Bihar Exit Poll 2025: ಬಿಹಾರ ಗೆದ್ದು ಬೀಗಲಿರುವ ಬಿಜೆಪಿ & ಜೆಡಿಯು ಮೈತ್ರಿಕೂಟ, ಎನ್‌ಡಿಎ ಸಮೀಕ್ಷೆ!
ಬಿಹಾರ ರಾಜ್ಯದ ವಿಧಾನಸಭೆ ಚುನಾವಣೆ ಇಂದು ಭರ್ಜರಿಯಾಗಿ ಮುಕ್ತಾಯ ಕಂಡಿದ್ದು, ಈ ಬಾರಿ ಕೂಡ ಬಿಜೆಪಿ & ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರ ಹಿಡಿಯುವುದು ಬಹುತೇಕ ಗ್ಯಾರಂಟಿ ಆಗಿದೆ. ಅದರಲ್ಲೂ ಎನ್‌ಡಿಟಿವಿ ಸಮೀಕ್ಷೆ ಪ್ರಕಾರ ಕೂಡ ಬಿಜೆಪಿ & ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು ಗ್ಯಾರಂಟಿ ಅಂತಾ ಹೇಳಲಾಗಿದೆ. ಹಾಗಾದ್ರೆ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ? ಭರ್ಜರಿ ಹೋರಾಟ ನಡೆಸಿದ ಕಾಂಗ್ರೆಸ್ & ಆರ್‌ಜೆಡಿ ನೇತೃತ್ವದ ಮೈತ್ರಿಕೂಟಕ್ಕೆ ಸಿಗುವ ಸ್ಥಾನಗಳು ಎಷ್ಟು?
ಕಳೆದ 3-4 ತಿಂಗಳಿಂದ ಚುನಾವಣೆ ಪ್ರಚಾರ, ಆರೋಪ & ಪ್ರತ್ಯಾರೋಪ, ಮತದಾರರ ಸೆಳೆಯುವ ತಂತ್ರಗಳೇ ಬಿಹಾರದಲ್ಲಿ ಸೌಂಡ್ ಮಾಡಿದ್ದವು. ಇಂದು ಅದಕ್ಕೆಲ್ಲಾ ತೆರೆ ಬಿತ್ತು, ಸಂಜೆಯ ನಂತರ ಬಿಹಾರ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ಹೊರ ಬಿದ್ದಿದೆ. ಹೀಗಿದ್ದಾಗ ಬಹುತೇಕ ಈಗಿನ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುವುದು ಗ್ಯಾರಂಟಿ ಆಗಿದೆ. ಎನ್‌ಡಿಟಿವಿ ಈಗ ನೀಡಿರುವ ಸಮೀಕ್ಷೆ ಮಾಹಿತಿಯಲ್ಲಿ ಕೂಡ ಬಿಜೆಪಿ & ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಗೆಲುವು ಗ್ಯಾರಂಟಿ ಆಗಿದೆ. ಹಾಗಾದರೆ ಯಾರಿಗೆ ಎಷ್ಟು ಸ್ಥಾನ?

ಬಿಹಾರ ಅಧಿಕಾರ ಎನ್‌ಡಿಎ ಪಾಲು?
ಅಂದಹಾಗೆ ಇದೀಗ ಎನ್‌ಡಿಟಿವಿ ನೀಡಿರುವ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ & ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬರೋಬ್ಬರಿ 152 ಸ್ಥಾನಗಳಲ್ಲಿ ಗೆದ್ದು ಬೀಗುವುದು ಗ್ಯಾರಂಟಿ. ಜೊತೆಗೆ ಕಾಂಗ್ರೆಸ್ & ಆರ್‌ಜೆಡಿ ನೇತೃತ್ವದ ಮೈತ್ರಿಕೂಟ ಕೇವಲ 84 ಸ್ಥಾನಗಳನ್ನು ಪಡೆಯಬಹುದು ಎಂದು ಎನ್‌ಡಿಟಿವಿ ನೀಡಿದ ಚುನಾವಣೋತ್ತರ ಸಮೀಕ್ಷೆಯಿಂದ ತಿಳಿದು ಬಂದಿದೆ. ಇನ್ನುಳಿದಂತೆ ಇತರರು 7 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ.
ಮತ್ತೊಮ್ಮೆ ಎನ್‌ಡಿಎ ಸರ್ಕಾರ...
ಇಡೀ ದೇಶ ಬಿಹಾರ ಚುನಾವಣೆ ಫಲಿತಾಂಶಕ್ಕೆ ಕಾಯುತ್ತಾ ಕುಳಿತಿದ್ದು, ಬಿಹಾರ ರಾಜ್ಯದಲ್ಲಿ ಇಂದು ಅಂತಿಮ ಹಂತದ ಮತದಾನ ನಡೆದಿದೆ. ಅಲ್ಲದೆ ಫಲಿತಾಂಶ ಹೊರಬೀಳುವ ಮೊದಲು ಸಮೀಕ್ಷೆಗಳ ಮಾಹಿತಿ ಭಾರಿ ಸದ್ದು ಮಾಡುತ್ತಿದ್ದು, ಎನ್‌ಡಿಎ ಅಧಿಕಾರ ಹಿಡಿಯುವುದು ಬಹುತೇಕ ಗ್ಯಾರಂಟಿ ಎನ್ನಲಾಗುತ್ತಿದೆ.
ಹೀಗಾಗಿಯೇ ಬಿಹಾರದಲ್ಲಿ ಸರ್ಕಾರ ರಚನೆ ಮಾಡಲು ಎನ್‌ಡಿಎ ನಾಯಕರು ಈಗಲೇ ಸಿದ್ಧತೆಯನ್ನ ಆರಂಭಿಸುತ್ತಾರಾ? ಎಂಬುದನ್ನ ಕಾದು ನೋಡಬೇಕಿದೆ. ಮತ್ತೊಂದು ಕಡೆ ಚುನಾವಣೆಗೂ ಮುನ್ನ ಬಿಹಾರದಲ್ಲಿ ದೊಡ್ಡ ದೊಡ್ಡ ಬೆಳವಣಿಗೆ ನಡೆದಿದ್ದವು, ಅದ್ರಲ್ಲೂ ಮೊದಲ ಹಂತದ ಮತದಾನದ ಸಮಯದಲ್ಲೇ ಹಿಂಸಾಚಾರ ಕೂಡ ನಡೆದಿತ್ತು.












Click it and Unblock the Notifications