ಸುಷ್ಮಾ ಸ್ವರಾಜ್ ಮತ್ತು ಮುಸ್ಲಿಂ ವೀಸಾ: ಸಚಿವೆ ಸ್ಪಷ್ಟನೆ

Posted By:
Subscribe to Oneindia Kannada

ನವದೆಹಲಿ, ಜ 21: ಮುಸ್ಲಿಮರಿಗೆ ವಿಶೇಷ ಒತ್ತು ನೀಡಿ ವೀಸಾ ವಿತರಿಸಲಾಗುತ್ತಿದೆ ಎನ್ನುವ ಆರೋಪಕ್ಕೆ ವಿದೇಶಾಂಗ ಖಾತೆಯ ಸಚಿವೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿದ್ದಾರೆ.

ನನಗೆ ಜಾತಿ, ಧರ್ಮ ಮತ್ತು ಭಾಷೆಗಿಂತ ಮೊದಲು ಭಾರತೀಯ ಎನ್ನುವುದು ಮುಖ್ಯ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ಉತ್ತರಿಸಿದ್ದಾರೆ.

attacked-over-issuing-muslims-visas-sushma-swaraj-tweets

ಮೋದಿಜೀ.. ನಿಮ್ಮ ಸುಷ್ಮಾ ಸ್ವರಾಜ್ ಮುಸ್ಲಿಮರ ಹಿತವನ್ನು ಮಾತ್ರ ಗಮನದಲ್ಲಿ ಇಟ್ಟುಕೊಂಡು ವೀಸಾ ವಿತರಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಹಿಂದೂಗಳಿಗೆ ವೀಸಾ ವಿತರಿಸಲು ತೊಂದರೆ ನೀಡಲಾಗುತ್ತಿದೆ ಎನ್ನುವ ಆರೋಪಕ್ಕೆ ಸುಷ್ಮಾ ಈ ರೀತಿ ಉತ್ತರ ನೀಡಿದ್ದಾರೆ.

ಭಾರತ ನನ್ನ ದೇಶ ಮತ್ತು ಭಾರತೀಯರು ನನ್ನ ಪ್ರಜೆಗಳು ಎಂದು ಉತ್ತರಿಸಿರುವ ಸುಷ್ಮಾ, ಜಾತಿ ಮತ್ತು ಧರ್ಮ ನನಗೆ ಮುಖ್ಯವಲ್ಲ ಎಂದು ಟ್ವೀಟ್ ಮಾಡಿದ್ದಾರೆ.

attacked-over-issuing-muslims-visas-sushma-swaraj-tweets

ಸಾಮಾಜಿಕ ತಾಣದಲ್ಲಿ ಚುರುಕಾಗಿರುವ ಸಚಿವೆ ಸುಷ್ಮಾ, ಇತ್ತೀಚೆಗೆ ಅಮೆಜಾನ್ ಸಂಸ್ಥೆಯ ಮೇಲೆ ಕಿಡಿಕಾರಿ, ವೀಸಾ ರದ್ದು ಮಾಡುವ ಎಚ್ಚರಿಕೆಯನ್ನು ನೀಡಿದ್ದರು.

ಬಾಗಿಲಿಗೆ ಹಾಕುವ ಮ್ಯಾಟ್ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಪ್ರಿಂಟ್ ಮಾಡಿ ಅಮೆಜಾನ್ ಸಂಸ್ಥೆ ಆವಾಂತರ ಮಾಡಿತ್ತು. ಸುಷ್ಮಾ ಎಚ್ಚರಿಕೆಯ ನಂತರ, ಕ್ಷಮಾಪಣೆ ಕೇಳಿ ಮ್ಯಾಟ್ ಅನ್ನು ಅಮೆಜಾನ್ ಹಿಂದಕ್ಕೆ ಪಡೆದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
External Affairs Minister Sushma Swaraj took to Twitter on Friday (Jan 20) to assert that all Indians were ‘her people.’ The reaction came after a Twitter user alleged she was biased towards issuing ‘Muslim Visa’.
Please Wait while comments are loading...