Benagaluru Real Estate: ಕೇಂದ್ರ ಬಜೆಟ್‌ನಲ್ಲಿ ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್‌ಗಳ ಸ್ಥಾಪನೆ ಘೋಷಣೆ

ಬೆಂಗಳೂರು: ಕೇಂದ್ರ ಬಜೆಟ್ 2026 ಮಂಡನೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (CPSE) ಒಡೆತನದ ಭೂಮಿ ಹಾಗೂ ಆಸ್ತಿ ಹಿಡುವಳಿಗಳ ಮರುಬಳಕೆ ಹಾಗೂ ಹಣಗಳಿಕೆಗೆ ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್‌ಗಳನ್ನು (REITs) ಸ್ಥಾಪಿಸಲಾಗುವುದು ಎಂದು ಹೊಸ ಉಪಕ್ರಮ ಘೋಷಿಸಿದ್ದಾರೆ.

ಇಂದಿನ ಈ REITs ಸ್ಥಾಪನೆ ಉದ್ದೇಶದಿಂದ ಸರ್ಕಾರಿ ರಿಯಲ್ ಎಸ್ಟೇಟ್ ಸ್ವತ್ತುಗಳ ಮಾರುಕಟ್ಟೆ-ಸಂಬಂಧಿತ ನಿರ್ವಹಣೆಯಲ್ಲಿ ಸಾಕಷ್ಟು ಬದಲಾವಣೆಯ ಮುನ್ಸೂಚನೆ ಅಗಿದೆ. ಈ ಟ್ರಸ್ಟ್‌ಗಳ ರಚನೆಯಿಂದ ಬಳಕೆಯಾಗದ ದೊಡ್ಡ ಹಾಗೂ ಸಣ್ಣ ಭೂಮಿಗಳ ಹಣ ಗಳಿಸುವ ಸಾರ್ವಜನಿಕ ಭೂ ಹಿಡುವಳಿಗಳಿಂದ ದೀರ್ಘಕಾಲದ ಮೌಲ್ಯ ಉಳಿಸುವ ಗುರಿ ಇದೆ. ಇದರಿಂದ ಸರ್ಕಾರಿ ಅಧೀನದ ಸಂಸ್ಥೆಗಳಲ್ಲಿ ದಕ್ಷತೆ ಸುಧಾರಣೆ ಆಗಲಿದೆ.

Budget 2026 REITs

ಮೂಲಸೌಕರ್ಯ, ಹಣಕಾಸು ವ್ಯವಸ್ಥೆಗೆ ಬಲ

ಆಸ್ತಿ ಹಣಗಳಿಕೆಗೆ ಪ್ರಮುಖ ಮಾರ್ಗವಾಗಿ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳು (REITs) ನಿರ್ಣಾಯಕ ಪಾತ್ರ ವಹಿಸಲಿವೆ. ಬಜೆಟ್ ದೇಶದ ಮೂಲಸೌಕರ್ಯ ಮತ್ತು ನಗರ ಹಣಕಾಸು ವ್ಯವಸ್ಥೆಯನ್ನು ಟ್ರಸ್ಟ್‌ ಇನ್ನಷ್ಟು ಬಲಪಡಿಸುತ್ತದೆ ಎಂದು ಇಂಡಿಯನ್ ರೀಟ್ಸ್ ಅಸೋಸಿಯೇಷನ್ (ಐಆರ್‌ಎ) ತಿಳಿಸಿದೆ. ಬಂಡವಾಳವನ್ನು ಮರು ಬಳಕೆ ಮಾಡುವುದಕ್ಕೆ ವೇಗ ನೀಡುತ್ತವೆ. ಗುಣಮಟ್ಟದ ಆದಾಯ-ಉತ್ಪಾದಿಸುವ ಆಸ್ತಿಗಳಿಗೆ ಹೂಡಿಕೆದಾರರಿಗೆ ಪಾರದರ್ಶಕ ಮತ್ತು ನಿಯಂತ್ರಿತ ಮಾರ್ಗದಲ್ಲಿ ಪ್ರವೇಶ ಸಿಗಲಿದೆ ಎಂದು ಐಆರ್‌ಎ ಹೇಳಿದೆ.

