ಬಿಹಾರ: ಗಣಿತ ಹಿಂದಿ ಪರೀಕ್ಷೆಗಳಲ್ಲಿ ಶಿಕ್ಷಕರೇ ಫೇಲ್!

ಏನಪ್ಪಾ ಅಂದರೆ ಬಿಹಾರ ರಾಜ್ಯದ ಶಿಕ್ಷಣ ಇಲಾಖೆಯು ಶಿಕ್ಷಕರಿಗಾಗಿ ಪುನರ್ ಮನನಾರ್ಥ ಗಣಿತ ಮತ್ತು ಹಿಂದಿ ವಿಷಯಗಳಲ್ಲಿ ಪರೀಕ್ಷೆಗಳನ್ನು ನಡೆಸಿತು. ಒಟ್ಟು 43,447 ಮಂದಿ ಪರೀಕ್ಷೆ ಬರೆದರು. ಆದ್ರೆ ಫಲಿತಾಂಶ ಹೊರಬೀಳುತ್ತಿದ್ದಂತೆ ಭಯಾನಕ ಸತ್ಯವೊಂದು ಹೊರಬಿದ್ದಿತ್ತು. ಏನೆಂದರೆ ಸರಿಸುಮಾರು 32,833 ಶಿಕ್ಷಕರಷ್ಟೇ ತೇರ್ಗಡೆಯಾಗಿದ್ದರು! ಅಂದರೆ ಕಾಲುಭಾಗ ಶಿಕ್ಷಕರು unfit ಆಗಿದ್ದಾರೆ.
ಅಂದಹಾಗೆ ಇವರೆಲ್ಲಾ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಇಂಗ್ಲೀಷ್, ಗಣಿತ, ಹಿಂದಿ ಮತ್ತು ಸಾಮಾನ್ಯ ಜ್ಞಾನ ವಿಷಯಗಳಲ್ಲಿ ಪರೀಕ್ಷೆ ಬರೆದಿದ್ದರು. ಈ 10,000 ಕ್ಕೂ ಹೆಚ್ಚು ಅನುತ್ತೀರ್ಣ ಶಿಕ್ಷಕರು ತಕ್ಷಣಕ್ಕೆ ತಮ್ಮ ವಿಷಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಇಲ್ಲವಾದಲ್ಲಿ, ಶಾಲೆ ಬಿಟ್ಟು ಮನೆಗೆ ಹೋರಡ್ತಿರಬೇಕು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಮರಜೀತ್ ಸಿನ್ಹಾ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
'ಅಂದಹಾಗೆ ಇನ್ನೊಂದು ಬಾರಿ ಮತ್ತೆ ಇವರು ಪರೀಕ್ಷೆ ಬರೆಯಬಹುದು. ಆದರೆ ಮೂರನೆಯ ಅವಕಾಶ ನೀಡಲಾಗುವುದಿಲ್ಲ' ಎಂದು ಸಿನ್ಹಾ ಸ್ಪಷ್ಟಪಡಿಸಿದ್ದಾರೆ. ಸೋಜಿಗದ ಸಂಗತಿಯೆಂದರೆ ಬಿಹಾರದವರು ಐಎಎಸ್ ಪರೀಕ್ಷೆಗಳನ್ನು ನೀರು ಕುಡಿದಷ್ಟು ಸುಲಭವಾಗಿ ಪಾಸು ಮಾಡುತ್ತಾರೆ ಎಂಬ ಮಾತು ಆಗಾಗ ಕೇಳಿಬರುತ್ತಿರುತ್ತದೆ.












Click it and Unblock the Notifications