ಕಾಂಗ್ರೆಸ್ ಸರ್ಕಾರದ ವಿರುದ್ದ ಬೀದಿಗಿಳಿದ ಬಿಜೆಪಿ
ಬೆಂಗಳೂರು, ನವೆಂಬರ್, 23 :ಇಷ್ಟುದಿನಗಳ ಕಾಲ ಜಡ್ಡು ಹಿಡಿದು ಕೂತಿದ್ದ ಬಿಜೆಪಿಗೆ ಈಗ ಏಕಾಏಕಿ ಚೈತನ್ಯ ಬಂದಿದೆ. ಹಾಗಾಗಿ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದಲ್ಲಿ ಎದುರಾಗುತ್ತಿರುವ ಹಲವಾರು ಸಮಸ್ಯೆಗಳನ್ನು ಎಚ್ಚರಿಸುವ ಸಲುವಾಗಿ ಹಲವಾರು ಬಿಜೆಪಿ ನಾಯಕರು, ಕಾರ್ಯಕರ್ತರು ಬೆಂಗಳೂರಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ.
ಕೆಲವೆಡೆ ಅಂದರೆ ತಮಿಳುನಾಡು, ಚೆನ್ನೈ ಇನ್ನಿತರ ಪ್ರದೇಶಗಳಲ್ಲಿ ಮಳೆರಾಯ ಬಿಡುವೇ ಕೊಟ್ಟಿಲ್ಲ. ಆದರೆ ಕೆಲವೆಡೆ ಶ್ರೀನಗರ, ಜಮ್ಮು ಕಾಶ್ಮೀರ ಇನ್ನಿತರ ಪ್ರದೇಶಗಳಲ್ಲಿ ಚಳಿಗಾಲ ಛಾಯೆ ಕಂಡು ಬರುತ್ತಿದೆ. ಹಾಗಾಗಿ ಅಲ್ಲೆಲ್ಲ ಶ್ವೆಟರ್, ಮಫ್ಲರ್ ಕೊಂಡುಕೊಳ್ಳಲು ತಯಾರಿ ನಡೆಸಿದರೆ, ಇನ್ನು ಹಲವೆಡೆ ಜನರು ಛತ್ರಿ ಹಿಡಿದೇ ನಡೆದಿದ್ದಾರೆ.
ಮಳೆಯ ಪರಿಣಾಮ ಬೆಳೆ ನಾಶಹೊಂದಿದ್ದು, ಎಲ್ಲಾ ತರಕಾರಿ, ಕಾಳುಕಡಿಗಳ ಮೇಲೆ ಗಗನಕ್ಕೆ ಮುಟ್ಟುತ್ತಿವೆ. ಹಾಗಾಗಿ ಭೋಪಾಲ್ ನಲ್ಲಿ ಏರಿದ ಬೆಲೆಯ ವಿರುದ್ಧ ಹಲವಾರು ಮುಖಂಡರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಜಮ್ಮುಕಾಶ್ಮೀರದಲ್ಲಿ ಹೆಲಿಕಾಫ್ಟರ್ ಧರೆಗೆ ಉರುಳಿದ್ದು, ಹಲವಾರು ಮಂದಿ ಸಾವನ್ನಪ್ಪಿದ್ದಾರೆ.
ಮುಂಬರುವ ತಮಾಷ ಚಿತ್ರದ ಪ್ರಚಾರಕ್ಕಾಗಿ ದೀಪಿಕಾ ಪಡುಕೋಣೆ, ನಿರ್ದೇಶಕ ಇಮ್ತಾಜ್ ಅಲಿ, ರಣಬೀರ್ ಕಪೂರ್ ಮುಂಬೈಯಿಂದ ದೆಹಲಿಗೆ ರೈಲಿನಲ್ಲಿ ಭಾನುವಾರ ಪ್ರಯಾಣ ಬೆಳೆಸಿದರು. ಮಲೇಷಿಯಾ ಪ್ರವಾಸ ಕೈಗೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲ್ಲಿನ ಬ್ಯಾಂಡ್ ಸಿಬ್ಬಂದಿಯಿಂದ ಸ್ವಾಗತ ಪಡೆದರು. [ಹೆಲಿಕಾಪ್ಟರ್ ಪತನ, ವೈಷ್ಣೋದೇವಿ ಭಕ್ತರು ಸೇರಿ 7 ಜನ ಸಾವು]
ಹೀಗೆ ಹಲವಾರು ಘಟನೆಗಳು ದೇಶ-ವಿದೇಶದಲ್ಲಿ ನಡೆದವು. ಇವೆಲ್ಲವುಗಳಿಗೆ ಸಾಕ್ಷಿಯಾಗಿ ಪಿಟಿಐ ಫೋಟೋಗಳಿವೆ. ಇವುಗಳ ಜೊತೆಗೆ ಇನ್ನಷ್ಟು ಸುದ್ದಿಗಳು ಇವೆ ಮುಂದೆ ಓದಿ

ಹಲವಾರು ಸಮಸ್ಯೆಗಳ ವಿರುದ್ಧ ಬಿಜೆಪಿಯರ ದನಿ
ಬೆಂಗಳೂರಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದಾಜ್ಞೆ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದರು.

ದೇವರು ಬದುಕಿಸಲಿಲ್ಲ
ವೈಷ್ಣೋದೇವಿ ದರ್ಶನಕ್ಕೆ ತೆರಳುತ್ತಿದ್ದ ಭಕ್ತರನ್ನು ಕೊಂಡೊಯ್ಯುತ್ತಿದ್ದ ಹಿಮಾಲಯನ್ ಹೆಲಿಕಾಪ್ಟರ್ ಸೋಮವಾರ ಜಮ್ಮುವಿನ ಕಟ್ರಾದಲ್ಲಿ ಪತನಗೊಂಡಿದೆ. ಪ್ರಯಾಣಿಕರು, ಮಹಿಳಾ ಪೈಲಟ್ ಒಬ್ಬರು ಸೇರಿದಂತೆ ಒಟ್ಟು ಏಳು ಜನ ಮೃತಪಟ್ಟಿದ್ದಾರೆ.

ಮೋದಿಯವರೇ ನಿಮಗೆ ಈರುಳ್ಳಿ ಹಾರ
ಗಗನಕ್ಕೆ ಏರಿದ ತರಕಾರಿ ಬೆಲೆಯನ್ನು ಖಂಡಿಸಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಅವರಿಗೆ ಹಾಕಲು ಈರುಳ್ಳಿ ಹಾರ ತಯಾರಿಟ್ಟುಕೊಂಡಿರುವ ರೀತಿ

ತಮಾಷ ಚಿತ್ರದ ಪ್ರಚಾರ
ಮುಂಬರುವ ತಮಾಷ ಚಿತ್ರದ ಪ್ರಚಾರಕ್ಕಾಗಿ ದೀಪಿಕಾ ಪಡುಕೋಣೆ, ನಿರ್ದೇಶಕ ಇಮ್ತಾಜ್ ಅಲಿ, ರಣಬೀರ್ ಕಪೂರ್ ಮುಂಬೈಯಿಂದ ದೆಹಲಿಗೆ ರೈಲಿನಲ್ಲಿ ಭಾನುವಾರ ಪ್ರಯಾಣ

ಚಳಿಗಾಲದಲ್ಲಿ ರಸ್ತೆ ದಾಟುತ್ತಿರುವ ಮಕ್ಕಳು
ಶ್ರೀನಗರದಲ್ಲಿ ಚಳಿ ವಿಪರೀತವಾಗಿದ್ದು ಮಕ್ಕಳು ಮುಮಜಾವಿನಲ್ಲಿ ರಸ್ತೆ ದಾಟುತ್ತಿದ್ದ ದೃಶ್ಯ ಕಂಡು ಬಂದಿದ್ದು ಹೀಗೆ.

ಮೋದಿಗೆ ನಮನ ಸಲ್ಲಿಸಿದ ಮಲೇಷಿಯಾ ಬ್ಯಾಂಡ್
ಮಲೇಷಿಯಾದ ಕೌಲಾಲಂಪುರಕ್ಕೆ ಭೇಟಿ ಮಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಬ್ಯಾಂಡ್ ಸಿಬ್ಬಂದಿ ಭವ್ಯವಾದ ಸ್ವಾಗತ ಕೋರಿದರು

ದೇಶ-ವಿದೇಶ ನಟರು ಒಂದಾದಾಗ
ಹಿಂದಿ ನಟನಾದ ಅನೂಪ್ ಖೇರ್ ಮತ್ತು ಹಾಲಿವುಡ್ ನಟ ವಿಲಿಯಮ್ ಡಫಾಯ್ ಅಮೆರಿಕಾದ ಹೌಸ್ ಟೌನ್ ನಲ್ಲಿ ಪೋಟೋದಲ್ಲಿ ಒಂದಾದದ್ದು ಹೀಗೆ












Click it and Unblock the Notifications