ತೃತೀಯ ರಂಗದ ಪ್ರಯತ್ನ? 7 ಮುಖ್ಯಮಂತ್ರಿಗಳೊಂದಿಗೆ ಕೇಜ್ರಿವಾಲ್ ಸಭೆ?

ಮುಂಬರುವ ಚುನಾವಣೆಗೆ ಕೇಜ್ರಿವಾಲ್ ತೃತೀಯ ರಂಗ ರಚನೆಗೆ ಆರಂಭಿಸಿದ್ದಾರೆ. ಇದಕ್ಕಾಗಿ ಏಳು ರಾಜಕೀಯ ಪಕ್ಷಗಳನ್ನು ಅರವಿಂದ್ ಕೇಜ್ರಿವಾಲ್ ಸಂಪರ್ಕಿಸಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆಗೆ ಆಮ್ ಆದ್ಮಿ ಪಕ್ಷ ಸಿದ್ಧವಾಗುತ್ತಿದೆ. ಇದಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆಗೂ ಮುನ್ನ ಮತ್ತೊಮ್ಮೆ ಅಧಿಕಾರಕ್ಕೇರಲು ಬೇಕಾದ ಹೊಸ ಪ್ರಯತ್ನಕ್ಕೆ ಆಪ್ ಸಿದ್ಧವಾಗುತ್ತಿದೆ. ಈ ನಡುವೆ ಮಹತ್ವದ ವಿಚಾರವೊಂದು ಬೆಳಕಿಗೆ ಬಂದಿದೆ. ಬಿಜೆಪಿಯೇತರ ಹಾಗೂ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳ ವೇದಿಕೆಯನ್ನು ರೂಪಿಸಲು ಅರವಿಂದ್ ಕೇಜ್ರಿವಾಲ್ ಯೋಜನೆ ರೂಪಿಸಿದ್ದರು. ಅದಕ್ಕೆ ಪೂರಕವಾಗಿ ಒಟ್ಟು ಏಳು ಮುಖ್ಯಮಂತ್ರಿಗಳಿಗೆ ಅರವಿಂದ್ ಕೇಜ್ರಿವಾಲ್ ಪತ್ರ ಬರೆದಿದ್ದರು ಎಂಬ ಸಂಗತಿ ಗೊತ್ತಾಗಿದೆ.

ಮುಂಬರುವ ಚುನಾವಣೆಗೆ ಕೇಜ್ರಿವಾಲ್ ತೃತೀಯ ರಂಗ ರಚನೆಗೆ ಆರಂಭಿಸಿದ್ದಾರೆ. ಇದಕ್ಕಾಗಿ ಏಳು ರಾಜಕೀಯ ಪಕ್ಷಗಳನ್ನು ಅರವಿಂದ್ ಕೇಜ್ರಿವಾಲ್ ಸಂಪರ್ಕಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಮೈತ್ರಿಕೂಟ ರಚನೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಸೇತರ ಮುಖ್ಯಮಮತ್ರಿಗಳ ವೇದಿಕೆಯನ್ನು ರೂಪಿಸಲು ಕೇಜ್ರಿವಾಲ್ ಯೋಜನೆ ರೂಪಿಸಿದ್ದಾರೆ.

Assembly Elections: Third Front Attempt? Arvind Kejriwal Planned meet with 7 Chief Ministers

ಕಳೆದ ಫೆಬ್ರವರಿ 5ರಂದು ಒಟ್ಟು ಏಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು ದೆಹಲಿ ಸಿಎಂ ಕೇಜ್ರಿವಾಲ್, ಮಾರ್ಚ್ 18ರಂದು ದೆಹಲಿಯಲ್ಲಿ ಆಯೋಜಿಸಲಾಗಿರುವ ಭೋಜನಕೂಟಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಅಲ್ಲದೇ ಕೇಂದ್ರದ ವಿರುದ್ಧ ಹೋರಾಡುತ್ತಿರುವ ಪ್ರಗತಿಪರ ಮುಖ್ಯಮಂತ್ರಿಗಳ ಗುಂಪನ್ನು ರಚಿಸುವ ಕುರಿತು ಚರ್ಚೆ ನಡೆಸುವ ಕುರಿತೂ ಕೇಜ್ರಿವಾಲ್ ಪತ್ರವಾಲ್ ಪತ್ರದಲ್ಲಿ ಉಲ್ಲೇಖಿಸಿದ್ದರು.

7 ಮುಖ್ಯಮಂತ್ರಿಗಳೊಂದಿಗೆ ಸಭೆ

ಆ ಪತ್ರವನ್ನು ಫೆಬ್ರವರಿ 5 ರಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳದ ಪಿಣರಾಯಿ ವಿಜಯನ್, ತಮಿಳುನಾಡಿನ ಎಂಕೆ ಸ್ಟಾಲಿನ್, ಜಾರ್ಖಂಡ್‌ನ ಹೇಮಂತ್ ಸೊರೆನ್ ಮತ್ತು ಇತರರಿಗೆ ಕಳುಹಿಸಲಾಗಿದೆ. ಆದಾಗ್ಯೂ, ಆಹ್ವಾನಿತರಲ್ಲಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಕಳಪೆ ಆರೋಗ್ಯವನ್ನು ಉಲ್ಲೇಖಿಸಿ ಅದನ್ನು ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Assembly Elections: Third Front Attempt? Arvind Kejriwal Planned meet with 7 Chief Ministers

ಇತ್ತೀಚಿನ ವರ್ಷಗಳಲ್ಲಿ ರಾವ್ ಅವರು ಬಿಜೆಪಿಯೇತರ, ಕಾಂಗ್ರೆಸೇತರ ತೃತೀಯ ರಂಗದ ರಚನೆಗೆ ಸಿದ್ದರಾಗಿದ್ದು. ಆದರೆ ಇತರ ಪಕ್ಷಗಳಿಂದ ನೀರಸ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯತ್ನಗಳನ್ನು ಕೈಬಿಟ್ಟಿದ್ದಾರೆ. ಕಾಂಗ್ರೆಸ್‌ನ್ನು ಹೊರಗಿಟ್ಟು ಮೈತ್ರಿ ರಚಿಸುವ ಪ್ರಯತ್ನಗಳಿಗೆ ಡಿಎಂಕೆ ಕೂಡ ವಿರೋಧ ವ್ಯಕ್ತಪಡಿಸುತ್ತಿದೆ.

ತೃತೀಯ ರಂಗದ ಪ್ರಯತ್ನ

ಕಳೆದ ತಿಂಗಳು ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿಯು ರಾಷ್ಟ್ರೀಯ ಭಾರತ್ ರಾಷ್ಟ್ರ ಸಮಿತಿಯಾಗಿ ಮಾರ್ಫ್ ಆಗಿದ್ದಾಗ ಭಾಗವಹಿಸಿದ್ದ ಕೆಲವೇ ಕೆಲವರಲ್ಲಿ ಕೇಜ್ರಿವಾಲ್ ಕೂಡ ಒಬ್ಬರು. ಬಿಹಾರ ಮತ್ತು ಬಂಗಾಳ ಸರ್ಕಾರಗಳ ಮೂಲಗಳು ಕೇಜ್ರಿವಾಲ್ ಅವರ ಆಹ್ವಾನವನ್ನು ದೃಢಪಡಿಸಿವೆ. ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಕಚೇರಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Assembly Elections: Third Front Attempt? Arvind Kejriwal Planned meet with 7 Chief Ministers

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಉದ್ದೇಶಿಸಿರುವುದಾಗಿ ಈಗಾಗಲೇ ಘೋಷಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ 7 ಮುಖ್ಯಮಂತ್ರಿಗಳೊಂದಿಗೆ ಸಭೆ

ಬಿಹಾರದ ನಿತೀಶ್ ಕುಮಾರ್ ಅವರು ಎರಡನೇ ಬಾರಿಗೆ ಬಿಜೆಪಿಯಿಂದ ಬೇರ್ಪಟ್ಟ ನಂತರ ನಾಯಕತ್ವದ ಪಾತ್ರವನ್ನು ವಹಿಸಿದ್ದಾರೆ. ಜೊತೆಗೆ ತೇಜಸ್ವಿ ಯಾದವ್ ಅವರು, "ತೇಜಸ್ವಿ ಯಾದವ್ ಹಾಗೂ ನಿತೀಶ್ ಕುಮಾರ್ ಅವರಿಗೂ ಪ್ರಧಾನಿಯಾಗಲು ಬಯಸುವುದಿಲ್ಲ ಅಥವಾ ನಾನು ಮುಖ್ಯಮಂತ್ರಿಯಾಗಲು ಬಯಸುವುದಿಲ್ಲ. ನಾವು ಎಲ್ಲಿದ್ದೇವೆಯೋ ಅಲ್ಲಿ ನಾವು ಸಂತೋಷವಾಗಿದ್ದೇವೆ" ಎಂದು ಹೇಳಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಕೇಜ್ರಿವಾಲ್‌ ಅವರು ಬರೆದಿದ್ದ ಪತ್ರಕ್ಕೆ, ಈ ಮುಖ್ಯಮಂತ್ರಿಗಳಿಂದ ನೀರಸ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದ್ದು, ದೆಹಲಿ ಮುಖ್ಯಮಂತ್ರಿ ಅವರ ತೃತೀಯ ರಂಗ ರಚನೆಯ ಪ್ರಯತ್ನ ಆರಂಭದಲ್ಲೇ ವೈಫಲ್ಯ ಕಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಂಭಾವ್ಯ ಮಹಾಮೈತ್ರಿಕೂಟದಲ್ಲಿ ನಾಯಕತ್ವದ ಪಾತ್ರವನ್ನು ಬಯಸದೆ, ಸಮಾನ ಮನಸ್ಕ ಪಕ್ಷಗಳೊಂದಿಗೆ ಕೆಲಸ ಮಾಡಲು ಸಿದ್ಧ ಎಂದು ಕಾಂಗ್ರೆಸ್ ಘೋಷಿಸಿದೆ. ಆದರೂ ಬಹುತೇಕ ರಾಜಕೀಯ ಪಕ್ಷಗಳು ಕಾಂಗ್ರೆಸ್‌ನ್ನು ಹೊರಗಿಡುವ ಪ್ರಯತ್ನ ಮಾಡುತ್ತಿರುವುದು ಕುತೂಹಲಕಾರಿ ಸಂಗತಿಯಾಗಿದೆ.

ಮೈತ್ರಿಯಲ್ಲಿ ನಾಯಕತ್ವದ ಪಾತ್ರವನ್ನು ಬಯಸದೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಕೆಲಸ ಮಾಡಲು ಸಿದ್ಧ ಎಂದು ಕಾಂಗ್ರೆಸ್ ಘೋಷಿಸಿದ್ದರೂ ಸಹ 2024 ಕ್ಕೆ ತೃತೀಯ ರಂಗ ರಚನೆ ಭಾರೀ ಕೂತೂಹಲವನ್ನು ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+