80 Lakh Salary: ಈ ಕೆಲಸ ಮಾಡಿದರೆ 80 ಲಕ್ಷ ಸಂಬಳ ಗ್ಯಾರಂಟಿ!

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಸಂಬಳ ಎಷ್ಟಿರಬಹುದು? ಈಗಿನ ಕಾಲದಲ್ಲಿ 20ರಿಂದ 30 ಸಾವಿರ ರೂಪಾಯಿ ಸಿಕ್ಕರೆ ಅದೇ ದೊಡ್ಡ ಸಂಬಳ. ಆದ್ರೆ ಬಹುತೇಕರು ಇದಕ್ಕಿಂತ ಕಮ್ಮಿ ಸಂಬಳದಲ್ಲಿ ಜೀವನ ನಡೆಸುತ್ತಾರೆ. ಇನ್ನು ಇಲ್ಲೊಂದು ಕೆಲಸಕ್ಕೆ ಬರೋಬ್ಬರಿ 80 ಲಕ್ಷ ರೂಪಾಯಿ ಸಂಬಳ ಫಿಕ್ಸ್ ಆಗಿದೆ. ಅರೆರೆ ಯಾವುದು ಆ ಕೆಲಸ ಅಂದ್ರಾ?

ಹೌದು, ಅಮೆರಿಕದಲ್ಲಿ ಭಾರತೀಯ ಮೂಲದ ಖ್ಯಾತ ಉದ್ಯಮಿ ವಿವೇಕ್‌ ರಾಮಸ್ವಾಮಿ ಅವರು ಒಂದು ದೊಡ್ಡ ಆಫರ್ ನೀಡಿದ್ದಾರೆ. ಉದ್ಯಮಿ ವಿವೇಕ್‌ ರಾಮಸ್ವಾಮಿ ಕೊಟ್ಟಿರುವ ಜಾಬ್ ಆಫರ್ ನೋಡಿ, ನಿರುದ್ಯೋಗಿಗಳು ಮಾತ್ರವಲ್ಲ ಕೈಯಲ್ಲಿ ಕೆಲಸ ಇರುವವರು ಕೂಡ ಈಗ ಹೊಸ ಸ್ಕೆಚ್ ಹಾಕಿದ್ದಾರೆ. ಬರೋಬ್ಬರಿ 80 ಲಕ್ಷ ರೂಪಾಯಿ ಸಂಬಳ ಬರುವ, ಗ್ಯಾರಂಟಿ ಆಫರ್ ಕೊಟ್ಟಿದ್ದಾರೆ ಉದ್ಯಮಿ ವಿವೇಕ್‌ ರಾಮಸ್ವಾಮಿ. ಹಾಗಾದರೆ ಈ ಕೆಲಸವಾದ್ರು ಏನು? ಬನ್ನಿ ತಿಳಿಯೋಣ.

billionaire-vivek-ramaswamy

ಇದೊಂದು ಕೆಲಸ ಸಿಕ್ಕರೆ ಲೈಫ್...

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ನಡೆಸಲು, ಭಾರತ ಮೂಲದ ಅಮೆರಿಕ ಉದ್ಯಮಿ ವಿವೇಕ್‌ ರಾಮಸ್ವಾಮಿ ಕೂಡ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಅಮೆರಿಕ ಅಧ್ಯಕ್ಷ ಪಟ್ಟಕ್ಕೆ ವಿವೇಕ್‌ ರಾಮಸ್ವಾಮಿ ಸ್ಪರ್ಧಿಸಿದರೆ ಫೈಟ್ ಗ್ಯಾರಂಟಿ ಅನ್ನೋ ಮಾತು ಬರುತ್ತಿದೆ. ಆದರೆ ಈ ಹೊತ್ತಲ್ಲಿ ವಿವೇಕ್‌ ರಾಮಸ್ವಾಮಿ ನೀಡಿದ ಜಾಬ್ ಆಫರ್ ತಲೆ ತಿರುಗಿಸಿದೆ. ಅರೆ ಅಂತಹ ಜಾಬ್ ಆಫರ್ ಆದ್ರೂ ಏನು ಅಂದ್ರೆ, ವಿವೇಕ್‌ ರಾಮಸ್ವಾಮಿ ಅವರ ಮಕ್ಕಳನ್ನು ಆರೈಕೆ ಮಾಡುವುದೇ ಈ ಕೆಲಸದ ಉದ್ದೇಶ. ಈ ಕೆಲಸಕ್ಕಾಗಿ ಸುಮಾರು 80 ಲಕ್ಷ ವಾರ್ಷಿಕ ಸಂಬಳ ಕೊಡುವುದಾಗಿ ಅವರು ತಿಳಿಸಿದ್ದಾರಂತೆ.

