Aadhaar Card: ಇನ್ಮುಂದೆ ಆಧಾರ್ ಕಾರ್ಡ್ ಬೇಕಿಲ್ಲ! ನಿಮ್ಮ ಫೇಸ್ ನೋಡಿಯೇ ಪರಿಶೀಲನೆ: ಕೇಂದ್ರ ಸರ್ಕಾರ
ನವದೆಹಲಿ, ಏಪ್ರಿಲ್ 09: ಭಾರತದ ನಾಗರಿಕರ ಆಧಾರ್ ಗುರುತಿನ ಚೀಟಿಯಲ್ಲಿ ಡಿಜಿಟಲ್ ಅನುಕೂಲತೆ ಮತ್ತು ಗೌಪ್ಯತೆ ಕಾರಣದಿಂದ ಕೇಂದ್ರ ಸರ್ಕಾರ ಮಹತ್ವದ ಬಲಾವಣೆ ಮಾಡಿದೆ. ಬಳಕೆದಾರರ ಆಧಾರ್ ಪರಿಶೀಲನೆ ಇನ್ನುಮುಂದೆ ಭೌತಿಕವಾಗಿ ಅಲ್ಲದೇ ಡಿಜಿಟಲ್ ರೂಪದಲ್ಲಿ ಪರಿಶೀಲನೆ ಆಗಲಿದೆ. ಈ ಮೂಲಕ ಆಧಾರ್ ಗುರುತಿನ ಚೀಟಿ ವಿಚಾರದಲ್ಲಿ ಸರ್ಕಾರದ ಪ್ರಮುಖ ಹೆಜ್ಜೆ ಇಟ್ಟಿದೆ. ಈ ಕುರಿತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.
ಮಂಗಳವಾರ ಕೇಂದ್ರ ಸರ್ಕಾರ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದರಿಂದ ಬಳಕೆದಾರರು ಆಧಾರ್ ಕಾರ್ಡ್‌ಗಳನ್ನು ಎಲ್ಲೆಂದರಲ್ಲಿ ಭೌತಿಕವಾಗಿ ಇಲ್ಲವೇ ಅದರ ಫೋಟೋ ಒಯ್ಯುವ ಪ್ರಮೆಯವೇ ಬರುವುದಿಲ್ಲ. ವ್ಯಕ್ತಿಯ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಪರಿಶೀಲಿಸಲು, ಹಂಚಿಕೆಗೆ ಸರ್ಕಾರದ ಈ ಆಪ್ಲಿಕೇಷನ್ ಸಹಾಯಕ್ಕೆ ಬರುತ್ತದೆ ಎಂದು ಆಪ್ ಬಿಡುಗಡೆ ನಂತರ ಸಚಿವರು ಮಾಹಿತಿ ನೀಡಿದ್ದಾರೆ.

