ಗೂಗಲ್ ಕಚೇರಿಗೆ ಬಾಂಬ್ ಬೆದರಿಕೆ: ಆರೋಪಿ ಬಂಧನ
ಗೂಗಲ್ ಆವರಣದಲ್ಲಿ ಬಾಂಬ್ ಹಾಕಿರುವುದಾಗಿ ವ್ಯಕ್ತಿ ಕರೆ ಮಾಡಿದ್ದನು. ಬಳಿಕ ಕಚೇರಿಯಲ್ಲಿ ಉದ್ವೀಘ್ನ ವಾತಾವರಣ ಸೃಷ್ಟಿಯಾಗಿ ಸ್ವಲ್ಪ ಸಮಯದವರೆಗೆ ಅಲರ್ಟ್ ಮಾಡಲಾಗಿತ್ತು
ನವದೆಹಲಿ, ಫೆಬ್ರವರಿ 13: ಮದ್ಯದ ಅಮಲಿನಲ್ಲಿ ಮಹಾರಾಷ್ಟ್ರದ ಪುಣೆ ನಗರದಲ್ಲಿನ ಗೂಗಲ್ ಕಂಪನಿಯ ಕಚೇರಿಗೆ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ ವ್ಯಕ್ತಿಯೊಬ್ಬನನ್ನು ಹೈದರಾಬಾದ್‌ನಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ವ್ಯಕ್ತಿ ಆವರಣದಲ್ಲಿ ಬಾಂಬ್ ಹಾಕಿರುವುದಾಗಿ ಕರೆ ಮಾಡಿದ್ದನು. ಬಳಿಕ ಕಚೇರಿಯಲ್ಲಿ ಉದ್ವೀಘ್ನ ವಾತಾವರಣ ಸೃಷ್ಟಿಯಾಗಿ ಸ್ವಲ್ಪ ಸಮಯದವರೆಗೆ ಅಲರ್ಟ್ ಮಾಡಲಾಗಿತ್ತು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಗೂಗಲ್ ಕಚೇರಿಗೆ ಭಾನುವಾರ ಸಂಜೆ 7.54ಕ್ಕೆ ಈ ವ್ಯಕ್ತಿ ಕರೆ ಮಾಡಿದ್ದನು. ಮುಂಬೈನ ಮುಂಡ್ವಾ ಪ್ರದೇಶದ ಬಹುಮಹಡಿ ವಾಣಿಜ್ಯ ಕಟ್ಟಡದ 11ನೇ ಮಹಡಿಯಲ್ಲಿರುವ ಕಂಪನಿಯ ಪುಣೆ ಕಚೇರಿಯಲ್ಲಿ ಬಾಂಬ್ ಇರಿಸಲಾಗಿದೆ ಎಂದು ಆತ ದೂರವಾಣಿ ಕರೆ ಮಾಡಿದ್ದನು.

ಬಳಿಕ ಕಂಪನಿಯ ಅಧಿಕಾರಿಗಳು ಸ್ಥಳಿಯ ಪೊಲೀಸರಿಗೆ ದೂರು ನೀಡಿದ್ದು, ಅವರು ಆ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದರು. ಭಾರತೀಯ ದಂಡ ಸಂಹಿತೆ ಸೆಕ್ಷನ್ 505(1)(B) (ಇದು ಸಾರ್ವಜನಿಕರಿಗೆ ಭಯ ಉಂಟುಮಾಡುವ ಉದ್ದೇಶ) ಮತ್ತು 506 (ಕ್ರಿಮಿನಲ್ ಬೆದರಿಕೆ) ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.
ಕರೆ ನಂತರ ಮುಂಬೈ ಪೊಲೀಸರು ತರುವಾಯ ತಮ್ಮ ಪುಣೆಯ ಪೊಲೀಸರಿಗೆ ಮಾಹಿತಿಯನ್ನು ಹಂಚಿಕೊಂಡು ಎಚ್ಚರಿಕೆ ನೀಡಿದರು. ಬಳಿಕ ಪುಣೆ ಪೊಲೀಸರು ಮತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳವು ಸ್ಥಳಕ್ಕೆ ಧಾವಿಸಿ ವ್ಯಾಪಕ ಶೋಧ ನಡೆಸಿತು ಎಂದು ಪುಣೆ ಉಪ ಪೊಲೀಸ್ ಆಯುಕ್ತ (5ನೇ ವಲಯ) ವಿಕ್ರಾಂತ್ ದೇಶಮುಖ್ ತಿಳಿಸಿದರು.
ಆದರೆ ಈ ಕರೆ ಸುಳ್ಳು ಎಂದು ತಿಳಿದುಬಂದಿತು. ನಂತರ ಕರೆ ಮಾಡಿದವರನ್ನು ಹೈದರಾಬಾದ್‌ನಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ. ಆತ ಮದ್ಯದ ಅಮಲಿನಲ್ಲಿ ಕರೆ ಮಾಡಿದ್ದಾರೆ ಎಂದು ಅಧಿಕಾರಿ ಹೇಳಿದರು.












Click it and Unblock the Notifications