ನಕಲಿ ಸುದ್ದಿ ಹರಡುತ್ತಿದ್ದ 6 ಯುಟೂಬ್ ಚಾನಲ್‌ಗಳನ್ನು ಭೇದಿಸಿದ ಪಿಐಬಿ
ನವದೆಹಲಿ, ಜನವರಿ 12: 20.47 ಲಕ್ಷ ಚಂದಾದಾರರನ್ನು ಹೊಂದಿದ್ದ ಆರು ಯೂಟ್ಯೂಬ್ ಚಾನೆಲ್‌ಗಳನ್ನು ನಕಲಿ ಸುದ್ದಿಗಳ ಹರಡುತ್ತಿವೆ ಎಂದು ಕೇಂದ್ರ ಸರ್ಕಾರದ ಪಿಐಬಿ ಪತ್ರಿಕಾ ಮಾಹಿತಿ ಬ್ಯೂರೋದ ಫ್ಯಾಕ್ಟ್ ಚೆಕ್ ಯೂನಿಟ್ ಭೇದಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಪಿಐಬಿ ಫ್ಯಾಕ್ಟ್ ಚೆಕ್ ಯುನಿಟ್‌ನಿಂದ ತಪ್ಪು ಮಾಹಿತಿ ಜಾಲದ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಈ ಆರು ಚಾನಲ್‌ಗಳನ್ನು 51.32 ಕೋಟಿ ಬಾರಿ ವೀಕ್ಷಿಸಲಾಗಿದೆ ಎಂದು ಕೇಂದ್ರವು ಮಾಹಿತಿ ನೀಡಿದೆ.
ಈ ಚಾನೆಲ್‌ಗಳು ಪ್ರಸಾರ ಮಾಡುವ ನಕಲಿ ಸುದ್ದಿಗಳನ್ನು ಭೇದಿಸಲು 100ಕ್ಕೂ ಹೆಚ್ಚು ಫ್ಯಾಕ್ಟ್ ಚೆಕ್‌ಗಳೊಂದಿಗೆ ಆರು ಪ್ರತ್ಯೇಕ ಟ್ವಿಟರ್ ಥ್ರೆಡ್‌ಗಳನ್ನು ಫ್ಯಾಕ್ಟ್ ಚೆಕ್ ಯುನಿಟ್ ಬಿಡುಗಡೆ ಮಾಡಿದೆ. ಆ ಆರು ಚಾನಲ್‌ಗಳೆಂದರೆ ನೇಷನ್ ಟಿವಿ (5.57 ಲಕ್ಷ ಚಂದಾದಾರರು), ಸಂವಾದ್ ಟಿವಿ (10.9 ಲಕ್ಷ ಚಂದಾದಾರರು), ಸರೋಕರ್ ಭಾರತ್ (21,100 ಚಂದಾದಾರರು), ನೇಷನ್ 24 (25,400 ಚಂದಾದಾರರು), ಸ್ವರ್ಣಿಮ್ ಭಾರತ್ (6,070 ಚಂದಾದಾರರು) ಮತ್ತು ಸಂವಾದ್ ಸಮಾಚಾರ್ (3.48 ಲಕ್ಷ ಚಂದಾದಾರರು).

