ಜೆಡಿಯು ನಾಯಕನಿಗೆ ಕಳಿಸಿದ್ದ ಪಾರ್ಸಲ್ ನಲ್ಲಿ ಬಾಂಬ್
ಗಯಾ, ಮೇ 26: ಬಿಹಾರದಲ್ಲಿ ಬಾಂಬ್ ಸ್ಫೋಟ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈ ಬಾರಿ ದುಷ್ಕರ್ಮಿಗಳು ಗಾಡಿಯಲ್ಲಿ, ಕಸದ ತೊಟ್ಟಿಯಲ್ಲಿ ಬಾಂಬ್ ಇಟ್ಟಿಲ್ಲ. ಪಾರ್ಸಲ್ ತಂತ್ರ ಅನುಸರಿಸಿದ್ದಾರೆ.
ಸ್ಥಳೀಯ ಜೆಡಿಯು ನಾಯಕನ ಹೆಸರಿನಲ್ಲಿ ಬಂದ ಪಾರ್ಸಲ್ ನಲ್ಲಿ ಬಾಂಬ್ ಇತ್ತು. ಅದನ್ನು ತೆಗೆದು ನೋಡಿದ ಮನೆ ಕೆಲಸದವನ ಪ್ರಾಣವೇ ಹಾರಿ ಹೋಗಿದೆ.[ಟಿಎಂಸಿ ಶಾಸಕನ ಮನೆಯಲ್ಲಿ ಬಾಂಬ್ ಸ್ಫೋಟ]

ಗಯಾದ ಜೆಡಿಯು ಜಿಲ್ಲಾ ಘಟಕದ ಅಧ್ಯಕ್ಷ ಅಭಯ್ ಕುಶ್ವಾಹ ಅವರ ಹೆಸರಿಗೆ ಬಂದ ಪಾರ್ಸಲ್ ನ್ನು ಮಂಗಳವಾರ ಬೆಳಗ್ಗೆ ಕೆಲಸದಾಳು ಸಂತೋಷ್ ಕುಮಾರ್ ತೆರೆಯ ಹೋಗಿದ್ದಾರೆ. ಈ ವೇಳೆ ಬಾಂಬ್ ಏಕಾಏಕಿ ಸಿಡಿದಿದೆ. ಪರಿಣಾಮ ಸಂತೋಷ್ ಸ್ಥಳದಲ್ಲೇ ಸಾವನ್ನಪ್ಪಿದ್ದು,ಇನ್ನೊರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾನೆ.[ಕುಡಿದ ಮತ್ತಿನಲ್ಲಿ ಸಿಎಂ ಮನೆಯಲ್ಲಿ ಬಾಂಬ್ ಇದೆ ಎಂದ!]
ಕುಶ್ವಾಹ ಅವರನ್ನು ಗುರಿಯಾಗಿರಿಸಿಕೊಂಡು ಬಾಂಬ್ ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪ್ರಕರಣದ ಬಗ್ಗೆ ಇನ್ನು ಹೆಚ್ಚಿನ ತನಿಖೆ ನಡೆಯಬೇಕಾಗಿದ್ದು ದುಷ್ಕರ್ಮಿಗಳ ನಿಜ ಉದ್ದೇಶ ಏನಿತ್ತು? ಎಂಬುದನ್ನು ಕಂಡುಹಿಡಿಯಬೇಕಾಗಿದೆ.












Click it and Unblock the Notifications