80 ಲಕ್ಷದ ಕೆಲಸಕ್ಕೆ ಅರ್ಹತೆ ಏನು?

ಮೊದಲೇ ಹೇಳಿದಂತೆ ರಿಪಬ್ಲಿಕ್ ಪಕ್ಷದಿಂದ ಅಮೆರಿಕ ಅಧ್ಯಕ್ಷ ಸ್ಥಾನಕ್ಕಾಗಿ ಆಕಾಂಕ್ಷಿಯಾಗಿರುವ ವಿವೇಕ್ ಅಮೆರಿಕದ ಪ್ರಬಲ ರಾಜಕಾರಣಿ ಕೂಡ ಹೌದು. ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂವಾದಕ್ಕೆ ಅರ್ಹತೆ ಪಡೆದ ಕಾರಣ, ಇತ್ತೀಚಿಗೆ ರಾಜಕೀಯದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ. ಈ ಹಿನ್ನೆಲೆ ತಮ್ಮ ಇಬ್ಬರು ಗಂಡು ಮಕ್ಕಳನ್ನು ನೋಡಿಕೊಳ್ಳಲು ಒಬ್ಬರು ನಾನಿ ಬೇಕು ಎಂದು EstateJobs.com ವೆಬ್‌ಸೈಟ್‌ನಲ್ಲಿ ಜಾಹೀರಾತು ಕೊಟ್ಟಿದ್ದಾರೆ ಉದ್ಯಮಿ ವಿವೇಕ್.

ಇನ್ನು ಉದ್ಯಮಿ ವಿವೇಕ್‌ ರಾಮಸ್ವಾಮಿ ಅವರು ನೀಡಿರುವ ಜಾಹೀರಾತಿನ ಪ್ರಕಾರ, ಅವರ ಕುಟುಂಬಕ್ಕೆ ಒಬ್ಬರು ನಾನಿ ಬೇಕಾಗಿದ್ದು. ಇಬ್ಬರು ಗಂಡು ಮಕ್ಕಳನ್ನ ನೋಡಿಕೊಳ್ಳಲು ಅವರು ವಾರದಲ್ಲಿ 82 ಗಂಟೆ ಕೆಲಸ ಮಾಡಬೇಕು. ಹಾಗೇ ಅವರ ಕುಟುಂಬದಲ್ಲಿ ಒಬ್ಬರಾಗುವಂತಹ ಕಾಳಜಿ, ಮಮತೆ, ಪ್ರೀತಿ & ವಿಶ್ವಾಸ ಹೊಂದಿರುವ ಮಹಿಳೆ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಲಾಗಿದೆ. ಹಾಗೇ ವಾರದಲ್ಲಿ ಒಂದು ದಿನ ಅವರಿಗೆ ರಜೆ ಕೂಡ ನೀಡುವ ಬಗ್ಗೆ ತಿಳಿಸಲಾಗಿದೆ. ಅಮೆರಿಕದ ಒಹಿಯೊ ರಾಜ್ಯದ ಸಿನ್ಸಿನಾಟಿಯಲ್ಲಿ ನೆಲೆಸಿರುವ ವಿವೇಕ್ ಅವರು 2015 ರಲ್ಲಿ ಅಪೂರ್ವಾ ಟಿ. ರಾಮಸ್ವಾಮಿ ಅವರನ್ನು ಮದುವೆಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+