ಎಲ್ಲಾ ಪಕ್ಷಕ್ಕೆ ಸಿಕ್ಕಿರುವ ದೇಣಿಗೆಯಲ್ಲಿ ಬಿಜೆಪಿಗೆ 86% ರಷ್ಟು ಪಾಲು
ನವದೆಹಲಿ, ನವೆಂಬರ್ 29: ರಾಜಕೀಯ ನಿಧಿ ಸಂಗ್ರಹಕ್ಕಾಗಿ ಸ್ಥಾಪಿಸಲಾಗಿರುವ ಲಾಭರಹಿತ ಟ್ರಸ್ಟ್ ಮೂಲಕ 2017-2018ರಲ್ಲಿ ಎಲ್ಲಾ ಪಕ್ಷಗಳಿಗೆ ಸಿಕ್ಕಿರುವ ದೇಣಿಗೆ ಪ್ರಮಾಣವನ್ನು ಅಸೋಸಿಯೇಷನ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ನೀಡಿದೆ.
ಇದರಂತೆ ಚುನಾವಣಾ ಟ್ರಸ್ಟ್ನಿಂದ ದೇಣಿಗೆ ನೀಡಿದ್ದು, ಅದರಲ್ಲಿ ಬಿಜೆಪಿ ಪಕ್ಷವೇ ಶೇ. 86.59 ರಷ್ಟನ್ನು ಪಡೆದುಕೊಂಡಿದೆ ಎಂದು ಎಡಿಆರ್ ವರದಿ ಹೇಳಿದೆ.
ಎಡಿಆರ್ ನೀಡಿರುವ ಅಂಕಿ-ಅಂಶದಂತೆ ಒಟ್ಟು 193 ಕೋಟಿ ರೂ ದೇಣಿಗೆ ಸಂಗ್ರಹವಾಗಿದ್ದು, ಇದರಲ್ಲಿ ಬಿಜೆಪಿ 167.80 ಕೋಟಿ ದೇಣಿಗೆ ಪಡೆದುಕೊಂಡಿದೆ. ಇನ್ನುಳಿದ ಶೇ.13.41 ರಷ್ಟನ್ನು ಕಾಂಗ್ರೆಸ್,ಬಿಜು ಜನತಾದಳ,ಎನ್ನ್ಸಿಪಿ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಕಾಶ್ಮೀರ(ಜೆಕೆಎನ್ಸಿ) ಪಡೆದು ಕೊಂಡಿವೆ.

ಬಿಜೆಪಿ ಬಿಟ್ಟು ಉಳಿದ ಪಕ್ಷಗಳು ಪಡೆದುಕೊಂಡಿರುವ ಮೊತ್ತ 25 ಕೋಟಿ ರೂಪಾಯಿಗಳು. ಎಡಿಆರ್ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಕೇವಲ 22 ಚುನಾವಣಾ ಟ್ರಸ್ಟ್ಗಳು ನೋಂದಣಿ ಆಗಿದ್ದು, ಇದರಲ್ಲಿ 13 ಟ್ರಸ್ಟ್ಗಳು ಮಾತ್ರ ತಾವು ನೀಡಿರುವ ದೇಣಿಗೆ ಮೊತ್ತದ ಪ್ರತಿಗಳನ್ನು ನೀಡಿವೆ ಎಂಬ ಮಾಹಿತಿ ತಿಳಿಸಿದೆ.
ಪ್ರುಡೆಂಟ್ ಎಲೆಕ್ಟ್ರೋರಲ್ ಟ್ರಸ್ಟ್ ನಿಂದ 154.30 ಕೋಟಿ ರೂಪಾಯಿ, ಆದಿತ್ಯ ಬಿರ್ಲಾ ಗ್ರೂಪ್ ನ ಜನರಲ್ ಎಲೆಕ್ಟೋರಲ್ ಟ್ರಸ್ಟ್ ನಿಂದ 12.50 ಕೋಟಿ ರೂಪಾಯಿ ದೇಣಿಗೆಯನ್ನು ಬಿಜೆಪಿ ಪಕ್ಷಕ್ಕೆ ನೀಡಿವೆ.
2013ರಲ್ಲಿ ಚುನಾವಣಾ ಆಯೋಗ ವಿವಿಧ ಚುನಾವಣಾ ಟ್ರಸ್ಟ್ಗಳು ವಿವಿಧ ರಾಷ್ಟ್ರೀಯ ಪಕ್ಷಗಳಿಗೆ ನೀಡುವ ದೇಣಿಗೆಯ ಮಾಹಿತಿಯ ವಾರ್ಷಿಕ ವರದಿಯನ್ನು ಆಯೋಗಕ್ಕೆ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ.
2016-17ರ ಅವಧಿಯಲ್ಲಿ ಬಿಜೆಪಿ 290.22 ಕೋಟಿ ರು ಅಥವಾ 89.22 ಕೋಟಿ ರು ಒಟ್ಟು ದೇಣಿಗೆ ಪಡೆದುಕೊಂಡಿತ್ತು.












Click it and Unblock the Notifications