ನೆನಪಿಡಿ, ಆಧಾರ್-ಪ್ಯಾನ್ ಜೋಡಣೆಗೆ ಆ.31 ಕೊನೆಯ ದಿನಾಂಕ
Recommended Video

Aadhar Number to Pan Number linking | Last date August 31st | Oneindia Kannada
ನವದೆಹಲಿ, ಆಗಸ್ಟ್ 30: ಆದಾಯ ತೆರಿಗೆ ಕಟ್ಟುವವರು ತಮ್ಮ ಪ್ಯಾನ್ ನಂಬರ್ ಅನ್ನು ಆಧಾರ್ ನಂಬರ್ ಗೆ ಜೋಡಿಸುವುದಕ್ಕೆ ಸರ್ಕಾರ ನೀಡಿದ ಗಡುವಿಗೆ ಇನ್ನೊಂದೇ ದಿನ ಬಾಕಿ ಉಳಿದಿದೆ.
ಆದಾಯ ತೆರಿಗೆ ಪಾವತಿಸುವವರು ಆಗಸ್ಟ್ 31 ರೊಳಗೆ ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಅನ್ನು ಪ್ಯಾನ್ ನೊಂದಿಗೆ ಜೋಡಿಸುವಂತೆ ಸರ್ಕಾರ ಗಡುವು ನೀಡಿದ್ದು, ಇವೆರಡನ್ನು ಲಿಂಕ್ ಮಾಡದಿದ್ದಲ್ಲಿ ಇನ್ ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಈ ಮೊದಲು ಜೂನ್ 30 ರವರೆಗೆ ಆಧಾರ್ -ಪ್ಯಾನ್ ಜೋಡಣೆಗೆ ಕಾಲಾವಕಾಶ ನೀಡಿದ್ದ ಆದಾಯ ತೆರಿಗೆ ಇಲಾಖೆ, ನಂತರ ಜನರ ಮನವಿಯ ಮೇರೆಗೆ ದಿನಾಂಕವನ್ನು ವಿಸ್ತರಿಸಿ ಆಗಸ್ಟ್ 31 ರವರೆಗೆ ಗಡುವು ನೀಡಿತ್ತು.
ಇನ್ನೂ ಆಧಾರ್-ಪ್ಯಾನ್ ಲಿಂಕ್ ಮಾಡದವರು ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಸುಲಭವಾಗಿ ಜೋಡಣೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆದಾಯ ತೆರಿಗೆ ವೆಬ್ ಸೈಟ್ ನೋಡಿ












Click it and Unblock the Notifications