ಮಾರ್ಚ್ 13ರಿಂದ ಹಣ ವಿಥ್ ಡ್ರಾಗೆ ಯಾವುದೇ ನಿರ್ಬಂಧವಿಲ್ಲ

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 8: ಫೆಬ್ರವರಿ 20ರಿಂದ ಉಳಿತಾಯ ಖಾತೆಯಿಂದ ವಿಥ್ ಡ್ರಾ ಮಾಡುವ ವಾರದ ಮಿತಿಯನ್ನು 50 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ಘೋಷಿಸಿದೆ. ಮಾರ್ಚ್ 13ರಿಂದ ನಗದು ವಿಥ್ ಡ್ರಾದ ಎಲ್ಲ ಮಿತಿಯನ್ನು ತೆಗೆದುಹಾಕಲಾಗುವುದು ಎಂದು ತಿಳಿಸಲಾಗಿದೆ.

ಫೆಬ್ರವರಿ 1ರಂದು ಆರ್ ಬಿಐ ಚಾಲ್ತಿ ಖಾತೆಯ ಹಣ ವಿಥ್ ಡ್ರಾ ಮಿತಿಯನ್ನು ಹಿಂಪಡೆದಿತ್ತು. ಆದರೆ ಉಳಿತಾಯ ಖಾತೆಗೆ ವಾರದ ಮಿತಿಯನ್ನು 24 ಸಾವಿರ ಹಾಗೇ ಉಳಿಸಿತ್ತು. ಕಳೆದ ವರ್ಷ ನವೆಂಬರ್ 8ರಂದು 500, 1000 ರುಪಾಯಿ ಹಳೆ ನೋಟುಗಳನ್ನು ಹಿಂಪಡೆದ ನಂತರ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ಹಣ ತೆಗೆದುಕೊಳ್ಳಲು ಮಿತಿ ಹಾಕಲಾಗಿತ್ತು.[ಹಠಾತ್ ನೋಟ್ ಬ್ಯಾನ್ ನಿಂದ ಸಂಕಷ್ಟ ಆಯ್ತು ಎಂದ ಊರ್ಜಿತ್]

Cash withdrawal limits to go from March 13: RBI

ಹೊಸ ನೋಟುಗಳನ್ನು ಅಗತ್ಯ ಸಂಖ್ಯೆಯಲ್ಲಿ ಪೂರೈಸಲು ಹಾಗೂ ಎಟಿಎಂಗಳಲ್ಲಿ ತಾಂತ್ರಿಕ ಬದಲಾವಣೆ ಮಾಡಲು ಸ್ವಲ್ಪ ಸಮಯ ತೆಗೆದುಕೊಂಡಿತ್ತು. ವ್ಯವಸ್ಥೆ ಒಂದು ಹಂತಕ್ಕೆ ಹತೋಟಿಗೆ ಬರುತ್ತಿದ್ದಂತೆ ನಗದು ವಿಥ್ ಡ್ರಾ ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಡಿಲಿಸುತ್ತಿದೆ. ಇದೀಗ ಉಳಿತಾಯ ಖಾತೆದಾರರಿಗೆ ಮಾರ್ಚ್ 13ರಿಂದ ಹಣ ತೆಗೆದುಕೊಳ್ಳುವ ಮಿತಿಯನ್ನು ತೆಗೆಯಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Reserve Bank of India (RBI) announced today that withdrawal limit for savings accounts would be increased to Rs 50,000 a week from February 20. All cash withdrawal limits will be lifted from March 13.
Please Wait while comments are loading...