BSNL: ಗ್ರಾಹಕಸ್ನೇಹಿ ಯೋಜನೆ ಘೋಷಣೆ! ₹299ಗೆ ಇಷ್ಟೆಲ್ಲ ಸೇವೆ ಲಭ್ಯ
ಕೇಂದ್ರ ಸರ್ಕಾರಿ ಅಧೀನದ ಟೆಲಿಕಾಂ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಹೊಸ ಹೊಸ ಪ್ಲಾನ್ ಘೋಷಣೆ ಮಾಡುತ್ತಿದೆ. ಇತ್ತೀಚೆಗೆ ಆಗಸ್ಟ್ ಸ್ವಾತಂತ್ರೋತ್ಸವ ಪ್ರಯುಕ್ತ ಒಂದು ರೂಪಾಯಿಗೆ ಒಂದು ತಿಂಗಳ ಪ್ಲಾನ್ ಘೋಷಣೆ ಮಾಡಲಾಗಿತ್ತು. ಇದೀಗ ರೂಪಾಯಿ 299 ಗೆ ಗ್ರಾಹಕ ಸ್ನೇಹಿ ಪ್ಲಾನ್ ಅನ್ನು ಘೋಷಣೆ ಮಾಡಲಾಗಿದೆ. ಇದರ ವ್ಯಾಲಿಡಿಟಿ, ಸೇವೆಯ ಇತರ ಮಾಹಿತಿ ಇಲ್ಲಿದೆ.
ಪ್ರಮುಖ ನಗರಗಳಲ್ಲಿ 4ಜಿ ಸೇವೆ ಆರಂಭಿಸಿರುವ ಬಿಎಸ್‌ಎನ್‌ಎಲ್ ಈಗಾಗಲೇ ಒಂದು ಲಕ್ಷ ಟವರ್ ನಿರ್ಮಿಸಿದ್ದು, ಹೆಚ್ಚುವರಿ ಟವರ್ ಸ್ಥಾಪನೆಗೆ ಮುಂದಾಗಿದೆ. ಇದರೊಂದಿಗೆ 5 ಜಿ ಸೇವೆ ಅಪ್‌ಗ್ರೇಡ್ ಆಗಲು ಸಜ್ಜಾಗಿದೆ. ಇದೆಲ್ಲದ ಮಧ್ಯ ಗ್ರಾಹಕರ ಬೇಡಿಕೆಗಳನ್ನು ಮರೆಯದ ಟೆಲಿಕಾಂ ಕಂಪನಿಯು 299 ರೂಪಾಯಿಗೆ ಒಂದು ತಿಂಗಳ ಮೊಬೈಲ್ ರೀಚಾರ್ಜ್ ಪ್ಲಾನ್ ನೀಡಿದೆ.

ಬಿಎಸ್‌ಎನ್‌ಎಲ್ ಗ್ರಾಹಕರು ಈ 299 ರೂಪಾಯಿ ಪ್ಲಾನ್ ಪಡೆದಲ್ಲಿ ನೀವು, ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 3ಜಿಬಿ ದರದಲ್ಲಿ ಒಟ್ಟು 90 ಜಿಬಿ ಇಂಟರ್‌ನೆಟ್ ಸಿಗಲಿದೆ. 30 ದಿನಗಳವರೆಗೆ ಪ್ರತಿದಿನ 100 SMS ಸೌಲಭ್ಯ ನಿಮ್ಮದಾಗುತ್ತದೆ. ಒಂದು ವೇಳೆ ನೀವು ದೈನಂದಿನ ಡೇಟಾ 3ಜಿಬಿ ಮಿತಿ ಪೂರ್ಣಗೊಳಿಸಿದರೂ ಸಹಿತ ನಿಮಗೆ 40kbps ಇಂಟರ್‌ನೆಟ್ ಸೌಕರ್ಯ ಸಿಗುತ್ತದೆ. ಹೆಚ್ಚಿನ ಮಾಹಿತಿಗೆ ನೀವು BSNL ಅಧೀಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಬಿಎಸ್‌ಎನ್‌ಎಲ್ ಸೇವೆ ಪ್ರಸ್ತುತದಲ್ಲಿ ಹೇಗಿದೆ?
ನಗರ ಪ್ರದೇಶಗಳನ್ನು ಒಳಗೊಂಡಂತೆ ಗ್ರಾಮೀಣ ಭಾಗಗಳಲ್ಲಿ BSNL ಸೇವೆ ಹದಗೆಟ್ಟಿದೆ. ಒಂದು ಕಾಲದಲ್ಲಿ ಸೂಕ್ಷ್ಮ ಪ್ರದೇಶಗಳನ್ನು ಸಂಪರ್ಕಿಸುತ್ತಿದ್ದ ಈ ಬಿಎಸ್‌ಎನ್ಎಲ್ ಇಂದು ಕರೆ ಮಾಡಿದರೆ, ಸಮರ್ಪಕ ಕರೆಗಳು ಹೋಗುತ್ತಿಲ್ಲ. ನೆಟ್‌ವರ್ಕ್ ಸಮಸ್ಯೆ ಹೇಳತೀರದಷ್ಟಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಸಮಸ್ಯೆ ಸರಿ ಮಾಡುವುದಾಗಿ ಹೇಳುತ್ತಲೇ ಇರುವ ಕಂಪನಿ ಅಧಿಕಾರಿಗಳು ಹಾಗೂ ಸಹಾಯವಾಣಿ ಸಿಬ್ಬಂದಿಯು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ.
ಮೊದಲಿದ್ದ 3ಜಿ ಸೇವೆ ಚೆನ್ನಾಗಿತ್ತು. ಅದರೆ 4ಜಿ ಸೇವೆ ಅಪ್‌ಗ್ರೇಡ್ ಆಗುವ ಧಾವಂತದಲ್ಲಿ ಬಿಎಸ್‌ಎನ್ಎಲ್ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ಕರೆ ವೇಳೆ ನೆಟ್ ವರ್ಕ್ ಸಮಸ್ಯೆ, ದಿಢೀರ್ ಕರೆ ಕಡಿತ, ಸಿಗ್ನಲ್ ತೋರಿಸದೇ ಇರುವುದು ಸೇರಿ ಗ್ರಾಹಕರು ಕಿರಿ ಅನುಭವಿಸುತ್ತಿದ್ದಾರೆ. ಮರಳಿ ಏರ್‌ಟೆಲ್, ಜಿಯೋದತ್ತ ಮುಖ ಮಾಡಿದ್ದಾರೆ ಅನೇಕರು ಹೇಳಿಕೊಂಡಿದ್ದಾರೆ.












Click it and Unblock the Notifications