Bihar Results: ಬಿಹಾರ ವಿಧಾನಸಭೆ ಅತಂತ್ರ? ಕುದುರೆ ವ್ಯಾಪಾರ ನಡೆಯುತ್ತಾ?
ಬಿಹಾರ ವಿಧಾನಸಭೆ ಚುನಾವಣೆ 2025 ಫಲಿತಾಂಶ ಪ್ರಕಟಣೆ ಶುರುವಾಗಿದ್ದು, ಎನ್‌ಡಿಎ ಹಾಗೂ ಮಹಾಘಟ್ ಬಂಧನ್ ನಡುವೆ ಜಿದ್ದಾಜಿದ್ದಿ ಜೋರಾಗಿದೆ. ಬಿಹಾರ ವಿಧಾನಸಭೆ ಚುನಾವಣೆ 2025ರ ಚುನಾವಣೋತ್ತರ ಸಮೀಕ್ಷೆಗಳು ಈಗಾಗಲೇ ಎನ್‌ಡಿಎ ಗೆಲುವು ಗ್ಯಾರಂಟಿ ಅಂತಾ ಹೇಳಿದ್ದರೂ, ಆರಂಭಿಕ ಹಂತದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಹೀಗಿದ್ದಾಗ ಬಿಹಾರ ವಿಧಾನಸಭೆ ಅತಂತ್ರ? ಕುದುರೆ ವ್ಯಾಪಾರ ನಡೆಯುತ್ತಾ?
ದೇಶದಲ್ಲೇ ಬಿಹಾರ ವಿಧಾನಸಭೆ ಚುನಾವಣೆ ಸಿಕ್ಕಾಪಟ್ಟೆ ಗಮನ ಸೆಳೆದ ರಾಜಕೀಯ ಬೆಳವಣಿಗೆ. ಬಿಹಾರ ಚುನಾವಣೆಯಲ್ಲಿ ಗೆಲುವು ಪಡೆಯಲು ಎನ್‌ಡಿಎ & ವಿಪಕ್ಷಗಳ ನಾಯಕರು ಭರ್ಜರಿ ಪ್ರಚಾರ ನಡೆಸಿದ್ರು. ಬಿಹಾರದಲ್ಲಿ ಈ ಬಾರಿ ಚುನಾವಣೆ ಗೆದ್ದು, ಅಧಿಕಾರ ಹಿಡಿಯುವುದು ಅಲ್ಲಿನ ಪಕ್ಷಗಳಿಗೆ ಪ್ರತಿಷ್ಠೆ ಆಗಿತ್ತು. ಯಾರಿಗೆ ಗೆಲುವು? ಯಾರಿಗೆ ಸೋಲು? ಎಂಬ ಲೆಕ್ಕಾಚಾರದ ನಡುವೆಯೇ ಇಂದು ಚುನಾವಣೆ ಫಲಿತಾಂಶ ಹೊರ ಬೀಳುತ್ತಿದೆ, ಆದರೆ ಆರಂಭಿಕ ಹಂತದಲ್ಲೇ ಬಿಹಾರದಲ್ಲಿ ಎನ್‌ಡಿಎ ಹಾಗೂ ಮಹಾಘಟ್ ಬಂಧನ್ ನಡುವೆ ಭಾರಿ ದೊಡ್ಡ ಹೋರಾಟವು ಶುರು ಆಗಿದೆ.

ಅತಂತ್ರ ವಿಧಾನಸಭೆ ಸೃಷ್ಟಿ ಗ್ಯಾರಂಟಿ?
ಬಿಹಾರದ ಈ ಎಲೆಕ್ಷನ್ ಲೋಕಸಭೆ ಚುನಾವಣೆ ಬಳಿಕ ಅತಿಹೆಚ್ಚು ಕುತೂಹಲ ಕೆರಳಿಸಿತ್ತು. ಹಲವು ವರ್ಷಗಳಿಂದಲೂ ನಿತೀಶ್ ಕುಮಾರ್ ಸಿಎಂ ಆಗಿದ್ದು, ಸಾಲು ಸಾಲು ಜಯ ಕಂಡರೂ ಬಿಹಾರದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬುದು ವಿರೋಧ ಪಕ್ಷಗಳ ನಾಯಕರ ಆರೋಪ. ಇಷ್ಟೆಲ್ಲಾ ಒತ್ತಡ ಹಾಗೂ ಹೋರಾಟದ ನಡುವೆ ಎನ್‌ಡಿಎ ಮೈತ್ರಿಕೂಟ ಮತ್ತೆ ಗೆದ್ದು ಬೀಗುವ ನಿರೀಕ್ಷೆಯಲ್ಲೇ ಇತ್ತು. ಹೀಗಿದ್ದಾಗ ಆರಂಭಿಕ ಹಂತದಲ್ಲೇ ದೊಡ್ಡ ತಲ್ಲಣ ಸೃಷ್ಟಿಯಾಗಿದೆ. ಬಿಹಾರದಲ್ಲಿ ಅತಂತ್ರವಾಗಿ ವಿಧಾನಸಭೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಾ? ಎಂಬ ಚರ್ಚೆ ಆರಂಭಿಕ ಹಂತದಲ್ಲೇ ಶುರುವಾಗಿದೆ.
ಸಿಎಂ ಸ್ಥಾನ ಯಾರಿಗೆ ಸಿಗಲಿದೆ?
ಬಿಹಾರದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಸಿಎಂ ಸ್ಥಾನವನ್ನು ತ್ಯಾಗ ಮಾಡುತ್ತಲೇ ಬಂದಿದೆ. ಬಿಜೆಪಿ ಪಾಲಿಗೆ ಸಿಎಂ ಸ್ಥಾನ ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ. ಇದೇ ವಿಚಾರಕ್ಕೆ ಇದೀಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೆ ಕಿರಿಕ್ ಆಗಲಿದೆ ಎಂಬ ಸುದ್ದಿ ಹಬ್ಬಿದೆ. ಹಾಗೇ ಮುಂದಿನ ದಿನಗಳಲ್ಲಿ ನಿತೀಶ್ ಕುಮಾರ್ ಅವರನ್ನು ಕೆಳಗೆ ಇಳಿಸುವ ಪ್ರಯತ್ನ ಆಗುತ್ತಾ? ಎಂಬ ಚರ್ಚೆ ಕೂಡ ಜೋರಾಗಿದೆ. ಇಷ್ಟೆಲ್ಲದರ ನಡುವೆ ಇದೀಗ ಸರ್ಕಾರ ರಚನೆ ಮಾಡೋದಕ್ಕೆ ಎನ್‌ಡಿಎ ಮಿತ್ರ ಪಕ್ಷಗಳು ಸಜ್ಜಾಗಿವೆ. ಇದೆಲ್ಲವನ್ನೂ ಮೀರಿ ಬಿಹಾರ ವಿಧಾನಸಭೆ ಚುನಾವಣೆಯ ಅಖಾಡದಲ್ಲಿ ದೊಡ್ಡ ಹೆಸರು ಮಾಡಿದೆ ಎನ್‌ಡಿಎ ಮೈತ್ರಿಕೂಟ.












Click it and Unblock the Notifications