ವೈಟಿಂಗ್‌ ಟಿಕೆಟ್‌ನೊಂದಿಗೆ ಪ್ರಯಾಣ ಮಾಡಬಹುದೇ? ರೈಲು ನಿಯಮ ಹೇಳುವುದೇನು?

ರೈಲಿನಲ್ಲಿ ದಿನಕ್ಕೆ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಾರೆ. ಹಾಗಾಗಿ ಎಲ್ಲರಿಗೂ ಕನ್‌ಫರ್ಮ್‌ ಟಿಕೆಟ್‌ ಸಿಗುವುದಿಲ್ಲ. ಕನ್‌ಫರ್ಮ್‌ ಟಿಕೆಟ್‌ ಸಿಗಬೇಕಾದರೆ ೩ ತಿಂಗಳಿಗಿಂತ ಮುಂಚೆಯೇ ಬುಕ್‌ ಮಾಡಬೇಕಾಗುತ್ತದೆ. ಇಲ್ಲಾ ತತ್ಕಾಲ್‌ ಟಿಕೆಟ್‌ ಬುಕ್‌ ಮಾಡಬೇಕಾಗುತ್ತದೆ. ಅದರಲ್ಲೂ ಎಲ್ಲರಿಗೂ ಕನ್‌ಫರ್ಮ್‌ ಟಿಕೆಟ್‌ ಸಿಗುತ್ತದೆ ಎಂದಲ್ಲ. ಟಿಕೆಟ್‌ ಕನ್‌ಫರ್ಮ್‌ ಆಗದೆ ಹೋದರೆ ವೈಟಿಂಗ್‌ ಲಿಸ್ಟ್‌ನಲ್ಲಿ ನಮ್ಮ ಹೆಸರು ಬರುತ್ತದೆ.

ರೈಲಿನಲ್ಲಿ ಟ್ರಾವೆಲ್‌ ಮಾಡಲು ನಮ್ಮಲ್ಲಿ ಟಿಕೆಟ್‌ ಇದ್ದರೆ ಸಾಕು ಎನ್ನುವ ಯೋಚನೆ ಅನೇಕರಿಗಿದೆ. ಆದರೆ ಇದು ಸರಿಯಲ್ಲ. ಕೇವಲ ಟಿಕೆಟ್ ಇದೆ ಎಂದ ಮಾತ್ರಕ್ಕೆ ಪ್ರಯಾಣಿಕರು ಯಾವುದು ಬೇಕೋ ಆ ಕೋಚ್ ಹತ್ತುವ ಹಾಗಿಲ್ಲ. ರೈಲು ಹತ್ತುವ ಮುನ್ನ ಟಿಕೆಟ್ ಸ್ಟೇಟಸ್‌, ಬುಕಿಂಗ್ ವಿಧಾನ ಮತ್ತು ಪ್ರಯಾಣಿಸುತ್ತಿರುವ ಕೋಚ್ ಅನ್ನು ಪರಿಗಣಿಸುವುದು ಬಹಳ ಮುಖ್ಯ.

passenger

ಟಿಕೆಟ್ ಸ್ಟೇಟಸ್‌ ಬಹಳ ಮುಖ್ಯ

ರಿಸರ್ವ್ಡ್‌ ಕೋಚ್‌ನಲ್ಲಿ ಪ್ರಯಾಣಿಸಲು ಕನ್‌ಫರ್ಮ್‌ ಟಿಕೆಟ್‌ನ ಅಗತ್ಯವಿರುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ, ಜನರಲ್‌ ಅಥವಾ ಅನ್‌ ರಿಸರ್ವ್ಡ್‌ ಕೋಚ್‌ನಲ್ಲಿ ಪ್ರಯಾಣಿಸಲು ಕನ್‌ಫರ್ಮ್‌ ಟಿಕೆಟ್‌ನ ಅಗತ್ಯವಿರುತ್ತದೆ. ಆದ್ದರಿಂದ, ರೈಲು ಹತ್ತುವ ಮೊದಲು, ನಿಮ್ಮ ಟಿಕೆಟ್ ಪ್ರಯಾಣಕ್ಕೆ ಮಾನ್ಯವಾಗಿದೆಯೇ? ನೀವು ಯಾವ ಕೋಚ್‌ನಲ್ಲಿ ಪ್ರಯಾಣಿಸಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳುವುದು ಮುಖ್ಯ. ಇಲ್ಲವಾದರೆ, ದಾರಿಯುದ್ದಕ್ಕೂ ತಪಾಸಣೆಗಳ ತೊಂದರೆ ಮತ್ತು ದಂಡದ ಅಪಾಯವನ್ನು ಎದುರಿಸಬೇಕಾಗುತ್ತದೆ.

