ಬಿಗ್ ಬಾಸ್ ಸ್ಪರ್ಧಿ ಪೂಜಾ ಮೇಲೆ ಸಾಮೂಹಿಕ ಅತ್ಯಾಚಾರ?

Posted By:
Subscribe to Oneindia Kannada

ಜೈಪುರ(ರಾಜಸ್ಥಾನ), ಜೂನ್ 16: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ 5ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಮಾಡೆಲ್ ಕಮ್ ನಟಿ ಪೂಜಾ ಮಿಶ್ರಾ ಹೇಳಿಕೆ ಎಲ್ಲರನ್ನು ಬೆಚ್ಚುವಂತೆ ಮಾಡಿದೆ.

ಜೂನ್ 10ರಂದು ಜೈಪುರದಲ್ಲಿ ನನ್ನ ಮೇಲೆ ಗ್ಯಾಂಗ್ ರೇಪ್ ನಡೆದಿದೆ, ಮೂರು ದುಷ್ಕರ್ಮಿಗಳು ನನಗೆ ಕಿರುಕುಳ ನೀಡಿ ರೇಪ್ ಮಾಡಿದರು ಎಂದು ಪೂಜಾ ಅವರು ದೂರು ದಾಖಲಿಸಿದ್ದಾರೆ. [ಸೋನಾಕ್ಷಿ, ಇಶಾ ಕೊಪ್ಪಿಕರ್ ಮೇಲೆ ಬಿತ್ತು ಎಫ್ ಐಆರ್]

ವಿವಾದಿತ ನಟಿ ಪೂಜಾ ಮಿಶ್ರಾ ಅವರು ವಾಹಿನಿಯೊಂದರ ಜೀವನ ಶೈಲಿ ಕುರಿತ ಕಾರ್ಯಕ್ರಮದ 'ಅಭಿ ತೊ ಪಾರ್ಟಿ ಶುರು ಹುವಾ ಹೈ'ನ ಫೋಟೊ ಶೂಟ್​ಗಾಗಿ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

Big Boss 5 contestant Pooja Misrra alleges gang-rape; registers case

ದೂರಿನಲ್ಲಿ ಏನಿದೆ?: ಫೋಟೊ ಶೂಟ್ ಗಾಗಿ​ ಬಂದಿದ್ದ ನಾನು ಹೋಟೆಲ್ ರೂಮಿನಲ್ಲಿದ್ದೆ. ಫೊಟೋ ಶೂಟ್ ಮಾಡಲು ನೇಮಿಸಿದ್ದ ಮೂವರು ವಿಡಿಯೋಗ್ರಾಫರ್ ಗಳು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು. [ಬಿಗ್ ಬಾಸ್ ವಿರುದ್ಧ ತಿರುಗಿ ಬಿದ್ದ ಮಹಿಳಾಮಣಿಗಳು]

ಇದೆಲ್ಲವೂ ಫೋಟೋಶೂಟ್ ಆದ ಮೇಲೆ ನಡೆದ ಘಟನೆಯಾಗಿದೆ. ಸಂತಸಕೂಟದಲ್ಲಿ ನನಗೆ ತಿಳಿಯದಂತೆ ಮತ್ತು ಬರುವ ಪಾನೀಯವನ್ನು ಸೇವನೆ ಮಾಡುವಂತೆ ಪ್ರಚೋದಿಸಿ ನಂತರ ಅತ್ಯಾಚಾರವೆಸಗಿದ್ದಾರೆ. ವಿಡಿಯೋಗ್ರಾಫರ್ ಮೊಸಿಮ್, ಸುಹಾನ್ ಹಾಗೂ ಹರೀಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಘಟನೆಯ ಸತ್ಯಾಸತ್ಯತೆ ಬಗ್ಗೆ ಜೈಪುರದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ವಿವಾದಗಳ ಜತೆ ಬೆಳೆದ ನಟಿ: 2015ರ ಆಗಸ್ಟ್​ ತಿಂಗಳಿನಲ್ಲಿ ನೋಯ್ಡಾದ ವಿಶ್ರಾಂತಿ ಗೃಹದಲ್ಲಿ ನನ್ನ ಮೇಲೆ ಓರ್ವ ವ್ಯಕ್ತಿಯಿಂದ ಮೂರು ದಿನ ಕಾಲ ನಿರಂತರ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'Big Boss 5' contestant Pooja Misrra is once again in the news for wrong reasons. Reportedly, the actress has alleged that she was recently sexually assaulted by three men in Jaipur.
Please Wait while comments are loading...