ಬಿಹಾರದಲ್ಲಿ ಲಾಲೂಗೆ ತಿರುಗೇಟು ಕೊಟ್ಟ ಮೋದಿ

ಪಾಟ್ನಾ, ಅಕ್ಟೋಬರ್ 08 : 'ಜಂಗಲ್ ರಾಜ್ ಅಥವ ವಿಕಾಸ್ ರಾಜ್ ಯಾವುದು ಬೇಕೋ? ಆಯ್ಕೆ ನಿಮ್ಮದು' ಎಂದು ಪ್ರಧಾನಿ ನರೇಂದ್ರ ಮೋದಿ ಬಿಹಾರದ ಜನತೆಗೆ ಹೇಳಿದ್ದಾರೆ. ಗುರುವಾರ ಬಿಹಾರದಲ್ಲಿ ನಾಲ್ಕು ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ ಲಾಲ್ ಪ್ರಸಾದ್ ಅವರ ಟೀಕೆಗೆ ಪ್ರತ್ಯುತ್ತರ ನೀಡಿದರು.

ಗುರುವಾರ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, 'ಜಯಪ್ರಕಾಶ್ ನಾರಾಯಣ್ ಜೊತೆ ಬೆಳೆದ ಹಾಗೂ ಜೆಪಿ ಸಿದ್ಧಾಂತಗಳನ್ನು ಹೇಳುತ್ತಿದ್ದ ಲಾಲೂ, ನಿತೀಶ್ ಕುಮಾರ್ ಈಗ ಕಾಂಗ್ರೆಸ್ ಅಧಿಕಾರದ ಆಸೆಯಿಂದ ಕಾಂಗ್ರೆಸ್ ಪಕ್ಷದೊಂದಿಗೆ ಸೇರಿಕೊಂಡಿದ್ದಾರೆ' ಎಂದು ಆರೋಪಿಸಿದರು. [ಬೆಂಗಳೂರಲ್ಲಿರುವ ಬಿಹಾರಿಗಳಿಗೆ ಗಾಳ ಹಾಕಿದ ಬಿಜೆಪಿ]

ತಮ್ಮ ಭಾಷಣದುದ್ದಕ್ಕೂ ಪ್ರತಿಪಕ್ಷಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ ಮೋದಿ, 'ಲಾಲೂಜಿ ಚುನಾವಣೆ ಬರುತ್ತದೆ, ಹೋಗುತ್ತದೆ. ಯಾದವ ಸಮುದಾಯ ಮೊದಲಿನಿಂದಲೂ ಗೋವುಗಳ ರಕ್ಷಣೆ ಮಾಡಿಕೊಂಡು ಬಂದಿದೆ. ಆ ಸಮುದಾಯಕ್ಕೆ ಅಪಮಾನ ಮಾಡಬೇಡಿ' ಎಂದು ಸಲಹೆ ನೀಡಿದರು. [ಜನತೆಯನ್ನು ವಂಚಿಸಿದ ಮೋದಿಗೆ ಶಿಕ್ಷೆಯಾಗಬೇಕು : ರಾಮ್]

'ಬಿಹಾರದಲ್ಲಿ ಅಭಿವೃದ್ಧಿ, ಯುವಜನರ ಏಳಿಗೆ ವಿಷಯ ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲಾಗುತ್ತಿದೆ. ಜನರು ವಿಕಾಸ್ ರಾಜ್‌ಗಾಗಿ ಬಿಜೆಪಿಗೆ ಮತನೀಡಬೇಕು' ಎಂದು ಮೋದಿ ಜನರಿಗೆ ಕರೆ ನೀಡಿದರು. ಮುಂಗೇರ್ ಸೇರಿದಂತೆ ಬಿಹಾರದಲ್ಲಿ ಇಂದು ನಾಲ್ಕು ಸಮಾವೇಶಗಳನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಸಮಾವೇಶದ ಚಿತ್ರಗಳು..... [ಪಿಟಿಐ ಚಿತ್ರಗಳು]