ಇಡೀ ಚಾನೆಲ್‌ಗಳನ್ನು ನಿರ್ಬಂಧಿಸಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿನ ಘಟಕದಿಂದ ಇದು ಎರಡನೇ ರೀತಿಯ ಕ್ರಮವಾಗಿದೆ. ಪಿಐಬಿ ನಿಂದ ಅಧಿಕೃತ ಹೇಳಿಕೆಯನ್ನು ನೀಡಿದ ತಕ್ಷಣ, ಚಾನೆಲ್‌ಗಳು ನಕಲಿ ಸುದ್ದಿಗೆ ಸಂಬಂಧಿಸಿದ ವೀಡಿಯೊಗಳನ್ನು ಅಳಿಸಲು ಪ್ರಾರಂಭಿಸಿದವು ಮತ್ತು ಕೆಲವರು ತಮ್ಮ ಹೆಸರನ್ನು ಸಹ ಬದಲಾಯಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
17.31 ಕೋಟಿ ಬಾರಿ ವೀವ್ಸ್ ಹೊಂದಿದ್ದ ಸಂವಾದ್ ಟಿವಿ ತನ್ನ ಹೆಸರನ್ನು 'ಇನ್‌ಸೈಡ್ ಭಾರತ್' ಎಂದು ಬದಲಾಯಿಸಿದರೆ, 21.09 ಕೋಟಿ ಸಂಚಿತ ವೀಕ್ಷಕರನ್ನು ಹೊಂದಿರುವ ನೇಷನ್ ಟಿವಿ ತನ್ನ ಹೆಸರನ್ನು 'ನೇಷನ್ ವೀಕ್ಲಿ' ಎಂದು ಬದಲಾಯಿಸಿದೆ. ಇದಲ್ಲದೆ 11.93 ಕೋಟಿ ವೀಕ್ಷಕರನ್ನು ಹೊಂದಿರುವ ಸಂವಾದ್ ಸಮಾಚಾರ್ 'ಇನ್‌ಸೈಡ್ ಇಂಡಿಯಾ' ಎಂದು ಬದಲಾಯಿಸಿದೆ. ನೇಷನ್ 24 ಅವರ ವೀಡಿಯೊಗಳನ್ನು 43.37 ಲಕ್ಷ ಬಾರಿ ವೀಕ್ಷಿಸಲಾಗಿದ್ದು ಅದರ ಹೆಸರನ್ನು 'ನೇಷನ್ ನೈಟ್' ಎಂದು ಬದಲಾಯಿಸಲಾಗಿದೆ ಎಂದು ತಿಳಿದು ಬಂದಿದೆ.
ಹೇಳಿಕೆಯ ಪ್ರಕಾರ, ಈ ಚಾನಲ್‌ಗಳು ಚುನಾವಣೆಗಳು, ಸುಪ್ರೀಂ ಕೋರ್ಟ್‌ನಲ್ಲಿನ ಪ್ರಕ್ರಿಯೆಗಳು, ಭಾರತದ ಸಂಸತ್ತು ಮತ್ತು ಕೇಂದ್ರ ಸರ್ಕಾರದ ಕಾರ್ಯಚಟುವಟಿಕೆಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದವು ಎನ್ನಲಾಗಿದೆ. ತಮ್ಮ ಸುಳ್ಳು ಸುದ್ದಿಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ನಿಷೇಧ ಮತ್ತು ಭಾರತದ ರಾಷ್ಟ್ರಪತಿ ಮತ್ತು ಮುಖ್ಯ ನ್ಯಾಯಾಧೀಶರು ಸೇರಿದಂತೆ ಹಿರಿಯ ಸಾಂವಿಧಾನಿಕ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ಚಾನೆಲ್‌ಗಳು ನಕಲಿ ಕ್ಲಿಕ್‌ಬೈಟ್ ಮತ್ತು ಥಂಬ್‌ನೇಲ್‌ಗಳು ಮತ್ತು ದೂರದರ್ಶನ ಸುದ್ದಿ ನಿರೂಪಕರ ಚಿತ್ರಗಳನ್ನು ಬಳಸಿಕೊಂಡು ವೀಕ್ಷಕರನ್ನು ಸುದ್ದಿ ಅಧಿಕೃತ ಎಂದು ನಂಬುವಂತೆ ದಾರಿ ತಪ್ಪಿಸುತ್ತಿದ್ದವು. ಅವರು ಪ್ರಕಟಿಸಿದ ವೀಡಿಯೊಗಳಿಂದ ಹಣ ಗಳಿಸಲು ತಮ್ಮ ಚಾನಲ್‌ಗಳಿಗೆ ಜನರ ವೀಕ್ಷಣೆಯನ್ನು ಹೆಚ್ಚಿಸುತ್ತಿದ್ದವು ಎಂದು ಪಿಐಬಿ ಹೇಳಿಕೆ ತಿಳಿಸಿದೆ.












Click it and Unblock the Notifications