ಇಬ್ಬರು ರೈಲು ಪ್ರಯಾಣಿಕರಿಗೆ ಒಂದೇ ಕನ್ಫರ್ಮ್ ಟಿಕೆಟ್; ಇಬ್ಬರ ಕಿತ್ತಾಟಕ್ಕೆ TTE ಕೊಟ್ಟ ಸೊಲ್ಯೂಶನ್ ಸೂಪರ್
Auto Upgrade In Indian Railway : ರೈಲು ಪ್ರಯಾಣ ತುಂಬಾ ಆರಾಮ. ಅದರಲ್ಲೂ ವಯಸ್ಸಾದವರಿಗೆ, ಚಿಕ್ಕ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವವರಿಗೆ, ದೂರ ಪ್ರಯಾಣ ಮಾಡುವವರಿಗೆ ಬೆಸ್ಟ್. ಬಸ್ಸು, ವಿಮಾನಗಳಿಗೆ ಹೋಲಿಸಿದರೆ ಅಗ್ಗ ಕೂಡಾ. ಆದ್ರೆ ಟಿಕೆಟ್ ಸಿಗೋದೇ ಕಷ್ಟ. ಮೂರು ತಿಂಗಳು ಮುಂಚೆಯೇ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ತಪ್ಪಿದರೆ ತತ್ಕಾಲ್ ಸೇವೆ. ಅಲ್ಲಿಯೂ ಟಿಕೆಟ್ ಸಿಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ.
ಇಬ್ಬರಿಗೆ ಒಂದೇ ಸೀಟು :
ಹೀಗಿರುವಾಗ ಒಂದೇ ಸೀಟು ಇಬ್ಬಿಬ್ಬರಿಗೆ ಅಲಾಟ್ ಆದರೆ? ರೈಲಿನಲ್ಲಿ ಯಾವಾಗಲೂ ಒಂದು ಸೀಟಿನಲ್ಲಿ ಒಬ್ಬರೇ ಪ್ರಯಾಣ ಮಾಡಬೇಕು. ಇದು ರೈಲ್ವೆ ನಿಯಮ ಕೂಡಾ. ಆದರೆ ಇತ್ತೀಚೆಗೆ ಒಂದೇ ಸೀಟು ಇಬ್ಬರಿಗೆ ಅಲಾಟ್ ಆಗಿರುವ ಘಟನೆ ನಡೆದಿದೆ. ಇಬ್ಬರ ಬಳಿಯೂ ಟಿಕೆಟ್ ಇದೆ. ಟಿಕೆಟಿನಲ್ಲಿ ಒಂದೇ ಸೀಟಿನ ನಂಬರ್ ಇದೆ. ಇಲ್ಲಿ ಸೀಟು ಬಿಟ್ಟು ಕೊಡಲು ಇಬ್ಬರೂ ತಯಾರಿಲ್ಲ. ಈ ಘಟನೆಯನ್ನು ಅದೇ ರೈಲಿನಲ್ಲಿ ಪ್ರಯಾಣ ಮಾಡ್ತಾ ಇದ್ದ ಒಬ್ಬರು ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇಬ್ಬರು ಪ್ರಯಾಣಿಕರು ಎಸ್ 7 ಕೋಚಿನ 57 ನಂಬರಿನ ಸೀಟು ನನ್ನದು ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇಬ್ಬರದ್ದೂ ಕಂಫರ್ಮ್ ಟಿಕೆಟ್. ಇಬ್ಬರೂ ನನ್ನ ಸೀಟು ನನ್ನ ಸೀಟು ಎಂದು ಚರ್ಚೆ ಮಾಡುತ್ತಾ ಇದ್ದಾಗ ಗೊಂದಲ ಸರಿ ಮಾಡುವುದಕ್ಕೆ ಟಿಟಿಇ ಮಧ್ಯೆ ಬಂದಿದ್ದಾರೆ. ಅಸಲಿಗೆ ಯಾಕೆ ಹೀಗಾಗಿದೆ ಎಂದು ಅವರು ಕಾರಣ ಹುಡುಕುವವರೆಗೂ ಇಬ್ಬರ ನಡುವೆ ವಿವಾದ ನಿಲ್ಲಲೇ ಇಲ್ಲ.