ವೈಟಿಂಗ್‌ ಲಿಸ್ಟ್‌ ಟಿಕೆಟ್‌ಗಳು

ವೈಟಿಂಗ್‌ ಲಿಸ್ಟ್‌ ಟಿಕೆಟ್ ಎಂದರೆ ರಿಸರ್ವ್‌ ಮಾಡಿದ ಕೋಚ್‌ನಲ್ಲಿ ಇನ್ನೂ ನಿಮ್ಮ ಟಿಕೆಟ್‌ ಕನ್‌ಫರ್ಮ್‌ ಆಗಿಲ್ಲ ಎಂದರ್ಥ. ಹಾಗಾಗಿ ವೈಟಿಂಗ್‌ ಲಿಸ್ಟ್‌ ಟಿಕೆಟ್‌ ಹಿಡಿದುಕೊಂಡು ಎಸಿ ಅಥವಾ ಸ್ಲೀಪರ್ ಕೋಚ್ ಸೀಟನ್ನು ಬಳಸುವುದು ಸಾಧ್ಯವಾಗುವುದಿಲ್ಲ. ನಿಮ್ಮ ಟಿಕೆಟ್ ಕನ್‌ಫರ್ಮ್‌ ಆಗಿಲ್ಲ ಎಂದಾದರೆ ಯಾವುದೇ ಸೀಟಿನಲ್ಲಿ ಕುಳಿತು ಪ್ರಯಾಣಿಸುವ ಹಕ್ಕು ಇರುವುದಿಲ್ಲ.

ಕೌಂಟರ್ ಟಿಕೆಟ್ ನಿಯಮ

ರೈಲ್ವೆ ರಿಸರ್ವೇಶನ್‌ ಕೌಂಟರ್‌ನಿಂದ ಖರೀದಿಸಿದ ಟಿಕೆಟ್‌ ಕನ್‌ಫರ್ಮ್‌ ಆಗದೆ ವೈಟಿಂಗ್‌ನಲ್ಲಿದ್ದರೆ ರೈಲ್ವೆ ನಿಯಮಗಳ ಪ್ರಕಾರ, ಅದನ್ನು ಜನರಲ್‌ ಅಥವಾ ಅನ್‌ರಿಸರ್ವ್ಡ್‌ ಕೋಚ್ ಪ್ರಯಾಣಕ್ಕಾಗಿ ಬಳಸಬಹುದು. ಆದರೆ, ಇದನ್ನು ಬಳಸಿಕೊಂಡು ಸ್ಲೀಪರ್ ಅಥವಾ ಎಸಿ ಕೋಚ್‌ನಲ್ಲಿ ಪ್ರಯಾಣಿಸುವ ಹಾಗಿಲ್ಲ. ಜನರಲ್‌ ಕೋಚ್‌ನಲ್ಲಿ ಪ್ರಯಾಣಿಸುವಾಗಲೂ ಉಳಿದ ಟಿಕೆಟ್ ನಿಯಮಗಳನ್ನು ಪಾಲಿಸಬೇಕು.

