ಯುಪಿ ಸಿಎಂ ಆದಿತ್ಯನಾಥ್ ಪರಮಾಪ್ತ ಈ ಮುಸ್ಲಿಂ ಯುವಕ

Posted By:
Subscribe to Oneindia Kannada

ಲಕ್ನೋ, ಮಾರ್ಚ್ 21: ಗೋರಖ್ ನಾಥ್ ದೇಗುಲದಲ್ಲಿರುವ ಮುಸ್ಲಿಂ ಯುವಕನೊಬ್ಬ ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಪ್ತ. ದೇಗುಲದ ಗೋಶಾಲೆಯಲ್ಲಿ ಸಿಬ್ಬಂದಿಯಾಗಿರುವ ಈತ ಎಲ್ಲರಂತೆ ಕೇಸರಿ ದಿರಿಸಿನಲ್ಲಿ ಕಾಣಿಸುತ್ತಾನೆ.

30 ವರ್ಷ ವಯಸ್ಸಿನ ಮನ್ ಮೊಹಮ್ಮದ್ ಅವರು ಯುಪಿ ಸಿಎಂ ಯೋಗಿ ಅವರ ಆಪ್ತರಲ್ಲಿ ಒಬ್ಬರು. ದೇಗುಲದಲ್ಲಿದ್ದರೂ ಮೊಹಮ್ಮದ್ ಅವರು ನಿತ್ಯ ನಮಾಜ್ ಮಾಡುತ್ತಾರೆ. ಇಸ್ಲಾಂ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದ್ದಾರೆ. [ಆ ಒಂದು ಘಟನೆಯೇ ಯೋಗಿ ಸಿಎಂ ಆಗಲು ಮೂಲ ಕಾರಣ!]

At Gorakhnath: Yogi Adityanath has special bondage with a Muslim volunteer

ಅಲ್ಲಿರುವ ಹಿಂದೂ ಕಾರ್ಯಕರ್ತರಿಗೆ ಮನ್ ಮೊಹಮ್ಮದ್ ಜತೆ ಉತ್ತಮ ಸ್ನೇಹ ಸಂಬಂಧವಿದೆ. ಹಿಂದೂ ಸಿಬ್ಬಂದಿಗಳಿಗೆ ಸಿಗುತ್ತಿರುವ ಸಂಬಳ ಹಾಗೂ ಸೌಲಭ್ಯಗಳು ಮೊಹಮ್ಮದ್ ಗೂ ಸಿಗುತ್ತಿದೆ.

'ನಾನು ನನ್ನ ಬಾಲ್ಯವನ್ನು ಇದೇ ದೇವಾಲಯದಲ್ಲಿ ಕಳೆದಿದ್ದೀನಿ.ಇದು ನನ್ನ ಮನೆಯಂತೆಯೇ. ಯೋಗಿಜೀ ನನಗೆ ಪ್ರೀತಿ, ಆದರವನ್ನು ಕೊಡುತ್ತಾರೆ. ನನ್ನ ಮುಂದಿನ ಜೀವನವನ್ನು ನಾನಿಲ್ಲೇ ಕಳೆಯಲು ಬಯಸುತ್ತೀನಿ' ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡಿದ ಮನ್ ಹೇಳಿದ್ದಾರೆ.[15 ದಿನದೊಳಗೆ ಆದಾಯ ವಿವರ ನೀಡಿ: ಯೋಗಿ ಆದಿತ್ಯನಾಥ್]

10 ವರ್ಷದವನಿದ್ದಾಗ ಗೋರಖ್‍ನಾಥ್ ದೇವಾಲಯದ ಗೋಶಾಲೆಯಲ್ಲಿ ಕೆಲಸ ಆರಂಭ ಮಾಡಿದ ಮನ್ ಮೊಹಮ್ಮದ್ ಅವರದ್ದು ಕಡು ಬಡತನವಿರುವ ಕುಟುಂಬ. ಈತನನ್ನು ಈತನ ಅಪ್ಪ ಇನಾಯತುಲ್ಲಾ ಗೋರಖ್‍ಪುರದ ಈ ಗೋಶಾಲೆಯಲ್ಲಿ ಕೆಲಸಕ್ಕಿರಿಸಿದ್ದರು. ಅಂದುಮಹಂತ್ ದಿಗ್ವಿಜಯ್ ನಾಥ್ ಮತ್ತು ಮಹಂತ್ ಅವೈದ್ಯನಾಥ್ ಅವರು ಈತನಿಗೆ ಧೈರ್ಯ ಹೇಳಿ ಗೋಶಾಲೆಯಲ್ಲಿ ಕೆಲಸಕ್ಕೆ ನೇಮಿಸಿದರು.[ಮಿಸ್ಟರ್ 'ಯೋಗಿ'- ವಿವಾದ, ಹಿಂದುತ್ವ, ಸನ್ಯಾಸದ ಮಿಕ್ಸ್ಚರ್]

ಇಂದು ಇಲ್ಲಿನ ಗೋಶಾಲೆಯಲ್ಲಿ ಮೊಹಮ್ಮದ್ ಚಿರಪರಿಚಿತ. ಗೋವುಗಳತ್ತವಿರುವ ನನ್ನ ಸಮರ್ಪಣಾಭಾವವನ್ನು ಯೋಗಿಗಳು ತುಂಬಾ ಮೆಚ್ಚುತ್ತಾರೆ.ಇವುಗಳಲ್ಲಿ ನಂದಿನಿ ಹಸು ನನ್ನಿಷ್ಟದ್ದು. ಹಸುಗಳಿಗೆ ಆಹಾರ ನೀಡದೆ ಯೋಗಿಜಿ ಯಾವತ್ತೂ ಬೆಳಗ್ಗಿನ ತಿಂಡಿ ಸೇವಿಸುವುದಿಲ್ಲ ಎನ್ನುತ್ತಾರೆ.[ಯೋಗಿ ಎಫೆಕ್ಟ್: ಅಲಹಾಬಾದ್ ನಲ್ಲಿ ಎರಡು ಕಸಾಯಿ ಖಾನೆಗಳಿಗೆ ಬೀಗ]

ಮನ್ ಅವರ ಅಪ್ಪ ಇಲ್ಲಿಂದ 40ಕಿಮಿ ದೂರವಿರುವ ಮಹಾರಾಜ್‍ಗಂಜ್‍ನಲ್ಲಿ ವಾಸವಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇವರ ಚಿಕಿತ್ಸೆಯ ಖರ್ಚುಗಳನ್ನೆಲ್ಲಾ ಯೋಗಿ ಆದಿತ್ಯನಾಥ್ ಅವರೇ ವಹಿಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At Gorakhnath: UP CM Yogi Adityanath shares a special bondage with a Muslim volunteer Man Mohammad
Please Wait while comments are loading...