ಮಣಿಪುರ ಚುನಾವಣೆ: ಐಇಡಿ ಸ್ಫೋಟ, ಇಬ್ಬರು ಐಟಿಬಿಪಿ ಸಿಬ್ಬಂದಿಗೆ ಗಾಯ
ಇಂಫಾಲ್, ಫೆಬ್ರಬರಿ 21: ಮಣಿಪುರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಅಹಿತಕರ ಘಟನೆಯೊಂದು ಸಂಭವಿಸಿದೆ.
ಮಣಿಪುರದಲ್ಲಿ ಭಾನುವಾರ ನಡೆದ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟದಲ್ಲಿ ಗಡಿ ಕಾವಲು ಪಡೆಯ ಐಟಿಬಿಪಿಯ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಫಾಲ್‌ನಿಂದ ಸುಮಾರು 45 ಕಿಮೀ ದೂರದಲ್ಲಿರುವ ಕಕ್ಚಿಂಗ್ ಜಿಲ್ಲೆಯ ವಾಂಗೂ ತೇರಾ ಪ್ರದೇಶದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಈ ಸ್ಫೋಟ ನಡೆದಿದೆ. ಸ್ಫೋಟದಲ್ಲಿ ಕಾನ್‌ಸ್ಟೆಬಲ್‌ಗಳಾದ ಗೌರವ್ ರೈ ಮತ್ತು ಗಿರಿಜಾ ಶಂಕರ್ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡಿರುವ ಸೈನಿಕರು ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಕಾಕ್ಚಿಂಗ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಶಾನ್ಯ ರಾಜ್ಯದ ವಿಧಾನಸಭಾ ಚುನಾವಣೆ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಸ್ಫೋಟ ಸಂಭವಿಸಿದಾಗ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್(ಐಟಿಬಿಪಿ) ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಗಸ್ತು ನಡೆಸುತ್ತಿದ್ದರು ಎಂದು ಅವರು ಹೇಳಿದರು.
ಈ ಪಡೆಗಳು ರಾಜ್ಯದಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾದ 610 ITBP ಚುನಾವಣಾ ಬೆಟಾಲಿಯನ್‌ನ 'ಇ' ಕಂಪನಿಯ ಭಾಗವಾಗಿತ್ತು.
ದೆಹಲಿಯಾದ್ಯಂತ ಐಇಡಿ ಸ್ಫೋಟಕ್ಕೆ ನಡೆದಿತ್ತು ತಯಾರಿ: ದೆಹಲಿಯಾದ್ಯಂತ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಸೀಮಾಪುರಿಯಲ್ಲಿ ಕಳೆದ ತಿಂಗಳು ಐಇಡಿ ಸ್ಫೋಟಕಗಳು ಪತ್ತೆಯಾಗಿದ್ದವು, ಈ ಸ್ಫೋಟಕಗಳನ್ನು ನಗರಾದ್ಯಂತ ಇಟ್ಟು ಸ್ಫೋಟಿಸಲು ಉದ್ದೇಶಿಸಲಾಗಿತ್ತು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಸೀಮಾಪುರಿಯ ಮನೆಯೊಂದರಲ್ಲಿ 2.5 ರಿಂದ 3 ಕೆಜಿಯಷ್ಟು ತೂಕದ ಐಇಡಿಯನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಮನೆಯ ಮಾಲೀಕ ಮತ್ತು ಆಸ್ತಿ ವ್ಯವಹಾರ ನಡೆಸುವ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
ಸ್ಥಳೀಯರ ಸಹಾಯವಿಲ್ಲದೆ ಅಂತಹ ಕೆಲಸಗಳು ನಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯ ಈಶಾನ್ಯ ಭಾಗದ ಸೀಮಾಪುರಿಯಲ್ಲಿ ಐಇಡಿ ಇದ್ದ ಬ್ಯಾಗ್ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಹೆಚ್ಚಳ ಮಾಡಿದ್ದಾರೆ. ಹಾಗೆಯೇ ಆ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಐಇಡಿ ಪತ್ತೆಯಾಗಿದ್ದ ಮನೆಯ ಸಮೀಪದ ಕಟ್ಟಡಗಳಲ್ಲಿ ಇದ್ದ ಸುಮಾರು 400 ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಆ ಮನೆಯನ್ನು ಸೀಲ್ ಮಾಡಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.
Recommended Video
ವಿಶೇಷ ತಂಡವು ಪ್ರಕರಣದ ತನಿಖೆ ಕೈಗೊಂಡಿದ್ದು, ಸ್ಥಳೀಯರು ಹಾಗೂ ವಿದೇಶಿ ಜಾಲದ ಕೈವಾಡ ಇರುವ ಕುರಿತು ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆದಿದೆ ಎಂದು ರಾಕೇಶ್ ಅಸ್ಥಾನ ಹೇಳಿದ್ದಾರೆ.












Click it and Unblock the Notifications