ಎಲ್ಲದಕ್ಕೂ ಆಟೋ-ಅಪ್ಗ್ರೇಡ್ ಕಾರಣ :
ನಾವು ರೈಲ್ವೆ ticket ಬುಕ್ ಮಾಡುವಾಗ ಫಾರ್ಮಿನಲ್ಲಿ ಆಟೋ-ಅಪ್ಗ್ರೇಡ್ ಅನ್ನೋ ಒಂದು ಆಪ್ಶನ್ ಇರುತ್ತದೆ. ಇದೇ ಎಲ್ಲಾ ಗೊಂದಲಕ್ಕೆ ಕಾರಣ. ಒಬ್ಬ ಪ್ರಯಾಣಿಕ ಟಿಕೆಟ್ ಬುಕ್ ಮಾಡುಾಗ ಈ ಆಟೋ ಅಪ್ಗ್ರೇಡ್ ಆಪ್ಶನ್ ಮೇಲೆ ಟಕ್ ಮಾಡಿದ್ದಾರೆ. ಆಟೋ ಅಪ್ಗ್ರೇಡ್ ಅಂದರೆ ನಾವು ಸ್ಲೀಪರ್ ಕೋಚಿನಲ್ಲಿ ಟಿಕೆಟ್ ಬುಕ್ ಮಾಡಿದ್ದು, ಥರ್ಡ್ ಎಸಿಯಲ್ಲಿ ಸೀಟು ಖಾಲಿಯಿದ್ದರೆ ನಮ್ಮ ಟಿಕೆಟ್ ಥರ್ಡ್ ಎಸಿಗೆ ಅಪ್ಗ್ರೇಡ್ ಆಗುತ್ತದೆ. ಒಂದು ವೇಳೆ ನಾವು ಥರ್ಡ್ ಎಸಿ ಟಿಕೆಟ್ ಬಕ್ ಮಾಡಿದ್ದರೆ ನಮ್ಮ ಟಿಕೆಟ್ ಸೆಕೆಂಡ್ ಎಸಿಗೆ ಅಪ್ಗ್ರೇಡ್ ಆಗುತ್ತದೆ. ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ಸಂಗತಿ ಎಂದರೆ ಉನ್ನತ ದರ್ಜೆಯಲ್ಲಿ ಸೀಟು ಖಾಲಿಯಿದ್ದಾಗ ಮಾತ್ರ ಟಿಕೆಟ್ ಅಪ್ಗ್ರೇಡ್ ಆಗುವುದು. ನಾವು ಟಿಕೆಟ್ ಬುಕ್ ಮಾಡುವಾಗ ಈ ಆಪ್ಶನ್ ಟಿಕ್ ಮಾಡಿದರೆ ಸೀಟು ಹಂಚಿಕೆ ವೇಳೆ ಅಪ್ಗ್ರೇಡ್ ಮಾಡುವ ಅಧಿಕಾರ ರೈಲ್ವೆಗಿದೆ.
ಈ ಆಧಾರದಲ್ಲಿ ಒಬ್ಬರ ಟಿಕೆಟ್ ಎಸಿ ಕೋಚಿಗೆ ಅಪ್ಗ್ರೇಡ್ ಆಗಿದೆ. ಆದರೆ ಇದು ಅವರ ಗಮನಕ್ಕೆ ಬಂದಿಲ್ಲ. ಅವರು ತಮ್ಮ ಟಿಕೆಟಿನಲ್ಲಿ ಇರುವ ಕೋಚಿಗೆ ಬಂದು ಅದೇ ಸೀಟಿನಲ್ಲಿ ಕೂತಿದ್ದಾರೆ. ಇದು ನನ್ನ ಸೀಟು ಎಂದು ಪಟ್ಟು ಹಿಡಿದಿದ್ದಾರೆ. ನಂತರ ಟಿಟಿಇ ಬಂದು ಸಮಸ್ಯೆ ಆಗಿರುವುದು ಎಲ್ಲಿ ಎನ್ನುವುದನ್ನು ವಿವರಿಸಿ ಹೇಳಿದ್ಧಾರೆ.
ಪಿಎನ್ಆರ್ ಚೆಕ್ ಮಾಡಿಕೊಳ್ಳಿ :
ಇಂಥ ಸಮಸ್ಯೆ ಕೆಲವೊಮ್ಮೆ ಎದುರಾಗುತ್ತದೆ. ಹಾಗಾಗಿ ನೀವು ಟಿಕೆಟ್ ಬುಕ್ಕಿಂಗ್ ವೇಳೆ ಆಟೋ ಅಪ್ಗ್ರೆಡ್ ಟಿಕ್ ಮಾಡಿದ್ದರೆ ರೈಲು ಹತ್ತುವ ಮುನ್ನ ಪಿಎನ್ಆರ್ ಅನ್ನು ಒಮ್ಮೆ ಚೆಕ್ ಮಾಡಿ ನೋಡಿ ಅಂತ ಟಿಟಿಇ ಸಲಹೆ ನೀಡಿದ್ದಾರೆ.
