Ather Rizta Scooter: ಅಥರ್‌ನ ಮೊದಲ ಫ್ಯಾಮಿಲಿ ಸ್ಕೂಟರ್ ಏಪ್ರಿಲ್ 6 ರಂದು ಬಿಡಗುಡೆ
ಭಾರತದಲ್ಲಿ ಪೆಟ್ರೋಲಿಯಂ ವಾಹನಗಳಷ್ಟೇ ಎಲೆಕ್ಟ್ರಿಕ್ ವಾಹನಗಳಿಗೂ ಬೇಡಿಕೆ ಹೆಚ್ಚಾಗಿದೆ. ಎಲೆಕ್ಟ್ರಿಕ್ ಟೂವಿಲರ್ ಸೆಗ್ಮೆಂಟ್‌ನಲ್ಲೂ ಹಲವು ಕಂಪನಿಗಳು ಹಲವು ವಿವಿಧ ವಾಹನಗಳನ್ನು ಮಾರುಕಟ್ಟೆಗೆ ಬಿಡುತ್ತಲೆ ಇವೆ. ಈಗ ಆಥರ್ ತನ್ನ ಹೊಸ ಸ್ಕೂಟರ್ ಬಿಡುಗಡೆಗೆ ತಯಾರಿ ನಡೆಸಿದೆ.
ಆಥರ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರತದಲ್ಲಿ ಹೆಚ್ಚು ಜನಮಣ್ಣನೆಯನ್ನು ಗಳಿಸಿವೆ. ಇದನ್ನು ಮನಗೊಂಡು Ather Rizta ಎಲೆಕ್ಟ್ರಿಕ್ ಸ್ಕೂಟರ್ 6 ಏಪ್ರಿಲ್ ಮಾರುಕಟ್ಟೆ ಪ್ರವೇಶಿಸಲಿದೆ. ಕಂಪನಿಯು ಈಗಾಗಲೇ ಈ ಸ್ಕೂಟರ್‌ಗಾಗಿ ಪ್ರಿ-ಬುಕಿಂಗ್ ಅನ್ನು ಸಹ ಆರಂಭಿಸಿದೆ.

ಅಥರ್ ರಿಜ್ಜಾ ವೈಶಿಷ್ಟ್ಯಗಳು
ಅಥರ್‌ನ ಈ ಸ್ಕೂಟರ್ family-oriented ಆಗಿದೆ. ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಈ ಸ್ಕೂಟರ್ ಒಳಗೊಂಡಿರುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸ್ಟೋರೇಜ್ ಗಾಗಿ ಅಂಡರ್ ಸೀಟ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬೂಟ್ ಸ್ಪೇಸ್‌ನಲ್ಲಿ ಗ್ರಾಹಕ ತನ್ನ ವಸ್ತುಗಳನ್ನು ಇಟ್ಟುಕೊಳ್ಳಬಹುದಾಗಿದೆ. ಈ ಬಾಕ್ಸ್‌ನಲ್ಲಿ ಒಂದು ಹೆಲ್ಮೆಟ್ ಇಟ್ಟು, ನಿಮ್ಮ ದಿನ ನಿತ್ಯದ ವಸ್ತುಗಳನ್ನು ಇಡುವಷ್ಟ ಸ್ಪೇಸ್ ಇದೆ. ಉದಾಹರಣೆಗೆ ದಿನಸಿ ಸಾಮಾನುಗಳು, ಊಟದ ಬಾಕ್ಸ್‌ನಂತಹ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಬಹುದು. ಈ ಸ್ಕೂಟರ್‌ನಲ್ಲಿ ಅಗಲವಾದ ಸೀಟ್‌ಗಳಿದ್ದು, ಗ್ರಾಹಕರನ್ನು ಸೆಳೆಯುತ್ತದೆ.
ಏನೆಲ್ಲಾ ವ್ಯವಸ್ಥೆ ಇವೆ ಗೊತ್ತಾ?
ಸ್ಕೂಟರ್ ವಿವಿಧ ವ್ಯವಸ್ಥೆಗಳನ್ನು ಹೊತ್ತು ಮಾರುಕಟ್ಟೆಗೆ ಬರಲಿದೆ. ತ್ವರಿತ ಚಾರ್ಜಿಂಗ್ ಮತ್ತು ನ್ಯಾವಿಗೇಷನ್ ಸಹಾಯವನ್ನು ಸಹ ಇದರಲ್ಲಿ ನೀಡುವ ಸಾಧ್ಯತೆಯಿದೆ. ಸಂಭಾವ್ಯ ಹೊಸ ಬ್ಯಾಟರಿ ಮತ್ತು ಮೋಟಾರ್ ಕಾನ್ಫಿಗರೇಶನ್ ಸಹ ಇರುವ ಸಂಭವ ಇದೆ. ಅಥರ್ ಮಾದರಿಗಳಿಗೆ ಹೋಲಿಸಿದರೆ ರಿಜ್ಟಾ ಸುಧಾರಿತ ಶ್ರೇಣಿಯ ಸುಧಾರಿತ ಸ್ಕೂಟರ್ ಆಗಿದೆ. ಆದರೆ ಕಂಪನಿಯು ಈ ಸ್ಕೂಟರ್‌ನ ವಿವರಗಳನ್ನು ಇನ್ನು ಬಹಿರಂಗ ಪಡಿಸಲಿಲ್ಲ. ಈ ಸ್ಕೂಟರ್ ವೈಶಿಷ್ಟಗಳನ್ನು ಅರಿಯಲು ಏಪ್ರಿಲ್ 6ರ ವರೆಗೆ ಕಾಯಬೇಕು.
ಈಗಾಗಲೇ ಆಥರ್ ಸ್ಕೂಟರ್ ಹಲವು ಮಾದರಿಗಳಲ್ಲಿ ಗ್ರಾಹಕರನ್ನು ಸೆಳೆಯುತ್ತಿವೆ. ಅದರಲ್ಲಿ 450S, 450X and 450 ಅಪೆಕ್ಸ್ ಪ್ರಮುಖವಾದವು. ಈ ಪಟ್ಟಿಗೆ ಮತ್ತೊಂದು ಸ್ಕೂಟರ್ ಸೇರಿಕೊಳ್ಳಲಿದೆ.
ಜನವರಿ 2024 ರಲ್ಲಿ ಓಲಾ ಎಲೆಕ್ಟ್ರಿಕ್‌ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಚಿಲ್ಲರೆ 32,252 ಯುನಿಟ್‌ಗಳು, ಟಿವಿಎಸ್ ಮೋಟಾರ್ ಕಂಪನಿ 15,224 ಯುನಿಟ್‌ಗಳು ಮತ್ತು ಬಜಾಜ್ ಆಟೋ 10,829 ಯುನಿಟ್‌ಗಳು, ಮತ್ತು ಅಥರ್ ಜನವರಿ 2024 ರಲ್ಲಿ 9,247 ಯೂನಿಟ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವಾಗಿವೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications