Get Updates
Get notified of breaking news, exclusive insights, and must-see stories!

Lok Sabha Election 2024: ಬಿಜೆಪಿ ಕಠಿಣ ಆಯ್ಕೆ ಪ್ರಕ್ರಿಯೆ: 100 ಅಭ್ಯರ್ಥಿಗಳು ಅಂತಿಮ- ಮೂಲಗಳು

ದೆಹಲಿ ಮಾರ್ಚ್ 1: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಗುರುವಾರ ತಡರಾತ್ರಿ ಸಭೆ ನಡೆಸಿದ ನಂತರ ಬಿಜೆಪಿ 100 ಲೋಕಸಭಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಕೆಲವೇ ದಿನಗಳಲ್ಲಿ ಮೊದಲ ಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ವಾರಣಾಸಿಯಿಂದ ಪ್ರಧಾನಿ ಮೋದಿ, ಗುಜರಾತ್‌ನ ಗಾಂಧಿನಗರದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಲಕ್ನೋದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪರ್ಧಿಸುವುದನ್ನು ನಿರ್ಧರಿಸಲಾಗಿದ್ದು, 2019 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಸೋತ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೆಚ್ಚು ಒತ್ತು ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

BJP tough selection process: 100 candidates finalised- sources

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ:

ಗುರುವಾರ ತಡರಾತ್ರಿ ನಡೆದ ಸಭೆಯಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಅಸ್ಸಾಂ, ಕೇರಳ ಮತ್ತು ತೆಲಂಗಾಣ ಸೇರಿದಂತೆ ಇತರ ರಾಜ್ಯಗಳು ಬಿಜೆಪಿ ವರಿಷ್ಠರ ಗಮನ ಸೆಳೆದಿವೆ. ಜೊತೆಗೆ ರಾಜ್ಯಸಭಾ ಸಂಸದರೂ ಆಗಿರುವ ಕೇಂದ್ರ ಸಚಿವರು ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಶಾಸಕರಲ್ಲಿ ಕೇಂದ್ರ ಸಚಿವ ಭೂಪೇಂದರ್ ಯಾದವ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಸರ್ಬಾನಂದ್ ಸೋನೋವಾಲ್, ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೇಂದ್ರ ರಾಜ್ಯ ಸಚಿವ (MoS) ವಿ ಮುರಳೀಧರನ್ ಸೇರಿದ್ದಾರೆ.

ಹೊಸ ಮುಖಗಳಿಗೆ ಮಣೆ:

ಬಿಜೆಪಿಯ ಪಟ್ಟಿಯು ಹಲವಾರು ಮಹಿಳೆಯರು ಸೇರಿದಂತೆ ಹೊಸ ಮುಖಗಳಿಗೆ ಮಣೆ ಹಾಕಿದೆ. ಉದಾಹರಣೆಗೆ ಪಶ್ಚಿಮ ಬಂಗಾಳದ ಅಸನ್ಸೋಲ್ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಬಾಲಿವುಡ್ ನಟ ಶತ್ರುಘ್ನ ಸಿನ್ಹಾ ಅವರನ್ನು ಎದುರಿಸಲು ಬಿಜೆಪಿ ಭೋಜ್‌ಪುರಿ ಸ್ಟಾರ್ ಪವನ್ ಸಿಂಗ್ ಅವರನ್ನು ಕಣಕ್ಕಿಳಿಸಬಹುದು.

ಗುರುವಾರ 2024 ರ ಲೋಕಸಭೆ ಚುನಾವಣೆಗೆ ಬಿಜೆಪಿಯ ಮೊದಲ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಿಎಂ ಮೋದಿ ನಾಲ್ಕು ಗಂಟೆಗಳ ಕಾಲ ನಡೆದ ಸಿಇಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾತ್ರಿ 10.30ಕ್ಕೆ ಆರಂಭವಾದ ಸಭೆ ನಾಲ್ಕು ಗಂಟೆಗೂ ಹೆಚ್ಚು ಕಾಲ ನಡೆಯಿತು. ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಸೇರಿದಂತೆ ಇತರರು ಭಾಗವಹಿಸಿದ್ದರು.

BJP tough selection process: 100 candidates finalised- sources

ಕಳೆದ ವಾರ ಅಮಿತ್ ಶಾ, ಜೆಪಿ ನಡ್ಡಾ ಮತ್ತು ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷಕ್ಕೆ ಸವಾಲಾಗಬಹುದಾದ "ದುರ್ಬಲ ಸ್ಥಾನಗಳ" ಕುರಿತು ಚರ್ಚಿಸಲು ಸಭೆ ನಡೆಸಿದರು.

ತೆರೆಮರೆಯಲ್ಲಿ ಮೊದಲ ಪಟ್ಟಿ -

ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯುವುದು ಸೇರಿದಂತೆ ಮೊದಲ ಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಸಾಕಷ್ಟು ಕೆಲಸ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯ NaMo ಅಪ್ಲಿಕೇಶನ್‌ನಲ್ಲಿ ತಮ್ಮ ಕ್ಷೇತ್ರದ ಸಂಸದರ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ಸಾರ್ವಜನಿಕರನ್ನು ಕೇಳಲಾಯಿತು ಮತ್ತು ಅವರ ಪ್ರದೇಶಗಳಲ್ಲಿನ ಮೂರು ಜನಪ್ರಿಯ ಬಿಜೆಪಿ ನಾಯಕರನ್ನು ಸಹ ಉಲ್ಲೇಖಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ಬಿಜೆಪಿ ಸಂಸದರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾಡಿರುವ ಕೆಲಸಗಳ ಬಗ್ಗೆ ವರದಿ ಕೇಳಲಾಗಿದೆ. ಪ್ರತಿ ಸಂಸದೀಯ ಕ್ಷೇತ್ರಗಳ ವರದಿ ನೀಡಲು ಸಮೀಕ್ಷಾ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ.

