Heavy Rain: ಹಠಾತ್ ಭೋರ್ಗರೆದ ಜಲಪಾತ; ದಿಕ್ಕಾಪಾಲಾಗಿ ಓಡಿದ ಜನ
ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದ್ದು ನದಿ, ಹಳ್ಳ, ಕೊಳ್ಳಗಳು ಹರಿಯಲು ಆರಂಭಿಸಿವೆ. ತಮಿಳುನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಏಕಾಏಕಿ ಜಲಪಾತದಲ್ಲಿ ಪ್ರವಾಹ ಉಕ್ಕಿಬಂದಿದೆ.
ತಮಿಳುನಾಡಿನ ತೆಂಕಶಿ ಜಿಲ್ಲೆಯ ಹಳೆಯ ಕುರ್ಟಾಲಂ ಜಲಪಾತದಲ್ಲಿ ಶುಕ್ರವಾರ ಹಠಾತ್ ಪ್ರವಾಹ ಉಂಟಾಗಿದ್ದು, ಜಲಪಾತದ ಅಡಿಯಲ್ಲಿ ಸ್ನಾನ ಮಾಡುತ್ತಿದ್ದ ಪ್ರವಾಸಿಗರು ಭಯಭೀತರಾಗಿದ್ದಾರೆ. ತಿರುನಲ್ವೇಲಿಯ 17 ವರ್ಷದ ಬಾಲಕ ಅಶ್ವಿನ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ವರದಿಯಾಗಿದೆ.

ಕುರ್ಟಾಲಂ ಜಲಪಾತದಲ್ಲಿ ದಿಢೀರ್ ಪ್ರವಾಹ ಬಂದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅನಿರೀಕ್ಷಿತ ದಿಢೀರ್ ಪ್ರವಾಹದಿಂದ ಕೊಚ್ಚಿಹೋಗುವುದನ್ನು ತಪ್ಪಿಸಲು ಪ್ರವಾಸಿಗರ ಗುಂಪು ಓಡಿಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.
#WATCH | Sudden flash flood in Old Courtallam waterfalls in Tamil Nadu's Tenkasi
— ANI (@ANI) May 17, 2024
The public is prohiitied from entering the waterfall temporarily. A team of Tamil Nadu Fire and rescue department is present on the spot. pic.twitter.com/lahkoPNjVp
ಏಕಾಏಕಿ ನೀರು ರಭಸವಾಗಿ ಹರಿದು ಬಂದಿದ್ದರಿಂದ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದ ಪ್ರವಾಸಿಗರು ಭಯಭೀತರಾಗಿದ್ದರು. 16 ವರ್ಷದ ಬಾಲಕನೊಬ್ಬ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಶುರು ಮಾಡಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದ್ದು, ಕುರ್ಟಾಲಂ ಜಲಪಾತದಲ್ಲಿ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಮೇ 17 ರಂದು ತೆಂಕಶಿ, ಥೇಣಿ ಮತ್ತು ದಿಂಡಿಗಲ್‌ನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications