ಸಾಯುವ ಮೊದಲು ತನ್ನ ಪ್ರಾಣ ಉಳಿಸುವಂತೆ ಸ್ಥಳೀಯರನ್ನು ಅಂಗಲಾಚಿದ್ದ ಬಶಿರ್!
ಶ್ರೀನಗರ(ಜಮ್ಮು ಕಾಶ್ಮೀರ): ಜುಲೈ 1: ಭಾರತೀಯ ಸೇನೆಯ ದಾಳಿ ಇಂದು (ಜು.1) ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಬಲಿತೆಗೆದುಕೊಂಡ ಲಷ್ಕರ್ ಇ ತೋಯ್ಬಾ ನಾಯಕ ಬಶಿರ್ ಲಷ್ಕರಿ ಸಾಯುವ ಮೊದಲು ತನ್ನನ್ನು ರಕ್ಷಿಸುವಂತೆ ಅಲ್ಲಿನ ಸ್ಥಳೀಯರನ್ನು ಅಂಗಲಾಚುತ್ತಿದ್ದ ಎಂಬ ಅಂಶವನ್ನು ಸೇನೆಯ ಸಿಬ್ಬಂದಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಬಾತ್ಪೊರಾ ಎಂಬ ಹಳ್ಳಿಯಲ್ಲಿ ಅಡಗಿ ಕುಳಿತಿದ್ದ ಉಗ್ರರಲ್ಲಿ ಇಬ್ಬರನ್ನು ಇಂದು ಭಾರತೀಯ ಸೇನೆ ಬಲಿತೆಗೆದುಕೊಂಡಿತ್ತು. ಬಲಿಯಾದ ಇಬ್ಬರು ಉಗ್ರರಲ್ಲಿ ಜೂನ್ 16 ರಂದು ಅನಂತ್ ನಾಗ್ ಜಿಲ್ಲೆಯಲ್ಲಿ ಆರು ಜನ ಪೊಲೀಸರ ಸಾವಿಗೆ ಕಾರಣನಾದ ಬಶಿರ್ ಸಹ ಒಬ್ಬ.

ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂದಿನ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲಿ ಬಶಿರ್, ತನ್ನನ್ನು ರಕ್ಷಿಸುವಂತೆ ಸ್ಥಳಿಯರನ್ನು ಬೇಡುತ್ತುದ್ದನಂತೆ. ಆದರೆ ಆತನ ಕೃತ್ಯದ ಅರಿವಿದ್ದ ಜನರ್ಯಾರೂ ಆತನ ಸಹಾಯಕ್ಕೆ ಬರಲಿಲ್ಲ ಎಂದು ಸೇನಾ ಸಿಬ್ಬಂದಿ ತಿಳಿಸಿದ್ದಾರೆ.
ಜೂನ್ 16 ರಂದು ಅನಂತ್ ನಾಗ್ ಜಿಲ್ಲೆಯಲ್ಲಿ ಆರು ಜನ ಪೊಲೀಸರನ್ನು ನಿಷ್ಕಾರಣವಾಗಿ ಉಗ್ರರು ಸಾಯಿಸಿದ್ದರು. ಈ ಕುರಿತು ದೇಶದೆಲ್ಲೆಡೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದೀಗ ಆ ಘಟನೆಯ ರೂವಾರಿ ಸೇನೆಯ ಗುಂಡಿಗೆ ಬಲಿಯಾಗಿದ್ದು, ಭಾರತೀಯರಿಗೆ ನಿಜಕ್ಕೂ ನೆಮ್ಮದಿ ತಂದಿದೆ.












Click it and Unblock the Notifications