Bank Holiday July 2025: ಜುಲೈ ತಿಂಗಳಲ್ಲಿ 10ಕ್ಕೂ ಅಧಿಕ ದಿನ ಬ್ಯಾಂಕ್‌ಗಳು ಬಂದ್, ಪೂರ್ಣ ರಜಾ ಪಟ್ಟಿ
Bank Holidays July 2025: ಬ್ಯಾಂಕ್‌ಗಳು ನಿಗದಿತ ಶನಿವಾರ, ಭಾನುವಾರ ರಜೆ ಇರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿ ಪ್ರಕಾರ ಬ್ಯಾಂಕ್‌ಗಳ ರಜೆಗಳು (Bank Holidays) ನಿರ್ಧಾರವಾಗುತ್ತವೆ. 2025ರ ಅರ್ಧ ವರ್ಷ ಕಳೆದಿರುವ ನಾವು ಜುಲೈಗೆ ಕಾಲಿಡುತ್ತಿದ್ದೇವೆ. ಜುಲೈ ತಿಂಗಳಲ್ಲೂ ಕೆಲವು ದಿನ ಬ್ಯಾಂಕ್‌ಗಳಿಗೆ ರಜೆ ನೀಡಲಾಗಿದೆ. ಆಯಾ ಪ್ರದೇಶಗಳು, ಆಯಾ ರಾಜ್ಯಗಳ ಸ್ಥಳೀಯ ಹಬ್ಬ, ಆಚರಣೆಗಳು ಮತ್ತು ಪ್ರಮುಖ ದಿನಗಳ ಮೇಲೆ ರಜೆಗಳು ಭಿನ್ನವಾಗಿರುತ್ತವೆ. ಜುಲೈನಲ್ಲಿ (Bank Holiday July 2025) ಎಷ್ಟು ದಿನ ಬ್ಯಾಂಕ್ ಬಂದ್ ಆಗಿರಲಿವೆ?..
ಬ್ಯಾಂಕ್‌ಗಳು ಸಹಜವಾಗಿ ಬಂದ್ ಇದ್ದಾಗ ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಇತರ ಮೊಬೈಲ್ ಅಪ್ಲಿಕೇಶನ್‌ಗಳ ಸೇವೆ ಲಭ್ಯ ಇರುತ್ತದೆ. ಹಣಕಾಸು ವ್ಯವಹಾರ, ಹಣ ರವಾನೆ, ಸ್ವೀಕಾರ, ಖಾತೆ ಬಾಕಿ ಪರಿಶೀಲನೆಗೆ ಅಕಾಶ ಇರುತ್ತದೆ. ಬಿಲ್ ಪಾವತಿ ಸೇರಿದಂತೆ ಸಾಕಷ್ಟು ಹಣಕಾಸು ವಹೀವಾಟುಗಳನ್ನು ನೀವು ಆನ್‌ಲೈನ್ ಮೂಲಕ ಮಾಡಬಹುದು.

2025 ರ ಜುಲೈ ತಿಂಗಳಲ್ಲಿ ಕರ್ನಾಟಕವನ್ನು ಅವಲಂಬಿಸಿ ನೋಡುವುದಾದರೆ ಖಾರ್ಚಿ ಪೂಜೆ, ಗುರು ಹರಗೋವಿಂದ್ ಅವರ ಜನ್ಮದಿನ, ಬೆಹ್ ದೀಂಕ್ಲಾಮ್, ಹರೇಲಾ, ಯು ತಿರೋಟ್ ಸಿಂಗ್ ಅವರ ಪುಣ್ಯತಿಥಿ, ಕೆರ್ ಪೂಜಾ ಸೇರಿದಂತೆ ಆಯಾ ರಾಜ್ಯಗಳ ಪ್ರಮುಖ ಆಚರಣೆಗಳ ಮೇಲೆ ರಜೆ ನೀಡಲಾಗಿದೆ. ಅವುಗಳ ಪಟ್ಟಿ ಮುಂದಿದೆ.
2025 ಜುಲೈ ಬ್ಯಾಂಕ ರಜೆಗಳ ವಿವರ
* ಜುಲೈ 3: ಗುರುವಾರ ಬ್ಯಾಂಕ್ ರಜೆ (ಖಾರ್ಚಿ ಪೂಜೆಯ ಸಂದರ್ಭದಲ್ಲಿ ತ್ರಿಪುರಾದಲ್ಲಿ ಬ್ಯಾಂಕ್ ಬಂದ್)
* ಜುಲೈ 5: ಶನಿವಾರ ಬ್ಯಾಂಕ್ ರಜೆ (ಗುರು ಹರಗೋಬಿಂದ್ ಜಿ ಜನ್ಮದಿನ, ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ಬಂದ್)
* ಜುಲೈ 06: ಭಾನುವಾರ ದೇಶಾದ್ಯಂತ ಬ್ಯಾಂಕ್ ರಜೆ
* ಜುಲೈ 12: ಎರಡನೇ ಶನಿವಾರ ಬ್ಯಾಂಕ್ ರಜೆ
* ಜುಲೈ 13: ಭಾನುವಾರ ದೇಶಾದ್ಯಂತ ಬ್ಯಾಂಕ್ ರಜೆ
* ಜುಲೈ 14: ಸೋಮವಾರ ಬ್ಯಾಂಕ್ ರಜೆ (ಬೆಹ್ ದೀಂಕ್ಲಾಮ್ ಆಚರಣೆ, ಮೇಘಾಲಯದಲ್ಲಿ ಬ್ಯಾಂಕ್ ರಜೆ)
* ಜುಲೈ 16: ಬುಧವಾರ ಬ್ಯಾಂಕ್ ರಜೆ (ಹರೇಲಾ ವೇಳೆ ಉತ್ತರಾಖಂಡದಲ್ಲಿ ಬ್ಯಾಂಕ್ ಬಂದ್)
* ಜುಲೈ 17: ಗುರುವಾರ ಬ್ಯಾಂಕ್ ರಜೆ (ಯು ತಿರೋಟ್ ಅವರ ಪುಣ್ಯತಿಥಿ, ಮೇಘಾಲಯದಲ್ಲಿ ಬ್ಯಾಂಕ್ ರಜೆ)
* ಜುಲೈ 19: ಶನಿವಾರ ಬ್ಯಾಂಕ್ ರಜೆ (ಕೇರ್ ಪೂಜೆ ಪ್ರಯುಕ್ತ ತ್ರಿಪುರದಲ್ಲಿ ಬ್ಯಾಂಕ ಬಂದ್)
* ಜಲೈ 20: ಭಾನುವಾರ ದೇಶಾದ್ಯಂತ ಬ್ಯಾಂಕ್‌ಗಳಿಗೆ ಸಾಪ್ತಾಹಿಕ ರಜೆ
* ಜುಲೈ 17: ಭಾನುವಾರ ದೇಶಾದ್ಯಂತ ಬ್ಯಾಂಕ್‌ಗಳಿಗೆ ಸಾಪ್ತಾಹಿಕ ರಜೆ
* ಜುಲೈ 28: ಸೋಮವಾರ ಬ್ಯಾಂಕ್ ರಜೆ (ಡ್ರುಕ್ಪಾತ್ಶೆ-ಜಿ ಆಚರಣೆ ಸಿಕ್ಕಿಂನಲ್ಲಿ ಬ್ಯಾಂಕ್ ಬಂದ್)












Click it and Unblock the Notifications