ಭಾರತದ ರಾಷ್ಟ್ರ ಧ್ವಜದಲ್ಲಿ ಕ್ಯಾಮೆರಾ ಇದೆಯಂತೆ, ಕ್ಯಾತೆ ತೆಗೆದ ಪಾಕಿಸ್ತಾನ!

ಅಟ್ಟಾರಿ ಗಡಿಯಲ್ಲಿಹಾರಿಸಲಾದಭಾರತದ ರಾಷ್ಟ್ರ ಧ್ವಜದಲ್ಲಿ ಕ್ಯಾಮೆರಾ ಇಟ್ಟಿರಬಹುದು. ಈ ಮೂಲಕ ನಮ್ಮ ನೆಲದ ಮೇಲೆ ಗೂಢಚರ್ಯೆ ನಡೆಸುತ್ತಿರಬಹುದು ಎಂದು ಪಾಕಿಸ್ತಾನ ಹೇಳಿದೆ. ಮಾತ್ರವಲ್ಲ ಗಡಿ ರಕ್ಷಣಾ ಪಡೆಗೆ ಈ ಕುರಿತು ದೂರನ್ನೂ ಸಲ್ಲಿಸಿದೆ.

ಬೆಂಗಳೂರು, ಮಾರ್ಚ್ 7: ಪಾಕಿಸ್ತಾನ-ಭಾರತ ನಡುವಿನ ಅಟ್ಟಾರಿ ಗಡಿಯಲ್ಲಿ ಭಾರತ110 ಮೀಟರ್ ಎತ್ತರದ ಬೃಹತ್ ರಾಷ್ಟ್ರ ಧ್ವಜವನ್ನು ಹಾರಿಸಿತ್ತು. ಈ ರಾಷ್ಟ್ರ ಧ್ವಜವನ್ನು ಪಾಕಿಸ್ತಾನದಿಂದಲೂ ನೋಡಬಹುದಾಗಿದೆ.

24 ಮೀಟರ್ ಅಗಲದ ಈ ರಾಷ್ಟ್ರಧ್ವಜವನ್ನು ಪಾಕಿಸ್ತಾನದ ಮೇಲೆ ಗೂಢಚರ್ಯೆ ನಡೆಸಲು ಸ್ಥಾಪಿಸಲಾಗಿದೆ ಎಂದು ಪಾಕಿಸ್ತಾನ ಕ್ಯಾತೆ ತೆಗೆದಿದೆ.[ವಾಘಾ ಗಡಿಯಲ್ಲಿ ಹಾರಿತು ಭಾರತದ ಬೃಹತ್ ತ್ರಿವರ್ಣ ಧ್ವಜ]

Bizarre Pak thinks tallest Triclour is meant for spying

ಭಾರತದ ರಾಷ್ಟ್ರ ಧ್ವಜದಲ್ಲಿ ಕ್ಯಾಮೆರಾ ಇಟ್ಟಿರಬಹುದು. ಈ ಮೂಲಕ ನಮ್ಮ ನೆಲದ ಮೇಲೆ ಗೂಢಚರ್ಯೆ ನಡೆಸುತ್ತಿರಬಹುದು ಎಂದು ಪಾಕಿಸ್ತಾನ ಹೇಳಿದೆ. ಮಾತ್ರವಲ್ಲ ಗಡಿ ರಕ್ಷಣಾ ಪಡೆಗೆ ಈ ಕುರಿತು ದೂರನ್ನೂ ಸಲ್ಲಿಸಿದೆ. ಧ್ವಜದಲ್ಲಿ ಕ್ಯಾಮೆರಾ ಇದೆ, ಇದು ರಕ್ಷಣೆಗೆ ತೊಂದರೆ ತಂದೊಡ್ಡಿದೆ ಎಂದು ಹೇಳಿದೆ.

ಆದರೆ ಪಾಕಿಸ್ತಾನದ ಈ ಆರೋಪಕ್ಕೆ ಭಾರತ ನಗೆಗಡಲ್ಲಿ ತೇಲಿದ್ದು ಪಾಕಿಸ್ತಾನದ ಹೇಳಿಕೆ ಅಸಂಬದ್ಧ, ಮಕ್ಕಳಾಟಿಕೆ, ಪರಿಪಕ್ವತೆ ಇಲ್ಲದ ಆರೋಪ ಎಂದು ಹೇಳಿದೆ. ತ್ರಿವರ್ಣ ಧ್ವಜವನ್ನು ಹಾರಿಸುವುದು ನಮ್ಮ ಹೆಮ್ಮೆಯಾಗಿದೆ. ನಾವು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಭಾರತ ಪಾಕಿಸ್ತಾನಕ್ಕೆ ಖಾರವಾಗಿ ಉತ್ತರಿಸಿದೆ.[ಮುಂಬೈ ದಾಳಿಯಲ್ಲಿ ಪಾಕ್ ಸಂಚು, ಅಧಿಕಾರಿ ಒಪ್ಪಿಕೊಂಡ ಅರ್ಧ ಸತ್ಯ]

ಧ್ವಜ ಗಡಿಯಿಂದ 200 ಮಿಟರ್ ದೂರದಲ್ಲಿದೆ. ಸಾಕಷ್ಟು ದೂರದಲ್ಲೇ ಇರುವುದರಿಂದ ಯಾವುದೇ ಕಾನೂನು ಹಾಗೂ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+