ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟದಲ್ಲಿ ಬಿಜೆಪಿ
ನವದೆಹಲಿ, ಜುಲೈ 14: ವಿಪಕ್ಷಗಳು ಮಹಾತ್ಮಾ ಗಾಂಧಿ ಮೊಮ್ಮಗನನ್ನು ಉಪರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಬೆನ್ನಿಗೆ ಬಿಜೆಪಿ ಮೇಲೆ ಒತ್ತಡ ಬಿದ್ದಿದೆ. ಇದೀಗ ತನ್ನ ಅಭ್ಯರ್ಥಿಯ ಆಯ್ಕೆ ಬಗ್ಗೆ ಕೇಸರಿ ಪಕ್ಷ ತಲೆಕೆಡಿಸಿಕೊಂಡಿದೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಕ್ಷದ ಹಿರಿಯ ಮುಖಂಡರ ಜತೆ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಇನ್ನು ಸಂಸದೀಯ ಮಂಡಳಿ ಸಭೆ ಸದ್ಯದಲ್ಲೇ ನಡೆಯಲಿದ್ದು ಈ ಸಭೆಯಲ್ಲಿ ಬಿಜೆಪಿ ತನ್ನ ಅಂತಿಮ ಆಯ್ಕೆಯನ್ನು ನಿರ್ಧರಿಸಲಿದೆ.

ಮುಖ್ಯವಾಗಿ ಉಪರಾಷ್ಟ್ರಪತಿಗಳಾದವರು ರಾಜ್ಯಸಭಾ ಸ್ಪೀಕರ್ ಕೂಡಾ ಆಗಿರುವುದರಿಂದ ಮೇಲ್ಮನೆಯನ್ನು ಮುನ್ನಡೆಸುವ ಸಾಮರ್ಥ್ಯ ಇರುವವರಿಗಾಗಿ ಬಿಜೆಪಿ ಹುಡುಕಾಡುತ್ತಿದೆ. ಜತೆಗೆ ಬಿಜೆಪಿಯ ಮೂಲ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವವರು ಪಕ್ಷಕ್ಕೆ ಬೇಕಾಗಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ ಪಕ್ಷದ ಒಳಗಿನವರಿಗೆ ಮಣೆ ಹಾಕಲು ಬಿಜೆಪಿ ನಿರ್ಧರಿಸಿದೆ. ಪಕ್ಷದ ಹೊರಗಿನವರನ್ನು ಆಯ್ಕೆ ಮಾಡುವ ಸಾಧ್ಯತೆಗಳು ತುಂಬಾ ಕಡಿಮೆ. ಇನ್ನು ಆಗಸ್ಟ್ 5 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಅಂದೇ ಮತ ಎಣಿಕೆಯೂ ನಡೆಯಲಿದೆ.












Click it and Unblock the Notifications