ಸೀಟ್ ವಿವಾದ ತಪ್ಪಿಸುವುದು ಹೇಗೆ? :
ಈ ಘಟನೆ ರೈಲಿನಲ್ಲಿ ಪ್ರಯಾಣಿಸುವ ಎಲ್ಲರಿಗೂ ಒಂದು ಪಾಠ. ವಿಶೇಷವಾಗಿ ರಜೆಯ ಸೀಸನನಲ್ಲಿ ರಿಸರ್ವೇಶನ್ ಮತ್ತು ಬರ್ತ್ ಲಭ್ಯತೆಯ ಬಗ್ಗೆ ಗೊಂದಲ ಉಂಟಾಗಬಹುದು. ನಿಮ್ಮ ಕಂಫರ್ಮ್ ಸೀಟು ನನ್ನದು ಎಂದು ಇನ್ನೊಬ್ಬರು ಕ್ಲೈಂ ಮಾಡಿದರೆ ಪ್ರಯಾಣಿಕರು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬಹುದು.
1.ಇತ್ತೀಚಿನ ಪಿಎನ್ಆರ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ. ಕೋಚ್, ಬರ್ತ್ ಸೇರಿದಂತೆ ರಿಸರ್ವೇಶನ್ reservation ವಿವರಗಳನ್ನು ಪರಿಶೀಲಿಸಿ.
2. ಅಪ್ ಗ್ರೇಡ್ ಆಗಿದೆಯಾ ನೊಡಿ : ಬುಕಿಂಗ್ ಸಮಯದಲ್ಲಿ ನೀವು 'ಆಟೋ-ಅಪ್ ಗ್ರೇಡ್' ಅನ್ನು ಆರಿಸಿಕೊಂಡಿದ್ದರೆ, ನಿಮ್ಮ ಟಿಕೆಟ್ ಅನ್ನು ಮತ್ತೊಂದು ವರ್ಗಕ್ಕೆ ಅಪ್ ಗ್ರೇಡ್ ಮಾಡಲಾಗಿದೆಯೇ ನೋಡಿಕೊಳ್ಳಿ.
3.ಟಿಕೆಟ್ ವಿವರ ಚೆಕ್ ಮಾಡಿಕೊಳ್ಳಿ : ರಿಸರ್ವೇಶನಿನಲ್ಲಿ ನೀಡಲಾದ ಕೋಚ್ ಮತ್ತು ಬರ್ತ್ ನಂಬರ್ ನೀವು ಕ್ಲೈಮ್ ಮಾಡುತ್ತಿರುವ ಸೀಟಿಗೆ ಹೊಂದಿಕೆಯಾಗುತ್ತದೆಯೇ ನೋಡಿಕೊಳ್ಳಿ.
4.ಟಿಟಿಇ ಸಹಾಯ ಕೇಳಿ : ಇಬ್ಬರು ಪ್ರಯಾಣಿಕರು ಒಂದೇ ಬರ್ತಿಗಾಗಿ ಕ್ಲೈಮ್ ಮಾಡುತ್ತಿದ್ದರೆ ವಾದ ಮಡುವ ಅಗತ್ಯ ಇಲ್ಲ. ದಾಖಲೆ ಪರಿಶೀಲಿಸಲು ಟಿಟಿಇಗೆ ತಿಳಿಸಿ.
ವೈರಲ್ ವಿಡಿಯೋಗೆ ಪ್ರಯಾಣಿಕರ ಪ್ರತಿಕ್ರಿಯೆ :
ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಬುಕಿಂಗ್ ಸುತ್ತಲಿನ ಈ ವಿಚಿತ್ರ ಗೊಂದಲ ಮತ್ತು ಟಿಟಿಇ ಪರಿಸ್ಥಿತಿಯನ್ನು ನಿಭಾಯಿಸಿದ ವಿಧಾನದ ಬಗ್ಗೆ ಚರ್ಚೆ ನಡೀತಾ ಇದೆ. ರೈಲ್ವೆ ಅಪ್ಗ್ರೇಡಿಗೆ ಸಂಬಂಧಿಸಿದ ತಮ್ಮ ಅನುಭವವನ್ನು ತುಂಬಾ ಮಂದಿ ಶೇರ್ ಮಾಡಿಕೊಂಡಿದ್ದಾರೆ.


Click it and Unblock the Notifications
