ಹಿಂದೂ-ಮುಸ್ಲಿಂ ಮತ್ತು ಬಿಜೆಪಿ ಬಗ್ಗೆ ಹೀಗೆ ಹೇಳೋದಾ ರಾಹುಲ್ ಗಾಂಧಿ?
ನವದೆಹಲಿ, ಡಿಸೆಂಬರ್ 24: ಭಾರತದಲ್ಲಿ ನೈಜ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವುದಕ್ಕೆ ಬಿಜೆಪಿಯು ಪ್ರಯತ್ನಿಸುತ್ತಿದೆ. ಅದೇ ನಿಟ್ಟಿನಲ್ಲಿ ಹಿಂದೂ-ಮುಸ್ಲಿಂ ವಿಷಯವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂಷಿಸಿದ್ದಾರೆ.
ಕೆಂಪು ಕೋಟೆಯಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಬಿಜೆಪಿಯು ದ್ವೇಷವನ್ನು ಹರಡುತ್ತಿದೆ ಎಂದು ಕಾಂಗ್ರೆಸ್ ಸಂಸದ ವಾಗ್ದಾಳಿ ನಡೆಸಿದರು.
ಬಿಜೆಪಿಯು ಹಿಂದೂ-ಮುಸ್ಲಿಂ ಭಾವನೆಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ನಿಜವೇ? ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಆರೋಪಕ್ಕೆ ಕಾರಣವೇನು?, ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮಾಡಿದ ಆರೋಪಗಳೇನು ಎಂಬುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಆರೋಪಗಳು:
* ನವದೆಹಲಿ ಕೆಂಪು ಕೋಟೆಯ ಭಾಷಣದ ಸಂದರ್ಭದಲ್ಲಿ, "ನಿಜವಾದ ಸಮಸ್ಯೆಗಳಿಂದ ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸಲು ಹಿಂದೂ-ಮುಸ್ಲಿಂ ದ್ವೇಷವನ್ನು 24x7 ಹರಡಲಾಗುತ್ತಿದೆ" ಎಂದು ಗಾಂಧಿ ದೂಷಿಸಿದರು.
* ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಬೆಳಗ್ಗೆ ಯಾತ್ರೆಯಲ್ಲಿ ಪಾಲ್ಗೊಂಡರು. ತದನಂತರ ಯಾತ್ರೆಯು ಕೆಂಪು ಕೋಟೆ ಬಳಿ ಬಂದಾಗ ನಟ ಕಮಲ್ ಹಾಸನ್, ಯಾತ್ರೆಯಲ್ಲಿ ಸೇರಿಕೊಂಡರು.
* "ನಾನು 2,800 ಕಿಲೋಮೀಟರ್ ನಡೆದಿದ್ದೇನೆ, ಆದರೆ ಯಾವುದೇ ದ್ವೇಷವನ್ನು ನೋಡಲಿಲ್ಲ. ನಾನು ಟಿವಿ ಆನ್ ಮಾಡಿದಾಗ, ನಾನು ಹಿಂಸೆಯನ್ನು ನೋಡುತ್ತೇನೆ," ಎಂದು ಗಾಂಧಿ ಹೇಳಿದರು. ಈ ಹಂತದಲ್ಲಿ ಇಂದು ಯಾತ್ರೆಯ ಕೊನೆಯ ದಿನವಾಗಿದೆ. ಗಾಂಧಿ ಮತ್ತು ಅವರ ತಂಡವು ಒಂಬತ್ತು ದಿನಗಳ ವಿರಾಮಕ್ಕೆ ಹೋಗಲಿದ್ದು, ನಂತರ ಯಾತ್ರೆ ಪುನರಾರಂಭವಾಗಲಿದೆ ಎಂದರು.
* "ತೆರೆಮರೆಯಿಂದ ಬಂದ ಕಟ್ಟುಕಥೆಯಿಂದಾಗಿ ನಾವು ಹೇಳುವ ವಾಸ್ತವವನ್ನು ಮಾಧ್ಯಮಗಳು ಎಂದಿಗೂ ತೋರಿಸುವುದಿಲ್ಲ. ಆದರೆ ಈ ದೇಶವು ಎಲ್ಲರೂ ಸಾಮರಸ್ಯದಿಂದ ಬದುಕಲು ಬಯಸುತ್ತಾರೆ," ಎಂದು ಹೇಳಿದರು.
* "ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಸೇರುವುದು ಮತ್ತು ರಾಹುಲ್ ಗಾಂಧಿ ಅವರೊಂದಿಗೆ ನಡೆಯುವುದು ತಪ್ಪು ಎಂದು ಹೇಳಲು ಜನರು ತಮ್ಮ ಬಳಿಗೆ ಬಂದರು," ಎಂದು ಮಕ್ಕಳ್ ನೀಧಿ ಮೈಯಂ ಸಂಸ್ಥಾಪಕ ಕಮಲ್ ಹಾಸನ್ ಹೇಳಿದರು. "ನಾನೇ ಕೇಳಿಕೊಂಡೆ, ಇದು ದೇಶಕ್ಕೆ ನನಗೆ ಬೇಕಾದ ಸಮಯವಾಗಿದ್ದು, ಭಾರತ್ ತೋಡ್ನೆ ಕಿ ನಹಿ ಜೋಡ್ನೆ ಕಿ ಮದದ್ ಕರೋ (ದೇಶವನ್ನು ಒಗ್ಗೂಡಿಸಲು ಸಹಾಯ ಮಾಡಿ, ಅದನ್ನು ಒಡೆಯಬೇಡಿ)," ಎಂದು ಕಮಲ್ ಹಾಸನ್ ಹೇಳಿದರು.

* ನಟ ಕಮಲ್ ಹಾಸನ್ ರಾಜಕೀಯ ಮೈತ್ರಿಗಳ ಬಗ್ಗೆ ಮಾತನಾಡಲಿಲ್ಲ. ಏಪ್ರಿಲ್ 2021 ರಲ್ಲಿ ತಮಿಳುನಾಡಿನಲ್ಲಿ ತನ್ನ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರ ಪಕ್ಷವು ಚುನಾವಣಾ ಯುದ್ಧದಲ್ಲಿ ಸೋತಿತ್ತು.
* ಕಾಂಗ್ರೆಸ್ ಯಾತ್ರೆ ಶನಿವಾರ ಬೆಳಗ್ಗೆ ಹರಿಯಾಣದಿಂದ ದೆಹಲಿ ಪ್ರವೇಶಿಸಿತು. ದೆಹಲಿಯ ಆಶ್ರಮ ಚೌಕ್‌ಗೆ ಯಾತ್ರೆ ತಲುಪುವ ಮುನ್ನ ಸೋನಿಯಾ ಗಾಂಧಿ ಅವರು ಮಾಸ್ಕ್ ಧರಿಸಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಕೆಲವು ನಿಮಿಷಗಳ ಕಾಲ ನಡೆದರು.
* ಈ ಯಾತ್ರೆಯನ್ನು ನಿಲ್ಲಿಸಲು ಕೇಂದ್ರವು ಪ್ರಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ ಮೆರವಣಿಗೆಯನ್ನು ನಿಲ್ಲಿಸುವುದನ್ನು ಪರಿಗಣಿಸುವಂತೆ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದರು.
* ಸೆ.7ರಂದು ಕನ್ಯಾಕುಮಾರಿಯಲ್ಲಿ ಆರಂಭಗೊಂಡು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿರುವ ಯಾತ್ರೆ ಇದುವರೆಗೆ ದೆಹಲಿ, ಹರಿಯಾಣ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಂಚರಿಸಿದೆ.












Click it and Unblock the Notifications