ವಿಚಾರವಾದಿಗಳ ಬಂಧನಕ್ಕೆ ಪ್ರಶ್ನೆ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ನವದೆಹಲಿ, ಸೆಪ್ಟೆಂಬರ್ 20: ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ವಿಚಾರವಾದಿಗಳ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ಕಾಯ್ದಿರಿಸಿದೆ.

ಸೋಮವಾರದ ವೇಳೆಗೆ ಈ ಅರ್ಜಿಗೆ ಲಿಖಿತ ಉತ್ತರ ನೀಡುವಂತೆ ಪ್ರತಿವಾದಿಗಳಿಗೆ ಅದು ಸೂಚಿಸಿದೆ.

ಇತಿಹಾಸಕಾರ್ತಿ ರೊಮಿಲಾ ಥಾಪರ್ ಮತ್ತು ಇತರೆ ನಾಲ್ವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ನ್ಯಾಯಪೀಠ ಮುಂದುವರಿಸಿತು.

Bhima koregaon case supreme court reserves order

ಐವರು ವಿಚಾರವಾದಿಗಳ ಗೃಹಬಂಧನವನ್ನು ಸುಪ್ರೀಂಕೋರ್ಟ್ ಬುಧವಾರ ವಿಸ್ತರಿಸಿ ಆದೇಶ ಹೊರಡಿಸಿತ್ತು. ಸೆ. 17ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಬಂಧಿತರ ವಿರುದ್ಧದ ಸಾಕ್ಷ್ಯಗಳು ಸೃಷ್ಟಿತವಾದವು ಎಂಬುದು ಕಂಡುಬಂದರೆ ವಿಶೇಷ ತನಿಖಾ ದಳದಿಂದ ತನಿಖೆಗೆ ಆದೇಶ ನೀಡುವುದಾಗಿ ಹೇಳಿತ್ತು.

ಬಂಧಿತರ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಎ.ಎಂ. ಸಿಂಘ್ವಿ, ಬಂಧಿತರ ವಿರುದ್ಧ ನಡೆಯುತ್ತಿರುವ ತನಿಖೆಯ ಮೇಲೆ ನ್ಯಾಯಾಲಯ ನಿಗಾ ವಹಿಸಬೇಕು ಎಂದು ಮನವಿ ಮಾಡಿದ್ದರು.

ಬಂಧಿತ ವರವರರಾವ್ ಒಬ್ಬ ಜನಪ್ರಿಯ ಕವಿ. ಅವರಿಗೆ 79 ವರ್ಷ ವಯಸ್ಸಾಗಿದೆ. ಈ ಪ್ರಕರಣ ಒಂದು ರೀತಿ, ಅವರ ಹೆಸರನ್ನು ಕೆಡಿಸಿ ಅವರನ್ನು ಸಂಕಷ್ಟಕ್ಕೆ ನೂಕುವಂತಹ ನಡೆಯಾಗಿದೆ ('Give a dog a bad name and then hang him') ಎಂದು ಸಿಂಘ್ವಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+