ಆಧಾರ್ ಪರಿಶೀಳನೆ ವಿಧಾನ ಸರಳ
ತಂತ್ರಜ್ಞಾನ ಬೆಳೆದಂತೆಲ್ಲ ಎಲ್ಲ ಮಾಹಿತಿ ಆನ್‌ಲೈನ್‌ನಲ್ಲಿ ಅಡಕವಾಗಿಸಲಾಗುತ್ತಿದೆ. ಅದೇ ರೀತಿ ಆಧಾರ್ ಮಾಹಿತಿ ಡಿಜಿಟಲ್ ರೂಪ ಪಡೆಯಲಿದೆ. ಸರ್ಕಾರದ ಈ ನಿರ್ಧಾರ ಡಿಜಿಟಲ್ ನಾವೀನ್ಯತೆ ಮಹತ್ವದ ಸಾರುತ್ತದೆ. ಡಿಜಿಟಲ್ ಆಧಾರ್‌ನಿಂದ ಪರಿಶೀಲನೆ ಮತ್ತಷ್ಟು ಸರಳವಾಗುತ್ತದೆ. ಅದರ ಪ್ರಕ್ರಿಯೆಯ ವೇಗ ಹೆಚ್ಚುತ್ತದೆ. ಈ ಡಿಜಿಟಲ್ ಆಧಾರ್ ಪೇಸ್ ಐಡಿ ದೃಢೀಕರಣ ಹೊಂದಿರುತ್ತದೆ. ಹೀಗಾಗಿ ಸುರಕ್ಷಿತವು ಹೌದು ಎಂದಿದ್ದಾರೆ.
ನಿಮ್ಮ ಒಪ್ಪಿಗೆ ಇಲ್ಲದೇ ಮಾಹಿತಿ ಸಿಗದು..!
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಬಳಕೆದಾರರ ಮುಖ (ಫೇಸ್ ಐಡಿ) ಗುರುತಿನ ಆಧಾರದಲ್ಲಿ ಹೊಸ ಆಧಾರ್ ಅಪ್ಲಿಕೇಶನ್, ಮೊಬೈಲ್ ಅಪ್ಲಿಕೇಶನ್ ಕಾರ್ಯ ನಿರ್ವಹಿಸುತ್ತದೆ. ಈ ಆಪ್ ಒಂದಿದ್ದರೆ ಸಾಕು. ಭೌತಿಕ ಕಾರ್ಡ್, ಆಧಾರ ಫೋಟೋಗಳು ಅಗತ್ಯ ಬೀಳುವುದಿಲ್ಲ. ಆಪ್ ಇಲ್ಲವೇ ಸುರಕ್ಷಿತ ಡಿಜಿಟಲ್ ವಿಧಾನ ಮೂಲಕ ಬಳಕೆದಾರರ ಒಪ್ಪಿಗೆಯೊಂದಿಗೆ ಆಧಾರ ಮಾಹಿತಿ, ಸಂಖ್ಯೆ ಹಂಚಿಕೊಳ್ಳಬಹುದಾಗಿದೆ. ಇಂತದ್ದೊಂದು ಅಧಿಕಾರ ಬಳಕೆದಾರರಿಗೆ ಕೇಂದ್ರ ಸರ್ಕಾರ ನೀಡುತ್ತಿದೆ ಎಂದರು.
UPI ರೀತಿ ಆಧಾರ್ ಆಪ್ ಕಾರ್ಯ ನಿರ್ವಹಣೆ
ಒಂದೇ ಒಂದು ಟ್ಯಾಪ್ ಮೂಲಕ ಬಳಕೆದಾರರು ಅಗತ್ಯ ಡೇಟಾ ಮಾತ್ರ ಶೇರ್ ಮಾಡಿಕೊಳ್ಳಬಹುದು. ಜೊತೆಗೆ ನಿಮ್ಮ ವೈಯಕ್ತಿಕ ಸುರಕ್ಷಿತವಾಗಿರುವ ಜೊತೆಗೆ ಅದರ ಮೇಲೆ ಪೂರ್ತಿ ನಿಯಂತ್ರಣ ಇರುತ್ತದೆ. ಬಳಕೆದಾರರ ಫೇಸ್ ಐಡಿ ದೃಢೀಕರಣ ಮಾಡುವುದು ಈ ಆಪ್‌ನ ಪ್ರಮುಖ ವೈಶಿಷ್ಟ್ಯವಾಗಿದೆ. ಗುರುತಿನ ಚೀಟಿ, ಮಾಹಿತಿ ಪರಿಶೀಲನೆ ಹೆಚ್ಚು ಸರಳವಾಗಿರುತ್ತದೆ. ಇದರೊಂದಿಗೆ ಯುಪಿಐ ರೀತಿ ಆಪ್ QR ಕೋಡ್ ಅನ್ನು ಸ್ಕ್ಯಾನ್ ಮಾಡಿಯೂ ಪರಿಶೀಲಿಸಬಹುದು.

ಒಂದು ಆಧಾರ್ ಒಬ್ಬರೇ ಬಳಕೆ: ದುರುಪಯೋಗ ಅಸಾಧ್ಯ
ಯುಪಿಐ ಬ್ಯಾಂಕಿಂಗ್ ನಷ್ಟೇ ಆಧಾರ್ ಪರಿಶೀಲನೆಯನ್ನು ಕೇಂದ್ರ ಸರ್ಕಾರ ಸರಳಗೊಳಿಸಿದೆ. ಇದರಿಂದ ಕಾರ್ಡ್ ಕಳೆದುಕೊಳ್ಳುವ, ಹೊಸ ಕಾರ್ಡ್ ಮಾಡಿಸುವ ಭೀತಿಯು ಇರುವುದಿಲ್ಲ. ಸರ್ಕಾರ ಇಲ್ಲಿ ಗೌಪ್ಯತೆ ಹೆಚ್ಚಿನ ಆದ್ಯತೆ ನೀಡುತ್ತದೆ. ಭವಿಷ್ಯದಲ್ಲಿ ವಿಮಾನ ನಿಲ್ದಾಣ, ಅಂಗಡಿ, ಹೋಟೆಲ್‌ಗಳಲ್ಲಿ ನೀವು ಆಧಾರ್ ಕಾರ್ಡ್, ಅದರ ಪ್ರತಿ ನೀಡುವ ಅಗತ್ಯವು ಇರುವುದಿಲ್ಲ.
ಸದ್ಯ ಆಪ್ ಬೀಟಾ ಪರೀಕ್ಷಾ ಹಂತದಲ್ಲಿದ್ದು, ಪ್ರಬಲ ಗೌಪ್ಯತಾ ಸುರಕ್ಷತೆ, ವಿನ್ಯಾಸೊಂದಿಗೆ ಸೇವೆ ಅಣಿಯಾಗಲಿದೆ. ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಆಧಾರ್ ವಿವರಗಳನ್ನು ನಕಲಿ ಮಾಡಲು, ಸಂಪಾದಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಆಧಾರ್ ಡೇಟಾ ದುರುಪಯೋಗ ತಪ್ಪಿಸಬಹುದಾಗಿದೆ. ಒಂದು ಆಧಾರ್ ಒಬ್ಬರಿಂದಲೇ ಬಳಕೆ ಆಗಲಿದೆ.












Click it and Unblock the Notifications