ಇತಿಹಾಸದಲ್ಲೇ ಸುದೀರ್ಘ ಬಜೆಟ್ ಮಂಡನೆ, ಇದು ಹೊಗಳಿಕೆಯಲ್ಲ!

ನವದೆಹಲಿ, ಫೆಬ್ರವರಿ.01: ಕೇಂದ್ರ ಸರ್ಕಾರದ 2020-21ನೇ ಸಾಲಿನ ಬಜೆಟ್ ಇತಿಹಾಸದಲ್ಲೇ ಸುದೀರ್ಘವಾಗಿತ್ತು ಎಂದು ವಯನಾಡು ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ, ಇದು ಹೊಗಳಿಕೆಯ ಮಾತಲ್ಲ. ಬದಲಿಗೆ ಕೇಂದ್ರ ಸರ್ಕಾರವನ್ನು ವಿಭಿನ್ನ ರೀತಿಯಲ್ಲಿ ಟೀಕಿಸಿದ ಬಗೆ.

ನವದೆಹಲಿಯಲ್ಲಿ ಮಾತನಾಡಿದ ವಯನಾಡು ಸಂಸದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ಬಜೆಟ್ ನ್ನು ಲಘುವಾಗಿ ಟೀಕಿಸಿದ್ದಾರೆ. ಬಹುಶಃ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಎನಿಸುತ್ತದೆ. ಆದರೆ, ಅವರು ಮಂಡಿಸಿದ ಬಜೆಟ್ ಸಂಪೂರ್ಣ ಟೊಳ್ಳಾಗಿದೆ ಎಂದು ರಾಹುಲ್ ಗಾಂಧಿ ವಿಮರ್ಶಿಸಿದ್ದಾರೆ.

ದೇಶವನ್ನು ನಿರುದ್ಯೋಗ ಎಂಬ ಸಮಸ್ಯೆ ಬೆನ್ನು ಬಿಡದೇ ಕಾಡುತ್ತಿದ್ದು, ಇದನ್ನು ಬಗೆಹರಿಸುವ ಬಗ್ಗೆ ಬಜೆಟ್ ನಲ್ಲಿ ಯಾವುದೇ ಅಂಶಗಳು ಕಾಣುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಆಲೋಚನೆಯೇ ಇದ್ದಂತೆ ಗೋಚರಿಸುತ್ತಿಲ್ಲ ಎಂದು ರಾಹುಲ್ ಕಿಡಿ ಕಾರಿದ್ದಾರೆ.

ಕೇಂದ್ರದ ವಿರುದ್ಧ ಕಿಡಿ ಕಾರಿದ ರಾಹುಲ್ ಗಾಂಧಿ

ಕೇಂದ್ರ ಸರ್ಕಾರದ 2020-21ನೇ ಸಾಲಿನ ಬಜೆಟ್ ನಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸುವಂತಾ ಒಂದೇ ಒಂದು ಯೋಜನೆಯನ್ನು ಘೋಷಣೆ ಮಾಡಿಲ್ಲ. ಈ ಬಜೆಟ್ ನಿಂದ ದೇಶದ ಯುವ ಜನಾಂಗಕ್ಕೆ ಉಪಯೋಗವಾಗುತ್ತದೆ ಎಂದು ನನಗಂತೂ ಅನ್ನಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಬಜೆಟ್ ಮಂಡನೆ ಮುಖ್ಯವಲ್ಲ, ಉದ್ಯೋಗ ಸೃಷ್ಟಿಸಿ

ಬಜೆಟ್ ಮಂಡನೆ ಮುಖ್ಯವಲ್ಲ, ಉದ್ಯೋಗ ಸೃಷ್ಟಿಸಿ

ಭಾರತದ ಪ್ರಜೆಗಳಿಗೆ ಮತ್ತು ಯುವಕರಿಗೆ ಉದ್ಯೋಗ ಬೇಕಾಗಿದೆಯೇ ವಿನಃ ಸುದೀರ್ಘವಾದ ಬಜೆಟ್ ಮಂಡನೆ ಅಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಬ್ಬರೂ ಇದೀಗ ಒಂದೇ ರೀತಿ ಕಾಣುತ್ತಿದ್ದಾರೆ. ಇಬ್ಬರಿಗೂ ಮುಂದೇನು ಮಾಡುವುದು ಎಂಬುದರ ಬಗ್ಗೆ ಸರಿಯಾದ ಚಿಂತನೆ ಇದ್ದಂತೆ ಕಾಣುತ್ತಿಲ್ಲ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

ಸರ್ಕಾರದ ಆಸ್ತಿ ಮಾರಾಟಕ್ಕೆ ದೀದಿ ಸಿಡಿಮಿಡಿ

ಸರ್ಕಾರದ ಆಸ್ತಿ ಮಾರಾಟಕ್ಕೆ ದೀದಿ ಸಿಡಿಮಿಡಿ

2020-2021ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಕಂಡು ಆಘಾತವಾಯ್ತು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ. ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿದೆ. ಅದಕ್ಕಾಗಿ ದೇಶದ ಆಸ್ತಿಯಾಗಿದ್ದ ಸಂಸ್ಥೆಗಳನ್ನೇ ಮಾರಾಟಕ್ಕೆ ಇಡುತ್ತಿದೆ ಎಂದು ಟೀಕಿಸಿದ್ದಾರೆ.

ಬಜೆಟ್ ಮಂಡಿಸಲು ನಿರ್ದಿಷ್ಟ ಸಮಯದ ಮಿತಿಯಿಲ್ವೇ?

ಬಜೆಟ್ ಮಂಡಿಸಲು ನಿರ್ದಿಷ್ಟ ಸಮಯದ ಮಿತಿಯಿಲ್ವೇ?

ಇನ್ನು, ಇದಕ್ಕೂ ಮೊದಲು ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬರೋಬ್ಬರಿ 2 ಗಂಟೆ 21 ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡಿದ್ದರು. ಇದನ್ನು ಟೀಕಿಸಿರುವ ಕಾರ್ತಿ ಚಿದಂಬರಂ, ಬಜೆಟ್ ಮಂಡಿಸಲು ಒಂದು ಸಮಯದ ಮಿತಿ ಇರುತ್ತದೆ. ಅದನ್ನು ಅರಿತುಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+