ಬಸ್‌ನಲ್ಲಿ ಮಹಿಳೆಯೊಂದಿಗೆ ಲವ್ವಿ ಡವ್ವಿ, ಬಿಜೆಪಿ ನಾಯಕನ ಬಂಧನ

ಮುಂಬೈ, ಜುಲೈ 06 : ಚಲಿಸುತ್ತಿದ್ದ ಬಸ್‌ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಬಿಜೆಪಿ ನಾಯಕ ರವೀಂದ್ರ ಬವಂಥಾಡೆ ಅವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಬಸ್ ನಲ್ಲಿದ್ದ ಸಿಸಿಟಿವಿಯಲ್ಲಿ ಬಿಜೆಪಿ ಮುಖಂಡನ ಈ ಸರಸವು ದಾಖಲಾಗಿದ್ದು, ಇದರ ವಿಡಿಯೋ ತುಣುಕು ಈಗ ವೈರಲ್ ಆಗಿವೆ. ಇದರ ಬೆನ್ನಲ್ಲೇ ಯುವತಿ ಶಾಸಕನ ವಿರುದ್ಧ ಅತ್ಯಾಚಾರದ ಪ್ರಕರಣದ ದಾಖಲಿಸಿದ್ದರು.

BJP leader who kissed woman in bus arrested on charges of rape

Recommended Video

      ತಮ್ಮನ್ನು ಮದುವೆಯಾಗುವುದಾಗಿ ಹೇಳಿ, ಕೆಲಸ ಕೊಡಿಸುವ ಆಮಿಷವನ್ನೂ ತೋರಿಸಿ ಈ ರೀತಿಯ ತಮ್ಮನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದೂ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದರು.

      ಪೊಲೀಸರು ಅತ್ಯಾಚಾರ ಸೇರಿದಂತೆ ಇತರ ಆರೋಪಗಳ ಅಡಿ ದೂರು ದಾಖಲಿಸಿಕೊಂಡು ಇದೀಗ ರವೀಂದ್ರ ಅವರನ್ನು ಬಂಧಿಸಿದ್ದಾರೆ.

      ಏನಿದೆ ವಿಡಿಯೋದಲ್ಲಿ?
      ಇತ್ತೀಚೆಗೆ, ಗಡಚಿರೋಲಿ ಜಿಲ್ಲೆಯಲ್ಲಿ ಸಂಚರಿಸುವ ಬಸ್ ನಲ್ಲಿ ಶಾಸಕ ರವೀಂದ್ರ ಬವಾಂಥಾಡೆ ಅವರು ಯುವತಿಯೊಬ್ಬಳ ಜತೆ ಅಕ್ಕಪಕ್ಕದ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾರೆ.

      ಇಬ್ಬರೂ ಪರಿಚಿತರೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆಯೆಂದು ಹೇಳಲಾಗಿದೆ. ಆ ಬಸ್ ಚಂದ್ರಾಪುರ ಪ್ರಾಂತ್ಯದಲ್ಲಿ ಚಲಿಸುತ್ತಿದ್ದ ವೇಳೆ, ಆ ಯುವತಿಯ ಮೇಲೆ ಜಾರಿದ ಆತ ಆ ಯುವತಿಗೆ ಮುತ್ತಿಕ್ಕಲು ಆರಂಭಿಸಿದ್ದಾನೆ.

      ಇದಕ್ಕೆ ಆ ಯುವತಿಯು ಯಾವುದೇ ಪ್ರತಿರೋಧ ಒಡ್ಡುವುದಿಲ್ಲ. ಬದಲಾಗಿ, ಆತ ಕೃತ್ಯಕ್ಕೆ ಸಹಕರಿಸುವುದು ವಿಡಿಯೋದಲ್ಲಿ ದಾಖಲಾಗಿದೆ.

      ಕೆಲ ನಿಮಿಷಗಳವರೆಗೆ ಇದು ಹಾಗೇ ಮುಂದುವರಿದಿದೆ. ಅವರಿಬ್ಬರೂ ನಿಗದಿತ ಸ್ಥಳದಲ್ಲಿ ಇಳಿದುಹೋಗಿದ್ದಾರೆ. ಆದರೆ, ಈ ವಿಡಿಯೋದ ತುಣುಕುಗಳು ವೈರಲ್ ಆಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+