ಲಾಲೂಗೆ ತಿರುಗೇಟು ಕೊಟ್ಟ ಮೋದಿ

ಲಾಲೂಗೆ ತಿರುಗೇಟು ಕೊಟ್ಟ ಮೋದಿ

ಬಿಹಾರದ ಮುಂಗೇರ್‌ನಲ್ಲಿ ಗುರುವಾರ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ, 'ಡಾಕ್ಟರ್ ಜಯಪ್ರಕಾಶ್ ನಾರಾಯಣ್ ಜೊತೆ ಬೆಳೆದ ಹಾಗೂ ಜೆಪಿ ಸಿದ್ಧಾಂತಗಳನ್ನು ಹೇಳುತ್ತಿದ್ದ ಲಾಲೂ, ನಿತೀಶ್ ಕುಮಾರ್ ಈಗ ಕಾಂಗ್ರೆಸ್ ಪಕ್ಷದೊಂದಿಗೆ ಸೇರಿಕೊಳ್ಳುವ ಮೂಲಕ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಇದು ಕೇವಲ ಅಧಿಕಾರಕ್ಕಾಗಿ ಮಾತ್ರ' ಎಂದು ಮೋದಿ ಹೇಳಿದರು.

ಆಯ್ಕೆ ಬಿಹಾರದ ಜನರದ್ದು

ಆಯ್ಕೆ ಬಿಹಾರದ ಜನರದ್ದು

'ಬಿಹಾರದ ಚುನಾವಣೆ ಜಂಗಲ್ ರಾಜ್ ಮತ್ತು ವಿಕಾಸ್ ರಾಜ್ ನಡುವಿನ ಸಮರವಾಗಿದ್ದು, ಯಾವುದು ಬೇಕು ಎಂಬುದನ್ನು ನೀವು ಆಯ್ಕೆ ಮಾಡಿಕೊಳ್ಳಿ' ಎಂದು ಪ್ರಧಾನಿ ನರೇಂದ್ರ ಮೋದಿ ಬಿಹಾರದ ಜನತೆಗೆ ಹೇಳಿದರು.

ಲಾಲೂ ಅಪಮಾನ ಮಾಡಿದ್ದಾರೆ

ಲಾಲೂ ಅಪಮಾನ ಮಾಡಿದ್ದಾರೆ

'ಹಿಂದೂಗಳು ಕೂಡಾ ಗೋಮಾಂಸ ತಿನ್ನುತ್ತಿದ್ದಾರೆ' ಎಂಬ ಹೇಳಿಕೆ ನೀಡಿದ್ದ ಲಾಲೂ ಪ್ರಸಾದ್ ಯಾದವ್ ಅವರಿಗೆ ತಿರುಗೇಟು ಕೊಟ್ಟ ಮೋದಿ, ಲಾಲೂ ಯದುವಂಶವನ್ನು ಅಪಮಾನ ಮಾಡಿದ್ದಾರೆ. ಯುದುವಂಶ ಭಾರತಕ್ಕೆ ಕ್ರಾಂತಿ ತಂದುಕೊಟ್ಟಿದೆ' ಎಂದು ಮೋದಿ ಬಣ್ಣಿಸಿದರು.

ಚುನಾವಣೆ ಬರುತ್ತದೆ ಹೋಗುತ್ತದೆ

ಚುನಾವಣೆ ಬರುತ್ತದೆ ಹೋಗುತ್ತದೆ

'ಲಾಲೂಜಿ ಚುನಾವಣೆ ಬರುತ್ತದೆ ಹೋಗುತ್ತದೆ. ಆದರೆ, ನಿಮ್ಮ ಜೊತೆ ಇರುವವರನ್ನು ಮರೆಯಬೇಡಿ, ಯಾದವ ಸಮುದಾಯ ಮೊದಲಿನಿಂದಲೂ ಗೋ ರಕ್ಷಣೆ ಮಾಡಿಕೊಂಡು ಬಂದಿದೆ' ಎಂದು ಲಾಲೂಗೆ ಕಿವಿಮಾತು ಹೇಳಿದರು.

4 ಸಮಾವೇಶಗಳು

4 ಸಮಾವೇಶಗಳು

'ಬಿಹಾರದಲ್ಲಿ ಅಭಿವೃದ್ಧಿ, ಯುವಜನರ ಏಳಿಗೆ ವಿಷಯ ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಲಾಗುತ್ತಿದೆ. ಜನರು ವಿಕಾಸ್ ರಾಜ್‌ಗಾಗಿ ಬಿಜೆಪಿಗೆ ಮತನೀಡಬೇಕು' ಎಂದು ಮೋದಿ ಜನರಿಗೆ ಕರೆ ನೀಡಿದರು. ಮುಂಗೇರ್ ಸೇರಿದಂತೆ ಬಿಹಾರದಲ್ಲಿ ಇಂದು ನಾಲ್ಕು ಸಮಾವೇಶಗಳನ್ನು ಉದ್ದೇಶಿಸಿ ಮೋದಿ ಮಾತನಾಡಿದರು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+