ಇದಲ್ಲದೆ, ಬಿಜೆಪಿ ಆಡಳಿತದ ರಾಜ್ಯಗಳ ಪ್ರತಿ ಸಂಸದೀಯ ಕ್ಷೇತ್ರಗಳಲ್ಲಿನ ಸಚಿವರುಗಳು ಸಂಸದರು ಮಾಡಿದ ಕೆಲಸದ ಬಗ್ಗೆ ವರದಿಗಳನ್ನು ಸಂಗ್ರಹಿಸಲು ಕೇಳಲಾಯಿತು. ನಂತರ, ಸಚಿವರು ಮತ್ತು ಪಕ್ಷದ ಸಂಘಟನಾ ಸಮಿತಿಯಿಂದ ಪಡೆದ ವರದಿಗಳನ್ನು ರಾಜ್ಯ ಚುನಾವಣಾ ಸಮಿತಿ ಪರಿಶೀಲಿಸಿತು. ರಾಜ್ಯ ಮಟ್ಟದ ಸಭೆಗಳಲ್ಲಿ ಪ್ರತಿ ಸಂಸದೀಯ ಸ್ಥಾನಕ್ಕೆ ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಗುರುವಾರದ ಸಿಇಸಿ ಸಭೆಗೂ ಮುನ್ನ ಪ್ರತಿ ರಾಜ್ಯದ ಕೋರ್ ಗ್ರೂಪ್ ಜೆಪಿ ನಡ್ಡಾ, ಅಮಿತ್ ಶಾ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಭೇಟಿ ಮಾಡಿತ್ತು. ಪ್ರತಿ ಸಂಸದೀಯ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಿಇಸಿ ಸಭೆ ನಡೆಯುವ ಮುನ್ನ ಪ್ರಧಾನಿ ನಿವಾಸದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ನಡುವೆ ಈ ಚರ್ಚೆ ನಡೆದಿದೆ.

ಪ್ರತಿಯೊಂದು ಸ್ಥಾನವನ್ನು ಗೆಲ್ಲಲು ಯಾರಿಗೆ ಹೆಚ್ಚು ಅವಕಾಶವಿದೆ ಎಂಬುದನ್ನು ನೋಡುವುದು ಬಿಜೆಪಿಯ ತಂತ್ರವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಅಭ್ಯರ್ಥಿ ಬೇರೆ ಪಕ್ಷದವರಾಗಿದ್ದರೆ, ಆ ವ್ಯಕ್ತಿಯನ್ನು ತಮ್ಮ ಮಡಿಲಿಗೆ ಸೇರಿಸುವುದು ಕೇಸರಿ ಪಕ್ಷದ ಉದ್ದೇಶವಾಗಿರುತ್ತದೆ. ಇದಕ್ಕಾಗಿ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ.

ಟಿಕೆಟ್‌ಗಳ ರದ್ದತಿ

ಮೂಲಗಳ ಪ್ರಕಾರ, ಮಾರ್ಚ್ 3 ರಂದು ಪಿಎಂ ಮೋದಿ ಅಧ್ಯಕ್ಷತೆಯಲ್ಲಿ ಸಿಇಸಿಯ ಅಂತಿಮ ಸಭೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಕಾರ್ಯಕ್ಷಮತೆ ಉತ್ತಮವಾಗಿರದ ಸಂಸದರ ಟಿಕೆಟ್‌ಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ರದ್ದುಗೊಳಿಸಲಾಗುವುದು ಎನ್ನಲಾಗುತ್ತಿದೆ. ಪ್ರತಿ ಸಂಸತ್ ಸ್ಥಾನಕ್ಕೂ ಬಿಜೆಪಿ ಹೋರಾಟ ನಡೆಸಲಿದ್ದು ಉತ್ತರ ಪ್ರದೇಶ ಮತ್ತು ಬಿಹಾರದ ಕೆಲ ಸಚಿವರ ಟಿಕೆಟ್ ರದ್ದು ಮಾಡುವ ಬಗ್ಗೆ ಮಾತುಕತೆ ಕೂಡ ನಡೆದಿದೆ.

ಹೆಚ್ಚುವರಿಯಾಗಿ, ಕನಿಷ್ಠ 60-70 ಸಂಸದರ ಟಿಕೆಟ್‌ಗಳು ರದ್ದಾಗುವ ಸಾಧ್ಯತೆಯಿದೆ. ಹೊಸ ಮುಖಗಳಿಗೆ ಅವಕಾಶ ನೀಡಲಾಗುವುದು ಮತ್ತು ನಿರ್ದಿಷ್ಟ ಕ್ಷೇತ್ರದಿಂದ ಎರಡು ಬಾರಿ ಗೆದ್ದಿರುವ ಹಳಬರನ್ನು ಬದಲಾಯಿಸುವುದು, ಒಬಿಸಿ ಸಂಸದರ ಟಿಕೆಟ್‌ಗಳನ್ನು ರದ್ದುಗೊಳಿಸುವ ನಿರೀಕ್ಷೆಯಿಲ್ಲ ಎಂದು ಮೂಲಗಳು ಸೇರಿಸಲಾಗಿದೆ. 2019 ರಲ್ಲಿ, ಪಕ್ಷವು ಕಣಕ್ಕಿಳಿದ 303 OBC ಸಂಸದರಲ್ಲಿ 85 ಮಂದಿ ಜಯಗಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+