ಮಾನವ ಮುಖ ಹೋಲುವ ಕರು ಆರಾಧನೆ ಮಾಡಿದ ಉತ್ತರ ಪ್ರದೇಶದ ಜನ
ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ಮಾನವನ ಮುಖವುಳ್ಳ ಕರು ಜನನ, ಪ್ರಸವವಾಗಿ ಸುಮಾರು ಒಂದು ಗಂಟೆಯ ನಂತರ ತೀರಿಕೊಂಡ ಕರು. ಆದರೂ, ಜನರಿಂದ ವಿಷ್ಣು ಅವತಾರವೆಂದು ಪೂಜೆ.
ಲಕ್ನೋ, ಜೂನ್ 6: ಮುಜಫ್ಫರ್ ನಗರದ ಹಸು ಸಾಕಣೆ ಕೇಂದ್ರದಲ್ಲಿ ಜನಿಸಿದ ಮಾನವನ ಮುಖ ಹೋಲುವ ಕರುವನ್ನು ಜನರು ಪೂಜಿಸಿ ಆರಾಧಿಸಿದ್ದಾರೆ.
ಮಾನವನ ಮುಖ ಹೋಲುವ ಈ ಕರು ಜನಿಸಿ ಕೆಲವೇ ಗಂಟೆಗಳಲ್ಲಿ ಅದು ಅಸುನೀಗಿದೆ. ಆದರೂ, ಆ ಕರುವಿನ ಕಳೇಬರಕ್ಕೆ ಜನರು ಹಾಕ ಹಾಕಿ, ತಿಲಕವನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ.

ಇದು ಸಾಕ್ಷಾತ್ ವಿಷ್ಣುವಿನ ಅವತಾರವೆಂದು ಭಾವಿಸಿದ ಜನರು, ಇದಕ್ಕೆ ಗೋಕರ್ಣ ಎಂದೂ ನಾಮಕರಣ ಮಾಡಿದ್ದಾರೆ.
ಈ ಸುದ್ದಿ ವಾಟ್ಸಾಪ್ ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ದೂರದೂರುಗಳವರೆಗೂ ಹರಿದಾಡಿ, ಮುಜಫ್ಫರ್ ನಗರದ ಸುತ್ತಲಿನ ಜನರೆಲ್ಲಾ ಈ ಕರುವನ್ನು ನೋಡಲು ಆಗಮಿಸಿದ್ದಾರೆ. ಇದರಿಂದ ಹಸು ಸಾಕಣೆ ಕೇಂದ್ರ ಪ್ರವಾಸಿಗರ ಕೇಂದ್ರಬಿಂದುವಾಗಿ ಹೋಗಿದೆ.
ಕರುವಿನ ಮುಖದಲ್ಲಿ ಮೂಗು, ಬಾಯಿ, ಕಿವಿಗಳೆಲ್ಲವೂ ಮನುಷ್ಯನ ಮೂಗು, ಬಾಯಿ, ಕಿವಿಗಳಂತೆಯೇ ಹೋಲುತ್ತಿದ್ದುದು ಎಲ್ಲರ ಆಕರ್ಷಕಣೆ ಕಾರಣವಾಗಿತ್ತು.












Click it and Unblock the Notifications