• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ರಾಜ್ಯಗಳ ಉಪಚುನಾವಣೆ-2022ಯಲ್ಲಿ ಬಿಜೆಪಿಗೆ 4 ಸ್ಥಾನ

|
Google Oneindia Kannada News

ನವದೆಹಲಿ, ನವೆಂಬರ್, 06: ದೇಶದ ಆರು ರಾಜ್ಯಗಳ ಏಳು ಉಪಚುನಾವಣೆ (2022) ಮತದಾನ ಎಣಿಕೆ ಭಾನುವಾರ ನಡೆದಿದ್ದು, ಬಿಜೆಪಿ ಪಕ್ಷವು ಏಳರಲ್ಲಿ ನಾಲ್ಕು ಸ್ಥಾನಗಳನ್ನು ಬಾಚಿಕೊಂಡಿದೆ. ಹರಿಯಾಣ, ಒಡಿಶಾ ಮತ್ತು ಉತ್ತರ ಪ್ರದೇಶದಲ್ಲಿ ಭಾರಿ ಅಂತರದಿಂದ ಗೆದ್ದಿದೆ. ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಬಿಜೆಪಿ ವಿಜಯ ಸಾಧಿಸಿದೆ.

ಉಳಿದ ಮೂರು ಸ್ಥಾನಗಳನ್ನು ಆರ್‌ಜೆಡಿ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಟಿಆರ್‌ಎಸ್ ಪಕ್ಷದ ಅಭ್ಯರ್ಥಿಗಳ ಪಾಲಾಗಿವೆ.

ಉಪಚುನಾವಣೆ 2022: 3 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವಿನ ಸಾಧ್ಯತೆ ಉಪಚುನಾವಣೆ 2022: 3 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವಿನ ಸಾಧ್ಯತೆ

ಮಹಾರಾಷ್ಟ್ರ ರಾಜ್ಯದಲ್ಲಿ ಶಿವಸೇನೆಯ ಹಾಲಿ ಶಾಸಕ ರಮೇಶ್ ಲಟ್ಕೆ ಅವರು ಹಠಾತ್ ನಿಧನರಾದ ನಂತರ ಅಂಧೇರಿ (ಪೂರ್ವ) ಸ್ಥಾನ ತೆರವಾಗಿತ್ತು. ಪಕ್ಷದ ಏಕನಾಥ್ ಶಿಂಧೆ ಅವರ ಬಹಿರಂಗ ಮತ್ತು ದಿಟ್ಟ ದಂಗೆಯ ನಂತರ ಶಿವಸೇನೆ ಇಲ್ಲಿ ಹಿನ್ನಡೆ ಅನುಭವಿಸಲು ಕಾರಣವಾಯಿತು.

ಇನ್ನು ಉದ್ಧವ್ ಠಾಕ್ರೆ ಬಣದ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ರುತುಜಾ ಲಟ್ಕೆ ಅವರನ್ನು ಸೋಲಿಸಲು ಪ್ರತಿಸ್ಪರ್ಧಿ ಬಣ ಮತ್ತು ಬಿಜೆಪಿ ನೋಟಾವನ್ನು ಬಳಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದರು. ಸದ್ಯ ರುತುಜಾ ಲಟ್ಕೆ 4,277 ಮತಗಳನ್ನು ಪಡೆದು ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಬಿಹಾರದಲ್ಲಿ ಈ ವರ್ಷದ ಆರಂಭದಲ್ಲಿ ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿ (ಯು) ಪ್ರಮುಖ ಪತನದತ್ತ ಸಾಗಿತು. ಇದಕ್ಕೆ ಈ ರಾಜ್ಯದಲ್ಲಿ ನಡೆದ ಮೈತ್ರಿಯೇ ಕಾರಣ ಎನ್ನಲಾಗಿದೆ. ಶಾಸಕ ಸುಭಾಷ್ ಸಿಂಗ್ ಅವರ ಸಾವಿನಿಂದಾಗಿ ಗೋಪಾಲ್‌ಗಂಜ್‌ನಲ್ಲಿ ಉಪಚುನಾವಣೆ ಅನಿವಾರ್ಯವಾಯಿತು.

ಬಿಜೆಪಿಯು ಸುಭಾಷ್ ಸಿಂಗ್ ಅವರ ವಿಧವೆ ಕುಸುಮ್ ದೇವಿ ಅವರನ್ನು ಗೋಪಾಲ್‌ಗಂಜ್‌ನಲ್ಲಿ ಮತ್ತು ಆರ್‌ಜೆಡಿ ಮೊಕಾಮಾದಲ್ಲಿ ಅನಂತ್ ಕುಮಾರ್ ಸಿಂಗ್ ಅವರ ಪತ್ನಿ ನೀಲಂ ಅವರನ್ನು ಕಣಕ್ಕಿಳಿಸಿತು. ಈ ಇಬ್ಬರೂ ಅಭ್ಯರ್ಥಿಗಳು ಸಮರ್ಥರು ಎಂಬುದು ಗೆಲುವಿನ ಬಳಿಕ ಸಾಬೀತಾಗಿದೆ.

BJP gets 4 seats in 6 state by elections 2022

ಉತ್ತರ ಪ್ರದೇಶದಲ್ಲಿ ಬಿಜೆಪಿ ಐತಿಹಾಸಿಕ ಜಯ

ಉತ್ತರ ಪ್ರದೇಶ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಿದೆ. ಸುಮಾರು ನಾಲ್ಕು ದಶಕಗಳಲ್ಲಿ ರಾಜ್ಯದಲ್ಲಿ ಸತತ ಎರಡನೇ ಅವಧಿಯನ್ನು ಗಳಿಸಿದ ಮೊದಲ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಪಕ್ಷದ ಶಾಸಕ ಅರವಿಂದ್ ಗಿರಿ ಅವರು ಸೆಪ್ಟೆಂಬರ್‌ನಲ್ಲಿ ಹೃದಯಾಘಾತದಿಂದ ನಿಧನರಾದ ನಂತರ ತೆರವಾಗಿದ್ದ ಗೋಲ ಗೋಕರನಾಥ ಸ್ಥಾನವನ್ನು ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಇನ್ನು ಒಡಿಶಾದಲ್ಲಿ ಬಿಜೆಪಿ ಶಾಸಕ ಬಿಷ್ಣು ಚರಣ್ ಸೇಥಿ ಸೆಪ್ಟೆಂಬರ್‌ನಲ್ಲಿ ನಿಧನದ ನಂತರ ಅಲ್ಲಿನ ಧಾಮ್‌ನಗರ ಕ್ಷೇತ್ರವು ಖಾಲಿಯಾಗಿತ್ತು. ಸೂರ್ಯಬಂಶಿ ಸೂರಜ್‌ಗೆ ಬಿಜೆಪಿ ಉಪಚುನಾವಣೆಗೆ ಟಿಕೆಟ್ ನೀಡಿತು. ಅಭ್ಯರ್ಥಿಯು ಕ್ಷೇತ್ರದ ಜನರು ಕುರಿತು ಒಂದಷ್ಟು ಹೇಳಿಕೆಗಳನ್ನು ನೀಡಿದ್ದರು. ಸದ್ಯ ಅವರು ಪ್ರತಿಸ್ಪರ್ಧಿ ಬಿಜೆಡಿ ಅಭ್ಯರ್ಥಿ ಅಬಂತಿ ದಾಸ್ ವಿರುದ್ಧ 9,802 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.

English summary
6 state by elections 2022 results list here, BJP gets 4 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X