ದೀರ್ಘಾವಧಿ ಹೂಡಿಕೆಗಳಿಗೆ ಅಗತ್ಯವಾದ ಬಂಡವಾಳ ಸೆಳೆತ

ವಿತ್ತ ಸಚಿವೆ ಘೋಷಿಸಿದ ರಿಯಲ್ ಎಸ್ಟೇಟ್ ಸಂಬಂಧ ಟ್ರಸ್ಟ್‌ ಉದ್ಯಾನವನಗಳು ಮತ್ತು ಶಾಪಿಂಗ್ ಮಾಲ್‌ಗಳಂತಹ ಬಾಡಿಗೆ ಆದಾಯ ನೀಡುವ ಆಸ್ತಿಗಳನ್ನು ಒಟ್ಟುಗೂಡಿಸುತ್ತವೆ. ಇದರಿಂದ ಹೂಡಿಕೆದಾರರು ಆಸ್ತಿ ಇಲ್ಲದೇ ಬಾಡಿಗೆ ಆದಾಯದಲ್ಲಿ ಪಾಲು ಹೊಂದಬಹುದಾಗಿದೆ. ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (CPSE) ಟ್ರಸ್ಟ್ ರಚನೆ ಬಗ್ಗೆ ಸಾಕಷ್ಟು ವರ್ಷಗಳಿಂದಲೂ ಚರ್ಚೆ ನಡೆಯುತ್ತಿತ್ತು. ಅದನ್ನು ಈ ಬಾರಿಯ ಬಜೆಟ್‌ನಲ್ಲಿ ಪಸ್ತಾಪಿಸಿ ರಚನೆ ಬಗ್ಗೆ ತಿಳಿಸಿದ್ದಾರೆ. ಇವು ದೀರ್ಘಾವಧಿ ಹೂಡಿಕೆಗಳಿಗೆ ಬೇಕಾದ ಬಂಡವಾಳ ಸೆಳೆಯುವಲ್ಲಿ ಯಶಸ್ವಿ ಆಗುತ್ತವೆ. ಆದರೆ ಸ್ವಂತ ಆಸ್ತಿಗಳಿಗೆ ನ್ಯಾಯಯುತ ಬಾಡಿಗೆ ಮೌಲ್ಯ ನಿಗದಿಪಡಿಸುವ ಸವಾಲಾಗುತ್ತದೆ ಎಂದು ತಜ್ಞರು ಊಹಿಸಿದ್ದಾರೆ.

ದೇಶದಲ್ಲಿ ಸದ್ಯಕ್ಕೆ ಇಂತಹ ಐದು ಟ್ರಸ್ಟ್‌ಗಳಿಗೆವೆ. ಅದರಲ್ಲಿ ಎಂಬೆಸಿ ಆಫೀಸ್ ಪಾರ್ಕ್ಸ್, ಮೈಂಡ್‌ಸ್ಪೇಸ್ ಬಿಸಿನೆಸ್ ಪಾರ್ಕ್ಸ್, ಬ್ರೂಕ್‌ಫೀಲ್ಡ್ ಇಂಡಿಯಾ ರಿಯಲ್ ಎಸ್ಟೇಟ್ ಟ್ರಸ್ಟ್, ನೆಕ್ಸಸ್ ಸೆಲೆಕ್ಟ್ ಟ್ರಸ್ಟ್ ಮತ್ತು ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್ ಗಳಿವೆ. ನೆಕ್ಸಸ್ ಸೆಲೆಕ್ಟ್ ಟ್ರಸ್ಟ್ ಮಾತ್ರ ಚಿಲ್ಲರೆ ವ್ಯಾಪಾರಕ್ಕೆ ಸಂಬಂಧಿಸಿದೆ. ಉಳಿದ ಎಲ್ಲ ಟ್ರಸ್ಟ್‌ಗಳು ವಾಣಿಜ್ಯ ಕಚೇರಿ ಆಸ್ತಿಗಳ ಮೇಲೆ ಕೇಂದ್ರೀಕೃತಗೊಂಡಿವೆ. ಈ ಐದು ಟ್ರಸ್ಟ್‌ಗಳು ದೇಶಾದ್ಯಮತ ಒಟ್ಉಟ ರೂ.2.3 ಟ್ರಿಲಿಯನ್‌ಗೂ ಅಧಿಕ ಆಸ್ತಿ ಮೌಲ್ಯ ಹೊಂದಿವೆ ಎಂದು ಐಆರ್‌ಎ ಮಾಹಿತಿ ನೀಡಿದೆ.

ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್‌ಗಳ ಮೂಲಕ ಪಿಎಸ್‌ಯುಗಳು ತಮ್ಮ ಬ್ಯಾಲೆನ್ಸ್ ಶೀಟ್‌ಗಳಿಂದ ಬಂಡವಾಳ ಬಿಡುಗಡೆ ಮಾಡಿಕೊಳ್ಳಲಿವೆ. ಮುಖ್ಯ ಆಸ್ತಿಗಳ ಮೇಲೆ ಕಾರ್ಯಾಚರಣಾ ನಿಯಂತ್ರಣ ಸಾಧಿಸಲಿವೆ. ಇನ್ನೂ ಸ್ಥಿರ ಆದಾಯದ ಆಸ್ತಿಗಳ ಮೇಲಿನ ಹೂಡಿಕೆದಾರರಿಗೆ ಪ್ರವೇಶ ದೊರೆತು ಮಾರುಕಟ್ಟೆಯಲ್ಲಿ ವಿಸ್ತರಣೆ ಸಾಧ್ಯವಾಗುತ್ತದೆ. ಇದು ಚಿಲ್ಲರೆ, ಸಾಂಸ್ಥಿಕ ಮತ್ತು ಆಸ್ತಿ ನಿರ್ವಹಣಾ ಹೂಡಿಕೆದಾರರಿಗೆ ಹೆಚ್ಚಿನ ಅನುಕೂಲ, ಲಾಭ ಒದಗಿಸುತ್ತದೆ ಎಂದು ವಿಶ್ಲೇಷಿಸಿಲಾಗಿದೆ. 2026ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಈ ಟ್ರಸ್ಟ್ ಕಚೇರಿಗಳ ನಿವ್ವಳ ಆದಾಯ ವಾಸಸ್ಥಳ ಮತ್ತು ಹಂಚಿಕೆಗಳಲ್ಲಿ ಬೆಳವಣಿಗೆ ಕಂಡು ಬಂರಲಿದೆ. ದೇಶೀಯ ಬೇಡಿಕೆಗೆ ತಕ್ಕಂತೆ ದ್ವಿತಿಯಾರ್ಧದಲ್ಲೂ ತಕ್ಕ ಪ್ರಗತಿ ಕಂಡು ಬರುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+