ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶ್ಲೀಲ ವೆಬ್ ಸೈಟ್ ತಡೆ ಅಸಾಧ್ಯ: ಐಎಸ್ ಪಿಎಐ

By Mahesh
|
Google Oneindia Kannada News

ನವದೆಹಲಿ, ಜ. 28: ಕೋರ್ಟ್ ಅಥವಾ ಸರ್ಕಾರದ ಆದೇಶವಿಲ್ಲದೆ ಪ್ರಾಯೋಗಿಕವಾಗಿ ಹಾಗೂ ತಾಂತ್ರಿಕವಾಗಿ ಅಶ್ಲೀಲ ಸೈಟ್‌ಗಳನ್ನು ತಡೆಯಲು ತಮ್ಮಿಂದ ಸಾಧ್ಯವಿಲ್ಲ ಎಂದು ಇಂಟರ್ನೆಟ್ ಸೇವಾ ಪೂರೈಕೆದಾರರ(ಐಎಸ್ ಪಿಎ ಐ) ಸಂಘಟನೆ ಸುಪ್ರೀಂ ಕೋರ್ಟಿಗೆ ತಿಳಿಸಿದೆ. ಮಕ್ಕಳ ಪೋರ್ನೋಗ್ರಾಫಿ ಇರಲಿ ಮತ್ತೆ ಯಾವುದೇ ಅಶ್ಲೀಲ ತಾಣಗಳಿರಲಿ ನಿಯಂತ್ರಣ, ಕಡಿವಾಣ ನಮ್ಮಿಂದ ಆಗುವುದಿಲ್ಲ. ನಾವು ಇಂಟರ್ನೆಟ್ ಪೂರೈಕೆ ಮಾಡುತ್ತೇವೆ ಅಷ್ಟೇ ಎಂದು ಐಎಸ್ ಪಿಎಐ ಹೇಳಿದೆ.

ವೆಬ್ ಸೈಟ್ ನಲ್ಲಿನ ಆಕ್ಷೇಪಕಾರಿ ಅಂಶಗಳಿಗೆ ತಮ್ಮನ್ನು ಹೊಣೆಗಾರರನ್ನಾಗಿಸಲು ಸಾಧ್ಯವಿಲ್ಲ ಎಂದು ಕೋರ್ಟಿಗೆ ಸ್ಪಷ್ಟನೆ ನೀಡಿದೆ. ವೆಬ್ ಸೈಟ್ ಗಳನ್ನು ತಡೆಯುವಂತೆ ಆದೇಶಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಅನ್ವಯ ISPAI ಸಂಘಟನೆಯು ಕೋರ್ಟ್ ಗೆ ತನ್ನ ಉತ್ತರವನ್ನು ಸಲ್ಲಿಸಿತ್ತು. ವೆಬ್ ಸೈಟ್ ವ್ಯಾಪ್ತಿ ಬಹಳ ವಿಶಾಲವಾಗಿರುವುದರಿಂದ ಅಶ್ಲೀಲತೆಯ ಬಗ್ಗೆ ವರ್ಣಿಸುವ ಅಗತ್ಯವಿದೆಯೇ ಎಂದು ಸಂಘಟನೆ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

Can’t ban child porn sites without ruling: ISPs to Supreme Court

ವೈದ್ಯಕೀಯ ಅಥವಾ ಏಡ್ಸ್ ಜಾಗೃತಿ ವೆಬ್ ಸೈಟ್ ಗಳು ಅಶ್ಲೀಲವೇ? ಖಜುರಾಹೊ ಛಾಯಾಚಿತ್ರಗಳನ್ನು ಈ ಹೆಸರಿನಿಂದ ಕರೆಯಬಹುದೇ? ಒಬ್ಬನ ಅಶ್ಲೀಲತೆಯು ಇನ್ನೊಬ್ಬನ ಉನ್ನತ ಕಲೆಯಾಗಿ ಮಾರ್ಪಾಡಾಗುತ್ತದೆ ಎಂದು ಸಂಘಟನೆ ತನ್ನ ಅರ್ಜಿಯಲ್ಲಿ ತಿಳಿಸಿತ್ತು.

ಸುಮಾರು 20 ಕೋಟಿಗೂ ಅಧಿಕ ಪೋರ್ನ್ ವಿಡಿಯೋ ಅಥವಾ ಕ್ಲಿಪ್ಪಿಂಗ್ ಮಾರುಕಟ್ಟೆಯಲ್ಲಿ ಮುಕ್ತವಾಗಿ ದೊರೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಇದೆಲ್ಲವೂ ಇಂಟರ್ನೆಟ್ ನಿಂದ ಡೌನ್ ಲೋಡ್ ಮಾಡಲ್ಪಟ್ಟಿದ್ದು ಇದಕ್ಕೆ ISPAI ಹೊಣೆ ಹೊತ್ತುಕೊಳ್ಳಬೇಕು. ಇಲ್ಲದಿದ್ದರೆ ಕ್ರೈಂಗಳು ಹೆಚ್ಚಾಗುತ್ತದೆ ಎಂದು ವಕೀಲ ವಿಜಯ್ ಪಂಜವಾನಿ ಅವರು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರವಾಗಿ Internet Service Providers Association of India (ISPAI) ಸೋಮವಾರ ಕೋರ್ಟಿಗೆ ತನ್ನ ಪ್ರತಿಕ್ರಿಯೆ ನೀಡಿದೆ.

English summary
Internet Service Providers Association of India (ISPAI) on Monday told the Supreme Court that they were mere conduits for providing internet access to customers and could not ban websites featuring child pornography without orders from the court or the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X