ಇಂಜೆಕ್ಷನ್ ಬದಲು ಮೂಗಿನಲ್ಲಿ 2 ಹನಿ ಕೊರೊನಾ ಲಸಿಕೆ ಪ್ರಯೋಗ

ಕೊರೊನಾ ಲಸಿಕೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ ಸಿಕ್ಕಿದ್ದರಿಂದ ಉತ್ತೇಜಿತವಾಗಿರುವ ಭಾರತ್ ಬಯೋಟೆಕ್ ಕಂಪನಿ ಇದೀಗ ಇಂಟ್ರಾನೇಸಲ್ ಕೊರೊನಾ ಲಸಿಕೆಯ ಪ್ರಯೋಗವನ್ನು ಮುಂದುವರೆಸಿದೆ.

ಮೂಗಿನಲ್ಲಿ ಬಿಡುವ ಎರಡು ಹನಿ ಲಸಿಕೆ ಕೇವಲ 14 ದಿನಗಳಲ್ಲಿ ನಿಮ್ಮ ದೇಶಹದಲ್ಲಿ ಪ್ರತಿಕಾಯವನ್ನು ಸೃಷ್ಟಿ ಮಾಡಲಿದೆ. ಬೇರೆ ಲಸಿಕೆಗಳಿಗೆ ಹೋಲಿಸಿದರೆ ಇದು ಒಂದೇ ಬಾರಿಗೆ ನೀಡಲಾಗುತ್ತದೆ ಜತೆಗೆ ಬೇರೆ ರೀತಿಯ ಅಡ್ಡಪರಿಣಾಮಗಳಿಲ್ಲ ಎಂದು ಹೇಳಲಾಗಿದೆ.ಮೂಗಿನ ಎರಡು ಹೊಳ್ಳೆಗಳಲ್ಲಿ ಒಂದೇ ಸಮಯದಲ್ಲಿ 2 ಕೊರೊನಾ ಲಸಿಕೆಗಳ ಹನಿಗಳನ್ನು ಹಾಕುವುದೇ ಈ ಇಂಟ್ರಾನೇಸಲ್ ಕೊರೊನಾ ಲಸಿಕೆಯ ಅರ್ಥ.

ಈ ಲಸಿಕೆಯ ಅಭಿವೃದ್ಧಿಗೆ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಜತೆ ಭಾರತ್ ಬಯೋಟೆಕ್ ಒಪ್ಪಂದ ಮಾಡಿಕೊಂಡಿದೆ.ಅಮೆರಿಕ, ಯುರೋಪ್ ಹಾಗೂ ಜಪಾನ್ ಹೊರತುಪಡಿಸಿ ಮಿಕ್ಕೆಲ್ಲಾ ದೇಶಗಳಲ್ಲಿ ಇದರ ವಿತರಣೆಯ ಅಧಿಕಾರವನ್ನು ಕಂಪನಿ ಪಡೆದುಕೊಂಡಿದೆ.

Bharat Biotechs Nasal Vaccine Can Be A Gamechanger In Fight Against Covid

ಈಗಿನ ಕೋವ್ಯಾಕ್ಸಿನ್ ಎರಡು ಡೋಸ್‌ನದ್ದಾಗಿದೆ, ಇದು ಇಂಜೆಕ್ಷನ್, ಇದಕ್ಕಾಗಿ ಸಿರಿಂಜ್, ಸೂಜಿ ಇತ್ಯಾದಿಗಳು ಬೇಕು. ಇದರಿಂದ ವೆಚ್ಚ ಕೂಡ ಅಧಿಕವಾಗುತ್ತದೆ ಹಾಗೂ ಭಾರತದಂಥ ದೇಶಕ್ಕೆ 260 ಕೋಟಿ ಸಿರಿಂಜ್‌ಗಳು ಬೇಕು. ಇದು ಮಾಲಿನ್ಯಕ್ಕೂ ಕಾರಣವಾಗುತ್ತದೆ.

ಇದರ ಬದಲು ಮೂಗಿನ ರಂಧ್ರಗಳಲ್ಲಿ 2 ಹನಿ ಇಂಟ್ರಾ ನೇಸಲ್ ಲಸಿಕೆ ಹಾಕಿದರೆ ಈ ವೆಚ್ಚ ತಪ್ಪುತ್ತದೆ. ಲಸಿಕೆ ನೀಡಿಕೆ ಸುಲಭ ಕೂಡ ಎಂದು ಭಾರತ್ ಬಯೋಟೆಕ್ ಮುಖ್ಯಸ್ಥರು ವಿವರಿಸಿದ್ದಾರೆ.

Recommended Video

      ಬೆಂಗಳೂರಿನ 3 ಸಾವಿರ ಸೋಂಕಿತರು ನಾಪತ್ತೆ! ಹಳ್ಳಿಗಳಿಗೆ ತೆರಳಿದ್ದರೆ ಅಪಾಯ ಕಟ್ಟಿಟ್ಟಬುತ್ತಿ.. | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+