ಆನ್‌ಲೈನ್ ಟಿಕೆಟ್‌ಗಳು

ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಇ-ಟಿಕೆಟ್ ಚಾರ್ಟ್ ರೆಡಿಯಾದ ಮೇಲೂ ವೈಟಿಂಗ್‌ನಲ್ಲಿಯೇ ಇದ್ದರೆ ಟಿಕೆಟ್ ಆಟೋಮ್ಯಾಟಿಕ್‌ ಆಗಿ ಕ್ಯಾನ್ಸಲ್‌ ಆಗುತ್ತದೆ. ಆಗ ಆ ಟಿಕೆಟ್ ಆಧಾರದಲ್ಲಿ ಪ್ರಯಾಣಿಸುವುದು ಸಾಧ್ಯವಿಲ್ಲ. ರೈಲು ಹೊರಡುವ ಮೊದಲು ಇ-ಟಿಕೆಟ್‌ನ ಫೈನಲ್‌ ಸ್ಟೇಟಸ್‌ ಅನ್ನು ಪರಿಶೀಲಿಸುವುದು ಮುಖ್ಯ.

ಪ್ರಯಾಣದ ಮೊದಲು ಸ್ಟೇಟಸ್‌ ಪರಿಶೀಲಿಸಿಕೊಳ್ಳಿ

ರೈಲು ಹತ್ತುವ ಮೊದಲು ನಿಮ್ಮ ಟಿಕೆಟ್ ಸ್ಟೇಟಸ್‌ ಅನ್ನು ಪರಿಶೀಲಿಸುವುದು ಬಹಳ ಮುಖ್ಯವಾಗಿರುತ್ತದೆ. ಒಂದು ವೇಳೆ ನಿಮ್ಮ ಟಿಕೆಟ್ ಕನ್‌ಫರ್ಮ್‌ ಆಗಿದ್ದರೆ ಟಿಕೆಟ್‌ನಲ್ಲಿ ಸೂಚಿಸಲಾದ ಸೀಟು ಅಥವಾ ಬರ್ತ್‌ಗೆ ಅನುಗುಣವಾಗಿ ಪ್ರಯಾಣಿಸುವುದು ಸಾಧ್ಯವಾಗುವುದು. ಆದರೆ, ರೆಸರ್ವೇಶನ್‌ ಚಾರ್ಟ್ ರೆಡಿಯಾದ ನಂತರ ವೈಟಿಂಗ್‌ನಲ್ಲಿಯೇ ಇರುವ ಇ-ಟಿಕೆಟ್ ಪ್ರಯಾಣಕ್ಕೆ ಮಾನ್ಯವಾಗಿರುವುದಿಲ್ಲ. ಆದ್ದರಿಂದ, ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಅಂಶವೆಂದರೆ ಟಿಕೆಟ್ ಬುಕ್ ಮಾಡಿದ ಕೂಡಲೇ ಪ್ರಯಾಣಿಸಲು ಅನುಮತಿ ಸಿಗುತ್ತದೆ ಎಂದಲ್ಲ.

ಟಿಟಿಇ ಕ್ರಮ

ರಿಸರ್ವ್ಡ್‌ ಕೋಚ್‌ನಲ್ಲಿ ಕನ್‌ಫರ್ಮ್‌ ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಿರುವ ವೇಳೆ ಸಿಕ್ಕಿಬಿದ್ದರೆ, ಟಿಟಿಇ ಟಿಕೆಟ್ ಬಗ್ಗೆ ವಿಚಾರಿಸಬಹುದು. ಅನ್ವಯವಾಗುವ ನಿಯಮಗಳನ್ನು ಅವಲಂಬಿಸಿ, ದಂಡ ವಿಧಿಸಬಹುದು. ಕಾಯ್ದಿರಿಸಿದ ಕೋಚ್‌ನಿಂದ ಹೊರಹೋಗುವಂತೆ ಕೇಳಬಹುದು. ಆದ್ದರಿಂದ, ಪ್ರಯಾಣಿಕರು ರಿಸರ್ವ್ಡ್‌ ಟಿಕೆಟ್ ಅನ್ನು ಕನ್‌ಫರ್ಮ್‌ ಟಿಕೆಟ್ ಎಂದು ತಪ್ಪಾಗಿ ಭಾವಿಸಬಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+