ಆಗಸ್ಟ್ 1ರಿಂದ ಹೊಸ ನಿಯಮಗಳು: ಜನರ ಜೇಬಿಗೆ ಕತ್ತರಿ! LPG ದರ, ಬ್ಯಾಂಕ್, ರೈಲ್ವೆ, KYC ಸೇರಿ ಏನೆಲ್ಲ ಬದಲಾಗಲಿದೆ?

ನವದೆಹಲಿ: ಇಂಧನ ಹಾಗೂ ಅಡುಗೆ ಅನಿಲ ದರ ಏರಿಕೆ ಆಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಜನರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಹೊತ್ತಿನಲ್ಲೇ ಆಗಸ್ಟ್ ತಿಂಗಳು ಎದುರಾಗಿದ್ದು, ಆಗಸ್ಟ್ 1ರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುವ ಸಾಧ್ಯತೆ ಇದ್ದು, ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ಜನರಿಗೆ ಆಥಿರ್ಕ ಬರೆ ಬೀಳಬಹುದು. ಜನರು ಎ‌ಲ್‌ಪಿಜಿ ಗ್ಯಾಸ್ ದರದ ಬದಲಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಮುಂದಿನ ತಿಂಗಳಿನಿಂದ ಏನೆಲ್ಲ ಬದಲಾವಣೆ ಆಗಲಿದೆ? ಎಂದು ಕಾತರದಿಂದ ಕಾಯುತ್ತಿದ್ದಾರೆ.

ಕಳೆದ ಏಪ್ರಿಲ್, ಜೂನ್ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ಎಲ್‌ಪಿಜಿ ದರ ಹೆಚ್ಚಳ ಮಾಡಿ ಜನರಿಗೆ ಶಾಕ್ ನೀಡಿತ್ತು. ಯುದ್ಧಗಳು, ಜಾಗತಿಕ ಇಂಧನ, ಅನಿಲ ಬೆಲೆ ಏರಿಕೆಯ ಬಿಸಿ ದೇಶದ ಜನಸಾಮಾನ್ಯರಿಗೆ ತಟ್ಟಿದೆ. ಆಗಸ್ಟ್ 1ರಿಂದ ರೈಲ್ವೆ ತಾತ್ಕಾಲ್ ಟಿಕೆಟ್, ಆಯಿಲ್ ಸಾಬೂನು ಪ್ಯಾಕೇಟ್ ದುಬಾರಿ ಆಗಲಿವೆ. ಬ್ಯಾಂಕಿಂಗ್, ಅಂಚೆ, ಫಾಸ್ಟ್ಯಾಗ್ ಹಣದ ನಿಯಮದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಜನಸ್ನೇಹಿಗಿಂತ ಆರ್ಥಿಕ ಹೊರೆ ಹೇರುವ ಲಕ್ಷಣಗಳು ದಟ್ಟವಾಗಿವೆ ಎಂದು ಹೇಳಲಾಗುತ್ತಿದೆ.

August 1 Rule Changes

ಪ್ರತಿ ತಿಂಗಳ 1ನೇ ತಾರೀಖಿನಂದು ಎಲ್ಲ ಜಾಗತಿಕ ತೈಲ ಸಂಸ್ಕರಣಾ ಕಂಪನಿಗಳು ಅಡುಗೆ ಅನಿಲ ಬೆಲೆ ಪರಿಷ್ಕರಿಸುತ್ತವೆ. ಹೀಗಾಗಿ ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಅಡುಗೆ ಅನಿಲ ಮತ್ತು ವಾಣಿಜ್ಯ ಸಿಲಿಂಡರ್ ದರ ಹೆಚ್ಚಳವಾಗಲಿದೆ ಎನ್ನಲಾಗಿದೆ. ಇದು ಹೋಟೆಲ್, ರಸ್ತೆ ಬದಿ ಅಂಗಡಿ ಮಾಲೀಕರಿಗೆ ಮತ್ತು ನಾಗರಿಕರ ಚಿಂತೆಗೆ ಕಾರಣವಾಗಿದೆ.

ಇಂದಿನ ಎಲ್‌ಪಿಜಿ ಬೆಲೆ, ಬ್ಲಾಕ್‌ನಲ್ಲಿ ದುಬಾರಿಗೆ ಮಾರಾಟ

ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಬಹುತೇಕ ನಗರಗಳಲ್ಲಿ ಎಪ್‌ಪಿಜಿ 14ಕೆ.ಜಿ.ಸಿಲಿಂಡರ್ ದರ 944 ರೂಪಾಯಿ ಇದೆ. ಆದರೆ ಇಂದಿನ ಬಿಕ್ಕಟ್ಟು, ತೈಲ ಪೂರೈಕೆ ಗೊಂದಲ ನಡುವೆ ಈ ಸಿಲಿಂಡರ್‍‌ ಅನ್ನು 1050 ರೂ.ನಿಂದ 1300 ರೂಪಾಯಿ ವರೆಗೆ ಮಾತನಾಡ ಮಾಡಲಾಗುತ್ತಿದೆ. ಕೆಲವೆಡೆ ಬುಕ್ ಮಾಡಿದರೂ ಗ್ಯಾಸ್ ಬಾರದೇ ಡೆಲಿವರಿ ಸಂದೇಶ ಬರುತ್ತಿವೆ. ಇನ್ನೂ ಕಮರ್ಷಿಯಲ್ ಎಲ್‌ಪಿಜಿ ದರ 3000 ರೂಪಾಯಿ ಆಸು ಪಾಸಿಗೆ ಮಾರಾಟವಾಗುತ್ತಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆ ಸಮರ್ಪಕವಾಗಿಲ್ಲ ಎನ್ನುವ ಗ್ಯಾಸ್ ಏಜೆನ್ಸಿಗಳು, ವಿತರಕರು ಈ ಸಮಯದ ಲಾಭ ಪಡೆಯಲು ಹೆಚ್ಚಿನ ದುಪ್ಪಟ್ಟು ಬೆಲೆಗೆ (ಬ್ಲಾಕ್‌ನಲ್ಲಿ) ಮಾರಾಟ ಮಾಡುತ್ತಿದ್ದಾರೆ.

