Ram Mandir: ಜ.18ರಂದೇ ಗರ್ಭಗುಡಿಗೆ ರಾಮಮೂರ್ತಿ ಪ್ರವೇಶ, ಧಾರ್ಮಿಕ ಕೈಂಕರ್ಯಗಳ ಅಪ್ಡೇಟ್ ಕೊಟ್ಟ ಟ್ರಸ್ಟ್
ಬೆಂಗಳೂರು, ಜನವರಿ 07: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಇದೇ ತಿಂಗಳ ಜನವರಿ 22ರಂದು ಶ್ರೀರಾಮ ವಿಗ್ರಹ ಪ್ರತಿಷ್ಠಾಪಿಸಲಾಗುತ್ತದೆ. ಈ ಸಲುವಾಗಿ ಎಲ್ಲ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಈ ಮಧ್ಯೆ ಹೊಸ ಅಪ್ಡೇಟ್ ಸಿಕ್ಕಿದ್ದು. ವಿಗ್ರಹ ಪ್ರತಿಷ್ಠಾಪನೆಯ 4 ದಿನ ಮುನ್ನ ಮೊದಲೇ ಅಂದರೆ ಜ.18 ರಂದು ಗರ್ಭಗುಡಿಗೆ ವಿಗ್ರಹ ಪ್ರವೇಶಿಸಲಿದೆ.
ಹೌದು, ಪ್ರತಿಷ್ಠಾಪನೆಗು ಮೊದಲೇ ಮಗುವಿನ ಮುಗ್ಧತೆ ಹೋಲುವು ಕರ್ನಾಟಕದ ಶಿಲ್ಪಿ ಕೆತ್ತಿದ ಭಗವಾನ್ ಶ್ರೀರಾಮನ ಕಪ್ಪು ಬಣ್ಣದ ವಿಗ್ರಹವನ್ನು ಗರ್ಭಗುಡಿಯಲ್ಲಿ ಜ.18 ರಂದು ಇರಿಸಲಾಗುವುದು ಎಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯ ದರ್ಶಿ ಚಂಪತ್ ರಾಯ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಪ್ರತಿ ವರ್ಷ ರಾಮನವಮಿ ದಿನದಂದು ಮಧ್ಯಾಹ್ನ 12 ಗಂಟೆಗೆ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣಗಳು ಬೆಳಗುತ್ತವೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಈ ಕಪ್ಪು ಬಣ್ಣದ ಗ್ರಹವು 51 ಇಂಚು ಎತ್ತರ, 1.5 ಟನ್ ತೂಕ ಹೊಂದಿದೆ. ಒಟ್ಟು ಮೂರು ಮಂದಿ ವಿಗ್ರಹ ತಯಾರಿಸಿದ್ದರು, ಅದರಲ್ಲಿ ಈ ವಿಗ್ರಹವು ಪ್ರತಿಷ್ಠಾಪನೆಗೆ ಅಂತಿಮಗೊಂಡಿದೆ ಎಂದು ವಿವರಿಸಿದರು.
ಜ.16ರಿಂದಲೇ ಧಾರ್ಮಿಕ ಕೈಂಕರ್ಯ ಶುರು
ರಾಮನ ಪ್ರಾಣಪ್ರತಿಷ್ಠಾಪನೆ ಜನವರಿ 22 ರಂದು ನಡೆದರೆ, ಅದರ ಭಾಗವಾಗಿ ಪ್ರತಿಷ್ಠಾಪನೆಯ ಪೂಜಾ ವಿಧಿವಿಧಾನಗಳು ಜನವರಿಗೆ 16ರಿಂದಲೇ ಆರಂಭವಾಗಲಿವೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ವಿಜ್ಞಾನಿಗಳ ಸಲಹೆ ಮೇರೆಗೆ ಈ ವಿಗ್ರಹ ರೂಪಿಸಲಾಗಿದೆ. ವಿಶೇಷವೆಂದರೆ ಪ್ರತಿ ವರ್ಷ ರಾಮನವಮಿ ದಿವಸದಂದು ಚೈತ್ರಮಾಸ ಶುಕ್ಲ ಪಕ್ಷದ ಒಂಬತ್ತನೇ ತಾರೀಖು ಸ್ವತಃ ಮಧ್ಯಾಹ್ನ 12 ಗಂಟೆಗೆ ಸೂರ್ಯ ತನ್ನ ಕಿರಣಗಳ ಮೂಲಕ ಶ್ರೀರಾಮನ ಹಣೆ ಸ್ಪರ್ಶಿಸುವ ಮೂಲಕ ಬೆಳಗಲಿದ್ದಾರೆ ಎಂದು ಅವರು ವಿವರಿಸಿದರು.

ಕರ್ನಾಟಕದ ಎಲ್ಲ ರಾಮದೇಗುಲದಲ್ಲಿ ವಿಶೇಷ ಪೂಜೆ
ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಆಗುವ ಮೂಲಕ ರಾಮಮಂದಿರ ಲೋಕಾರ್ಪಣೆಗೊಳ್ಳಲಿದೆ. ಅಂದು ಕೋಟ್ಯಾನು ಕೋಟಿ ಭಕ್ತರು ರಾಮಲಲ್ಲಾನನ್ನು ವೀಕ್ಷಿಸಲಿದ್ದಾರೆ. ಇದೇ ವೇಳೆ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ಎಲ್ಲ ರಾಮನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಬೇಕೆಂದು ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ.












Click it and Unblock the Notifications