶ್ ಟ್ಯಾಗ್ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಕಾಂಗ್ರೆಸ್ ನ ಕೀಳು ಅಭಿರುಚಿಯ ಕುರಿತು ಟೀಕೆ ವ್ಯಕ್ತವಾಗಿದೆ.

ಮೋದಿ ಇಂಗ್ಲಿಷ್ ಬಗ್ಗೆ ಯುವ ಕಾಂಗ್ರೆಸ್ ನಿಂದ ಕೀಳು ಅಭಿರುಚಿ ಟ್ವೀಟ್

ಆ ಚಿತ್ರದಲ್ಲಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಂಗ್ಲೆಂಡ್ ಪ್ರಧಾನಿ ತೆರೆಸಾ ಮೇ ಅವರ ಬಳಿ ಮಾತನಾಡುತ್ತಾ, 'ನನ್ನ ವಿರುದ್ಧ ವಿಪಕ್ಷಗಳು ಎಷ್ಟೆಲ್ಲ 'ಮೆಮೆ'ಗಳನ್ನು ಹಾಕುತ್ತಿದ್ದಾರೆ ಗೊತ್ತಾ' ಎಂದು ಕೇಳಿದ್ದಾರೆ. ಅದಕ್ಕೆ ಡೊನಾಲ್ಡ್ ಟ್ರಂಪ್, 'ಅದು ಮೆಮೆ ಅಲ್ಲ, ಮೀಮ್ಸ್' ಎಂದು ಉತ್ತರಿಸಿದ್ದಾರೆ. ಇದನ್ನು ಕೇಳಿದ ತೆರೆಸಾ, ಮೋದಿಯವರಿಗೆ 'ನೀವು ಚಾಯ್ ಮಾರುವುದಕ್ಕೇ ಸರಿ' ಎಂದಿದ್ದಾರೆ. ದೇಶದ ಪ್ರಧಾನಿಯೊಬ್ಬರನ್ನು ಈ ರೀತಿ ಚಿತ್ರಿಸಿದ್ದು, ಮತ್ತು ಚಾಯ್ ವಾಲಾ ಕೆಲಸವನ್ನು ನಿಕೃಷ್ಟ ಎಂಬಂತೆ ನೋಡಿದ್ದರ ಕುರಿತು ಸಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಕಾಂಗ್ರೆಸ್ಸಿಗೆ ಬೇರೇನು ಗೊತ್ತು?!

ಶ್ರೀಮಂತರಿಂದ ಬಡವರನ್ನು ರಕ್ಷಿಸುತ್ತೇನೆಂದು ಪೋಸು ಕೊಡುವ ಭಾರತ ಕಾಂಗ್ರೆಸ್ ಪಕ್ಷ ತನ್ನ ಪ್ರಧಾನಿಯನ್ನು 'ಒಬ್ಬ ಯಕಃಶ್ಚಿತ್ ಟೀ ಮಾರುವವ' ಎಂದು ಕರೆದಿದೆ. ಇದು ಆ ಪಕ್ಷದ ದುರಹಂಕಾರ ಮತ್ತು ಶ್ರೀಮಂತಿಕೆಯ ದರ್ಪವನ್ನು ತೋರಿಸುತ್ತದೆ. ಕಾಂಗ್ರೆಸ್ಸಿಗೆ ಅಧಿಕಾರ, ಸವಲತ್ತು ಮತ್ತು ಕುಟುಂಬ ರಾಜಕಾರಣ ಬಿಟ್ಟು ಇನ್ನೇನು ಗೊತ್ತು?! ಎಂದು ಚಿಂತಕ ಡಾ.ಡೇವಿಡ್ ಫ್ರಾಲಿ ಟ್ವೀಟ್ ಮಾಡಿದ್ದಾರೆ.

ಚಾಯ್ ವಾಲಾ ಪ್ರಧಾನಿಯಾಗಬಹುದು...

