Bypoll Results 2026: ವಿಜಯ್ ಟಿವಿಕೆಗೆ ಡಬಲ್ ಗೆಲುವು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಅಬ್ಬರ! ಅಸ್ಸಾಂ, ಪುದುಚೆರಿ ಯಾರ ಪಾಲು?

ನವದೆಹಲಿ: ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿಯಾದ್ಯಂತ ಆರು ಉಪಚುನಾವಣೆಗಳ ಮತ ಎಣಿಕೆ ಇಂದು ಶುಕ್ರವಾರ (ಅಕ್ಟೋಬರ್ 9) ಪ್ರಕಟವಾಗಿದೆ. ಈ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಸವಾಲಾಗಿದ್ದ ಕ್ಷೇತ್ರವನ್ನು ಸಿಎಂ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಈ ಮೂಲಕ ಆಡಳಿತಾರೂಢ ಟಿವಿಕೆಗೆ ಸಿಹಿ ಸುದ್ದಿ ಸಿಕ್ಕಿದೆ. ತಮಿಳುನಾಡಿನ ಧಾರಾಪುರಂ ಉಪಚುನಾವಣೆಯಲ್ಲಿ TVK ಗೆಲುವು ಸಾಧಿಸಿದೆ, ಟಿವಿಕೆ ಸತ್ಯಭಾಮಾ ಅವರು ಒಟ್ಟು 9,471 ಬಹುಮತಗಳಿಂದ ಡಿಎಂಕೆ ಎಸ್. ಸುಗಣ್ಯ ಅವರನ್ನು ಸೋಲಿಸಿ ಜಯಭೇಟಿ ಬಾರಿಸಿದ್ದಾರೆ.

ವಿಜೇತ ಸತ್ಯಭಾಮಾ ಅವರು ಒಟ್ಟು 66,841 ಮತಗಳೊಂದಿಗೆ ಗೆದ್ದರೆ,, ಡಿಎಂಕೆಯ ಸುಗಣ್ಯ ಅವರು 57,370 ಮತ ಪಡೆದು ಸೋತರು. ಮತ್ತೊಂದು ಮಧುರಾಂತಕಂ ಕ್ಷೇತ್ರದ ಉಪಚುನಾವಣೆಯಲ್ಲಿ ಟಿವಿಕೆ (TVK) ಅಭ್ಯರ್ಥಿ ಮರಗಥಂ ಕುಮಾರವೇಲ್ 19,241 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

Bypoll Results 2026

ಟಿವಿಕೆ ಅಭ್ಯರ್ಥಿ ಮರಗಥಂ ಕುಮಾರವೇಲ್ ಅವರು 70,916 ಮತಗಳನ್ನು ಪಡೆದು ವಿಜಯ ಸಾಧಿಸಿದರು. ಇಲ್ಲಿ ಡಿಎಂಕೆ ಅಭ್ಯರ್ಥಿ ಐ. ಪರಂತಮನ್ ಅವರು 19,241 ಮತಗಳ ಅಂತರದಿಂದ ಟಿವಿಕೆ ಮುಂದೆ ಪರಾಭವಗೊಂಡರು. ಎಐಎಡಿಎಂಕೆ (AIADMK) ಅಭ್ಯರ್ಥಿ ಕವಿತಾ ಸಂಪತ್ ಒಟ್ಟು 46,431 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿದರು.

ಟಿವಿಕೆ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೇಗೆ ಗೆದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತೋ ಅದೇ ರೀತಿ ಉಪ ಚುನಾವಣೆಯಲ್ಲೂ ಗೆಲ್ಲುವ ಮೂಲಕ ಎದುರಾಳಿಗಳಿಗೆ ಸಿಎಂ ವಿಜಯ್ ಅವರು ತಕ್ಕ ಉತ್ತರ ನೀಡಿದ್ದಾರೆ. ಡಿಎಂಕೆ, ಎಐಎಡಿಎಂಕೆಗೆ ವಿಪಕ್ಷ ಸ್ಥಾನಗಳೇ ಗತಿಯಾಗಿವೆ.

ಬಿಜೆಪಿಯ ಗೆಲುವಿನ ಆರ್ಭಟ ಜೋರಿದೆ

ಇನ್ನೂ ಪಶ್ಚಿಮ ಬಂಗಾಳದ ವಿಧಾನಸಭೆಯ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ.ಪಶ್ಚಿಮ ಬಂಗಾಳದ ನಂದಿಗ್ರಾಮ ಕ್ಷೇತ್ರವು ಅತ್ಯಂತ ಮಹತ್ವ ಪಡೆದಿತ್ತು. ಇಲ್ಲಿ ದೀದಿ ಮತ್ತು ಸುವೆಂದು ಅಧಿಕಾರಿ ಸ್ಪರ್ಧಿಸಿದ್ದರು. ಎರಡರದಲ್ಲಿ ಗೆದ್ದ ಹಿನ್ನೆಲೆ ಬಿಜೆಪಿಯು ಭವಾನಿಪುರ ಉಳಿಸಿಕೊಂಡು ನಂದಿಗ್ರಾಮ ಕೈ ಬಿಟ್ಟಿತ್ತು. ಇದೀಗ ಇಲ್ಲಿ ಬಿಜೆಪಿ ಅಧಿಕಾರ ಹಿಡಿದುಕೊಂಡಿದೆ. ಇದರೊಂದಿಗೆ ಮತ್ತೊಂದು ಉಪಚುನಾವಣಾ ಕಣವಾದ ಮುಸ್ಲಿಮರು ಹೆಚ್ಚಿರುವ ರೇಜಿನಗರದಲ್ಲಿ 75,000ಕ್ಕೂ ಅಧಿಕ ಮತಗಳಿಂದ ಕಮಲ ಅರಳಿದ್ದು, ಟಿಎಂಸಿ, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳಿಗೆ ಬಿಜೆಪಿ ಶಾಕ್ ನೀಡಿದೆ.