ಟೀಪುಡಿ, ಹೇರ್ ಆಯಿಲ್, ಸಾಬೂನು ಪ್ಯಾಕೇಟ್‌ಗಳು ಆ.1ರಿಂದ ಕನಿಷ್ಠ ಶೇ. 6ರಷ್ಟು ಏರಿಕೆ ಆಗಲಿದೆ. ಫ್ರಿಡ್ಜ್, ವಾಷಿಂಗ್ ಮಷಿನ್, ಟಿವಿ ಸೇರಿ ಕೆಲವು ಎಲೆಕ್ಟ್ರಾನಿಕ್ ವಸ್ತುಗಳು ಶೇ. 4-6ರಷ್ಟು, ಸ್ಮಾರ್ಟ್‌ಫೋನ್‌ಗಳ ಬೆಲೆಯು ಮತ್ತೆ ಹೆಚ್ಚಾಗುವ ಸಂಭವವಿದೆ.

ರೈಲ್ವೆ ತಾತ್ಕಾಲ್ ಟಿಕೆಟ್ ಬುಕಿಂಗ್

ಭಾರತೀಯ ರೈಲ್ವೆ ಇಲಾಖೆಯು ರೈಲ್ವೆ ತಾತ್ಕಾಲ್ ಟಿಕೆಟ್ ಬುಕಿಂಗ್‌ ಪ್ರಕ್ರಿಯೆಯನ್ನು ಮತ್ತಷ್ಟು ಸುಗಮಗೊಳಿಸಲು ಮುಂದಾಗಿದೆ. ಕೌಂಟರ್‍‌ಗಳಲ್ಲಿ ಟಿಕೆಟ್ ಬುಕಿಂಗ್ ವೇಳೆ ಸಾಲುಗಟ್ಟಿ ನಿಲ್ಲುವುದನ್ನು ತಡೆಯಲು ಪ್ರಯಾಣಿಕರಿಗೆ ಟೋಕನ್ ವಿತರಿಸಲು ಮುಂದಾಗಿದೆ. ಇದರಿಂದ ಕೌಂಟರ್ ಮುಂದೆ ದಟ್ಟಣೆ ಕಡಿಮೆ ಆಗುವ ಜೊತೆಗೆ ಟಿಕೆಟ್ ವಿತರಣೆಗೆ ವೇಗ ನೀಡುವ ನಿಯಮ ಜಾರಿಗೆ ಬರಲಿದೆ.

ರಿವಾರ್ಡ್ ಪಾಯಿಂಟ್ಸ್ ಇಳಿಕೆ

ಇನ್ನೂ ಆಗಸ್ಟ್ 1ರಿಂದ ಪ್ರಮುಖ ಬ್ಯಾಂಕ್‌ಗಳು ತಾವು ನೀಡುವ ಕ್ರೆಡಿಟ್ ಕಾರ್ಡ್‌ ಸವೀಸ್ ಶುಲ್ಕ ಹಾಗೂ ರಿವಾರ್ಡ್ ಪಾಯಿಂಟ್ಸ್‌ಗಳನ್ನು ಪರಿಷ್ಕರಿಸುತ್ತವೆ. ರಿವಾರ್ಡ್ ಪಾಯಿಂಟ್ಸ್ ಪ್ರಮಾಣ ತಗ್ಗಲಿದೆ. ಗ್ಯಾಸ್, ವಿದ್ಯುತ್, ನೀರಿನ ಬಿಲ್, ಎಸ್‌ಎಂಎಸ್ ಮತ್ತು ವಾರ್ಷಿಕ ಬ್ಯಾಂಕಿಂಗ್ ನಿರ್ವಹಣೆ ಶುಲ್ಕದಲ್ಲಿ ಬದಲಾವಣೆ ಆಗಲಿದೆ ಎಂದು ತಿಳಿದು ಬಂದಿದೆ.

ಸೆಂಟ್ರಲ್ ಕೆವೈಸಿ 2.0 ಜಾರಿ

ಹೂಡಿಕೆ ವಿಭಾಗದ ಮ್ಯೂಚುವಲ್ ಫಂಡ್, ವಿಮೆ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ಭದ್ರತೆ ಹೆಚ್ಚಿಸುವ ಸಂಬಂಧ ಸೆಂಟ್ರಲ್ ಕೆವೈಸಿ 2.0 ಜಾರಿ ಬರಲಿದೆ. ಇದರಿಂದ ಜನರ ಮಾಹಿತಿಯು ಕೇಂದ್ರ ನೋಂದಣಿ ದತ್ತಾಂಶದಲ್ಲಿ ಸಂಗ್ರಹವಾಗುತ್ತದೆ. ತಮ್ಮ ಗ್ರಾಹಕರ ಒಪ್ಪಿಗೆ ಮೇರೆಗೆ ಅಗತ್ಯ ಸಂದರ್ಭಗಳಲ್ಲಿ ನೇರವಾಗಿ ಮಾಹಿತಿ/ದಾಖಲೆ ಪಡೆದು ಕೆವೈಸಿ ಪೂರ್ಣಗೊಳಿಸಬಹುದು. ಇದರಿಂದ ತ್ವರಿತ ವ್ಯವಹಾರ, ಸೇವೆಗಳು ಸಾಧ್ಯವಾಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+