ಒಬ್ಬ ಚಾಯ್ ವಾಲಾ ಪ್ರಧಾನಿಯಾದರೆ ತಪ್ಪೇನಿಲ್ಲ, ಆದರೆ ಒಬ್ಬ ಪ್ರಧಾನಿ ಚಾಯ್ ವಾಲಾ ಆಗಬಾರದು! ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾಗಾಂಧಿಯವರಿಗೆ ಟೀ ನೀಡುತ್ತಿರುವ ಚಿತ್ರವನ್ನು ಹಾಕಿರುವ ದುರ್ಗಾ ಪ್ರಸಾದ್ ಎನ್ನುವವರು, ಇದು ಈ ಸಂದರ್ಭಕ್ಕೆ ಸೂಕ್ತವಾಗುವ ಚಿತ್ರ ಎಂದಿದ್ದಾರೆ!

ತನ್ನ ಸಮಾಧಿಯನ್ನು ಕಾಂಗ್ರೆಸ್ ತಾನೇ ತೋಡಿಕೊಳ್ಳುತ್ತಿದೆ!

2014 ರಲ್ಲಿ ಇದೇ ರೀತಿ, ಮೋದಿಯವರನ್ನು ಚಾಯ್ ವಾಲಾ ಎಂದು ಅಣಕಿಸಿದ್ದಕ್ಕೆ ಪ್ರತಿಯಾಗಿ, ಚುನಾವಣೆಯಲ್ಲಿ ಕಾಂಗ್ರೆಸ್ 44 ಸೀಟಿಗೆ ತೃಪ್ತಿಪಡಬೇಕಾಯ್ತು. 2019ರಲ್ಲೂ ಈ ಸ್ಥಿತಿಯೇ ಮರುಕಳಿಸಲಿ ಅಂತ ಈಗಿನಿಂದಲೇ ತಮ್ಮ ಸಮಾಧಿಯನ್ನು ಕಾಂಗ್ರೆಸ್ ತಾನೇ ತೋಡಿಕೊಳ್ಳುತ್ತಿದೆ ಎಂದು ಅಂಶುಲ್ ಸಕ್ಸೇನಾ ಎನ್ನುವವರು ಟ್ವೀಟ್ ಮಾಡಿದ್ದಾರೆ.

ನಮಗೆ ಮೋದಿ ಬಗ್ಗೆ ಗೌರವವಿದೆ!

ನರೇಂದ್ರ ಮೋದಿಯವರು ಏನನ್ನೇ ಮಾಡಲಿ, ಅದನ್ನು ಅವರು ಅತೀವ ಗೌರವ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಾರೆ. ಇಂಥ ಪ್ರಧಾನಿಯವರನ್ನು ಪಡೆದಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದು ರಾಮಕೃಷ್ಣ ಆಳ್ವಾ ಎನ್ನುವವರು ಟ್ವೀಟ್ ಮಾಡಿದ್ದಾರೆ.

ನಕಲಿ ಗಾಂಧಿಗಳು!

ಗುಜರಾತಿಗಳು ಎಂದಿಗೂ ಕಠಿಣ ಪರಿಶ್ರಮದಿಂದ ಮೇಲೆ ಬಂದವರು. ಕಾಂಗ್ರೆಸ್ ಮತ್ತು ನಕಲಿ ಗಾಂಧಿಗಳು ಎಂದಿಗೂ ಗುಜರಾತಿಗಳನ್ನು ಗೌರವಿಸಲಾರರು. ಸರ್ದಾರ್ ಪಟೇಲ್ ರಿಂದ ಹಿಡಿದು ನರೇಮದ್ರ ಮೋದಿಯವರೆಗೂ ಅವರು ಯಾರಿಗೂ ಗೌರವ ನೀಡಲಿಲ್ಲ ಎಂದು ಫಣಿಕೃಷ್ಣ ಪೆರಲ ಎನ್ನುವವರು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದುರಹಂಕಾರಿ ಕಾಂಗ್ರೆಸ್

ಈ ಚಿತ್ರ ಕಾಂಗ್ರೆಸ್ ನ ದುರಹಂಕಾರ ಮತ್ತು ಬಡತನದ ಹಿನ್ನೆಲೆಯಿಂದ ಬಂದವರನ್ನು ಅದು ಹೇಗೆ ನೋಡುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅನಿತ್ ಘೋಷ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Many people in social media condemning a cartoon in Yuva Desh an online magazine of Indian youth congress, which insulted PM Narendra Modi and also tea sellers(Chaiwala).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