'ಬೀಡಿ' ಸೇದ ಬೇಡಿ: ಸಿಗರೇಟಿಗಿಂತ ಎಂಟು ಪಟ್ಟು ಹೆಚ್ಚು ಹಾನಿಕಾರಕ ಈ ಬೀಡಿ
ಬೀಡಿಯು, ತಂಬಾಕು ಚೂರುಗಳು ತುಂಬಿರುವ ಮರದ ಎಲೆಯಿಂದ ಸುತ್ತಲ್ಪಟ್ಟು, ಒಂದು ತುದಿಯಲ್ಲಿ ದಾರದಿಂದ ಅಥವಾ ಅಂಟಿನಿಂದ ಕಟ್ಟಲ್ಪಟ್ಟಿರುವ ತೆಳ್ಳನೆಯ ಸಿಗರೇಟು ಅಥವಾ ಕಿರು ಸಿಗಾರ್ ಎನ್ನಬಹುದು. ಭಾರತದ ಗ್ರಾಮೀಣ ಭಾಗದಲ್ಲಿ ಹುಟ್ಟಿಕೊಂಡ ಸಣ್ಣ ಉದ್ಯಮ ಒಂದು ಕಾಲದಲ್ಲಿ ತನ್ನದೇ ಆದ ಪಾರುಪತ್ಯ ಸಾಧಿಸಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಬೀಡಿ ಬಳಕೆ ಕಡಿಮೆಯಾಗಿದೆ.
ಧೂಮಪಾನ ಮಾಡುವವರಿಗೆ ಬೀಡಿಯ ಬಗ್ಗೆ ಸಾಮಾನ್ಯ ನಂಬಿಕೆಯೆಂದರೆ ಅದರಲ್ಲಿ ಕಡಿಮೆ ತಂಬಾಕು ಇರುತ್ತದೆ. ಹೀಗಾಗಿ ಇದು ಸಿಗರೇಟಿಗಿಂತ ಕಡಿಮೆ ಹಾನಿಕಾರಕವಾಗಿದೆ ಎನ್ನುವುದು. ಆದರೆ ತಜ್ಞರ ಪ್ರಕಾರ, ಬೀಡಿ ಎಲೆಗಳ ಅಡ್ಡಪರಿಣಾಮಗಳಿಂದ ಬೀಡಿ, ಸಿಗರೇಟ್‌ಗಿಂತ ಹೆಚ್ಚು ಅಪಾಯಕಾರಿ ಎಂದು ಸಾಬೀತಾಗಿದೆ.

ಪ್ರತಿ ವರ್ಷ ಮಾರ್ಚ್ 13 ರಂದು ಧೂಮಪಾನ ನಿಷೇಧ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಧೂಮಪಾನದ ಅಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ. ಅಹಮದಬಾದ್‌ನ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ ಲಕ್ನೋದಲ್ಲಿ 2 ದಿನಗಳ ಮುಂಚಿತವಾಗಿ ಧೂಮಪಾನ ನಿಷೇಧ ದಿನವನ್ನು ಆಚರಿಸಿದ್ದು, ಈ ಕಾರ್ಯಕ್ರಮದಲ್ಲಿ ಬೀಡಿ ಸಿಗರೇಟ್‌ಗಿಂತ ಎಂಟು ಪಟ್ಟು ಹೆಚ್ಚು ಹಾನಿಕಾರಕ ಎಂದು ತಜ್ಞರು ತಿಳಿಸಿದ್ದಾರೆ.
ದೆಹಲಿಯ ವಲ್ಲಭಭಾಯಿ ಪಟೇಲ್ ಚೆಸ್ಟ್ ಇನ್‌ಸ್ಟಿಟ್ಯೂಟ್ (ವಿಪಿಸಿಐ) ಮಾಜಿ ನಿರ್ದೇಶಕ ಪ್ರೊಫೆಸರ್ ರಾಜೇಂದ್ರ ಪ್ರಸಾದ್ ಈ ಬಗ್ಗೆ ಮಾಹಿತಿ ನೀಡಿದ್ದು, 'ಬೀಡಿ ಮತ್ತು ಸಿಗರೇಟ್ ಹೋಲಿಕೆಯ ಅಧ್ಯಯನದ ನಡೆಸಲಾಗಿದ್ದು, ಇವೆರಡನ್ನೂ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಆದರೆ ತಂಬಾಕಿನ ಎಲೆಗಳಿಂದ ಮಾಡಿದ ಬೀಡಿಗಳನ್ನು ಸುಡುವುದರಿಂದ ಹೆಚ್ಚು ಹೊಗೆ ಉಂಟಾಗುತ್ತದೆ. ಹಾಗೂ ಶ್ವಾಸಕೋಶಕ್ಕೆ ಹೆಚ್ಚು ಹಾನಿಯಾಗುತ್ತದೆ' ಎಂದು ತಿಳಿಸಿದ್ದಾರೆ.
'ಧೂಮಪಾನ ಮಾಡುವವರು ಬೀಡಿಗಳಿಂದ ಆಳವಾದ ಉಸಿರನ್ನು ಒಳಗೆ ತೆಗೆದುಕೊಳ್ಳುತ್ತಾರೆ. ಇದರಿಂದ ಶ್ವಾಸಕೋಶಕ್ಕೆ ತೀವ್ರ ಹಾನಿಯಾಗುತ್ತದೆ. ಬೀಡಿಗಳಲ್ಲಿ ಸಿಗರೇಟ್‌ಗಿಂತ ನಾಲ್ಕು ಪಟ್ಟು ಕಡಿಮೆ ತಂಬಾಕು ಇದ್ದರೂ, ಅದನ್ನು ಬಳಸಿದ ವೇಳೆ ಸಿಗರೇಟ್‌ಗಿಂತ ಎಂಟು ಪಟ್ಟು ಹೆಚ್ಚು ಅಪಾಯಕಾರಿ ಎಂದು ಸಾಬೀತಾಗಿದೆ' ಎಂದು ತಜ್ಞರು ತಿಳಿಸಿದ್ದಾರೆ.












Click it and Unblock the Notifications