ನಂದಿಗ್ರಾಮದ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ವಿರುದ್ಧ 1,22,753ಕ್ಕೂ ಅಧಿಕ ಮತ ಪಡೆದು ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ. ಫಲಿತಾಂಶಗಳನ್ನು ಅವುಗಳ ರಾಜಕೀಯ ಪರಿಣಾಮಗಳಿಗಾಗಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಗುತ್ತಿದೆ. ಸ್ಪರ್ಧೆಗಳು ಐದು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಸ್ಥಾನವನ್ನು ಒಳಗೊಂಡಿವೆ. ಇದರ ಫಲಿತಾಂಶಗಳ ಮೇಲೆ ರಾಜಕೀಯ ಪಕ್ಷಗಳು ತನ್ನದೇ ಆದ ರೀತಿಯಲ್ಲಿ ಲೆಕ್ಕಾಚಾರದಲ್ಲಿ ಮುಳುಗಿವೆ.

ಅಸ್ಸಾಂ ಉಪಚುನಾವಣೆಯಲ್ಲೂ ಬಿಜೆಪಿಗೆ ಗೆಲುವು

ಅಸ್ಸಾಂ ರಾಜ್ಯದಲ್ಲಿನ ನಾಗಾಂವ್ ಲೋಕಸಭಾಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೇವಶಿಶ್ ಶರ್ಮಾ 1.1 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿಯಾದ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿರುದ್ಧ ಬಿಜೆಪಿ ಬರೋಬ್ಬರಿ 1,10,629 ಮತಗಳಿಂದ ಹಿಮ್ಮೆಟ್ಟಿಸಿದರು .ಶರ್ಮಾ ಅವರು 4.20ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಬದ್ರುದ್ದೀನ್ ಅಜ್ಮಲ್ ಅವರು ಕೇವಲ 3,10,076 ಮತಗಳಿಗೆ ತೃಪ್ತಿಪಟ್ಟುಕೊಂಡರು. ಇನ್ನೂ ಅತೀವ ಪೈಪೋಟಿ ನೀಡಿದರೂ ಸಹಿ ಕಾಂಗ್ರೆಸ್ ಅಭ್ಯರ್ಥಿ ಸಿಬಮೋನಿ ಬೋರಾ ಅವರು 76000 ಮತಗಳ ಪಡೆದು ಮೂರನೇ ಸ್ಥಾನಕ್ಕೆ ಇಳಿದರು. ಈ ಮೂಲಕ ಕಾಂಗ್ರೆಸ್ ಮತ್ತೊಂದು ಹಿನ್ನಡೆ ಎದುರಿಸಿತು.

ಪುದುಚೇರಿ ಗೆಲುವು ಯಾರಿಗೆ?

ಇಲ್ಲಿನ ತಟ್ಟಂಚಾವಡಿ ಕ್ಷೇತ್ರದಲ್ಲಿ ಉಪಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ತಟ್ಟಂಚಾವಡಿ ಕ್ಷೇತ್ರದಲ್ಲಿ ಅಖಿಲ ಭಾರತ ಎನ್.ಆರ್. ಕಾಂಗ್ರೆಸ್ (AINRC) ಅಭ್ಯರ್ಥಿ ಅಶೋಕ್ ಆನಂದ್ ಜಯಗಳಿಸಿದ್ದಾರೆ.

ತಟ್ಟಂಚಾವಡಿ ಮತ್ತು ಮಂಗಳಂ - ಎರಡೂ ಕ್ಷೇತ್ರಗಳಿಂದ ಗೆದ್ದಿದ್ದ ಮುಖ್ಯಮಂತ್ರಿ ಹಾಗೂ 'ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್' ಮುಖ್ಯಸ್ಥ ಎನ್. ರಂಗಸ್ವಾಮಿ ಅವರು ಮಂಗಳಂ ಉಳಿಸಿಕೊಂಡರು. ತಟ್ಟಂಚಾವಡಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಈ ಕ್ಷೇತ್ರ ತೆರವಾಗಿದ್ದು, ಉಪ ಚುನಾವಣೆ ನಡೆದಿದ್ದು, ಇದೀಗ AINRC ಪಕ್ಷದ ಅಶೋಕ್ ಅವರು 8,482 ಬಹುಮತಗಳಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿನಯಾಗಂ ಅವರು 4,876 ಮತಗಳ ಮೂಲಕ ಹಿನ್ನಡೆ ಅನುಭವಿಸಿದ್ದಾರೆ ಎಂದು ಚನಾವಣೆ ಆಯೋಗ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+