Maharashtra Elections: ಬಿಜೆಪಿ ಸ್ಟಾರ್‌ ಪ್ರಚಾರಕರಾಗಿ ಮೋದಿ ಸೇರಿ ಹಲವು ನಾಯಕರು

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನೆಲೆ ಬಿಜೆಪಿಯು ಭರ್ಜರಿ ತಯಾರಿ ನಡೆಸಿದೆ. ಇಂದು ಚುನಾವಣೆಗಾಗಿ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಕೂಡ ಮಾಡಿದೆ.

ಒಟ್ಟು 40 ಮಂದಿ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ಅಮಿತ್‌ ಶಾ, ಯೋಗಿ ಆದಿತ್ಯನಾಥ್‌, ಪ್ರಮೋದ್‌ ಸಾವಂತ್‌, ಭೂಪೇಂದ್ರ ಪಟೇಲ್‌, ನಯಾಬ್‌ ಸಿಂಗ್‌ ಸೈನಿ, ದೇವೇಂದ್ರ ಫಡ್ನವೀಸ್‌, ಅಶ್ವಿನಿ ವೈಷ್ಣವ್‌, ಪಿಯೂಷ್‌ ಗೋಯಲ್‌, ಜ್ಯೋತಿರಾದಿತ್ಯ ಸಿಂಧಿಯಾ, ಅಶೋಕ್‌ ಚವಾಣ್‌, ಸ್ಮೃತಿ ಇರಾನಿ ಸೇರಿದಂತೆ ಒಟ್ಟು 40 ಮಂದಿ ಪ್ರಚಾರದ ಕಣದಲ್ಲಿ ಮಿಂಚಲಿದ್ದಾರೆ.

BJP Has Released The List Of Star Campaigners For Maharashtra Elections

ಕಾಂಗ್ರೆಸ್‌ನಿಂದ ಎರಡನೇ ಪಟ್ಟಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಕೂಡ ಭರ್ಜರಿ ತಯಾರಿ ನಡೆಸಿದೆ. ಈ ಹಿನ್ನೆಲೆ ಕಾಂಗ್ರೆಸ್ ಇಂದು 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ರಿಲೀಸ್‌ ಮಾಡಿದೆ. ಇಲ್ಲಿವರೆಗೆ ಕಾಂಗ್ರೆಸ್‌ 71 ಅಭ್ಯರ್ಥಿಗಳನ್ನು ಘೋಷಿಸಿದೆ.

ಇಂದು ಕಾಂಗ್ರೆಸ್‌ ರಿಲೀಸ್‌ ಮಾಡಿರೋ ಎರಡನೇ ಪಟ್ಟಿಯಲ್ಲಿ ಕೃಷ್ಣರಾವ್ ಪಾಂಡವ್ (ನಾಗ್ಪುರ ದಕ್ಷಿಣ ಕ್ಷೇತ್ರ), ಶೇಖರ್ ಪ್ರಮೋದಬಾಬು ಶೆಂಡೆ (ವಾರ್ಧಾ), ಪ್ರೊ.ವಸಂತ್ ಚಿಂದೂಜಿ ಪುರ್ಕೆ (ರಾಳೇಗಾಂವ್‌) ಮತ್ತು ಕೈಲಾಸ್ ಕಿಸನ್‌ರಾವ್ ಗೊರ್ತಂಟ್ಯಾಲ್ (ಜಲ್ನಾ) ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ.

BJP Has Released The List Of Star Campaigners For Maharashtra Elections

ಕಾಂಗ್ರೆಸ್‌ ಮೊನ್ನೆ 48 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ನಿನ್ನೆ ಸಂಜೆ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳನ್ನು ಫೈನಲ್‌ ಮಾಡಲಾಯಿತು. ಇದೀಗ ಇಂಡಿಯಾ ಮೈತ್ರಿಕೂಟದ ಸಮಾಜವಾದಿ ಪಕ್ಷ ಕೂಡ ಹೆಚ್ಚು ಸ್ಥಾನಗಳನ್ನು ನೀಡುವಂತೆ ಕೇಳಿದೆ.

ಮೊದಲ ಪಟ್ಟಿಯಲ್ಲಿ ಹಲವು ಹಾಲಿ ಶಾಸಕರನ್ನು ಕಾಂಗ್ರೆಸ್‌ ಉಳಿಸಿಕೊಂಡಿದ್ದು, ಅವರಿಗೇ ಈ ಬಾರಿಯೂ ಟಿಕೆಟ್‌ ನೀಡಿದೆ. ನಾನಾ ಪಟೋಲೆ, ಪೃಥ್ವಿರಾಜ್ ಚವಾಣ್ ಸೇರಿದಂತೆ ಹಿರಿಯ ನಾಯಕರಿಗೂ ಈ ಚುನಾವಣೆಯಲ್ಲಿ ಮತ್ತೆ ಅವಕಾಶ ನೀಡಿದೆ.

ಎನ್‌ಸಿಪಿ (ಅಜಿತ್‌ ಪವಾರ್‌ ಬಣ) ಸೇರಲು ಇಬ್ಬರು ಶಾಸಕರಿಗೆ ಕೋಟ್ಯಂತರ ರೂಪಾಯಿ ಆಫರ್‌ ಮಾಡಿರುವ ವಿಚಾರ ಗಮನಕ್ಕೆ ಬಂದಿದೆ. ಇದು ಪಕ್ಷಾಂತರ ನಿಷೇಧ ಕಾನೂನಿನಡಿ ಬರುತ್ತದೆ. ಲಂಚ ನೀಡುವುದು ಮತ್ತು ಸ್ವೀಕರಿಸುವುದು ಕ್ರಿಮಿನಲ್ ಚಟುವಟಿಕೆ ಎಂದು ಕಾಂಗ್ರೆಸ್‌ನ ಮಹಾರಾಷ್ಟ್ರ ಉಸ್ತುವಾರಿ ರಮೇಶ್‌ ಚೆನ್ನಿತ್ತಲ ಆರೋಪ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಮೂರು ರಾಜಕೀಯ ಪಕ್ಷಗಳು ಪ್ರಬಲವಾಗಿವೆ. ಕಾಂಗ್ರೆಸ್, ಎನ್‌ಸಿಪಿ-ಎಸ್‌ಸಿಪಿ ಮತ್ತು ಶಿವಸೇನೆ (ಯುಬಿಟಿ). ಈ ಪಕ್ಷಗಳ ನಡುವೆ ಸೀಟು ಹಂಚಿಕೆ ನ್ಯಾಯಯುತವಾಗಿದೆ ಮತ್ತು ಸಮಾನವಾಗಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಹರಿಯಾಣದಲ್ಲಿ ಕಾಂಗ್ರೆಸ್ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಅಲ್ಲಿ ಸರ್ಕಾರ ರಚನೆ ಮಾಡಲಿಲ್ಲ. ಇದು ಮಹಾ ವಿಕಾಸ್ ಅಘಾಡಿ ಎಂದು ಪ್ರತಿಪಾದಿಸಿದ್ದಾರೆ. ಮತ್ತೊಂದೆಡೆ ಮಹಾಯುತಿ ಒಕ್ಕೂಟವು ಕೂಡ ಪ್ರಬಲ ಸ್ಪರ್ಧೆ ನೀಡಲು ಎಲ್ಲ ರೀತಿಯಲ್ಲೂ ಸಜ್ಜಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+