Assembly Election-2023 Results: ಪಂಚ ರಾಜ್ಯಗಳು ಚುನಾವಣಾ ಫಲಿತಾಂಶ ಪ್ರಕಟ, ಕ್ಷಣ ಕ್ಷಣದ ಮಾಹಿತಿ
ಬೆಂಗಳೂರು, ನವೆಂಬರ್ 23: ದೇಶದಲ್ಲಿ ಬಹುನಿರೀಕ್ಷೆಯ 'ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ' ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ಡಿಸೆಂಬರ್ 03 ರಂದು ಪ್ರಕಟವಾಗಲಿದೆ. ಈ ಐದು ರಾಜ್ಯಗಳಲ್ಲಿ ನವೆಂಬರ್ 7ರಿಂದ ಆರಂಭ ಚುನಾವಣೆ ಪ್ರಕ್ರಿಯೆ ನವೆಂಬರ್ 30ವರೆಗೆ ನಡೆಯಿತು. ಚುನಾವಣೆ ಫಲಿತಾಂಶ ಪ್ರಕಟಗೊಳ್ಳಬೇಕಿದೆ. ಶಾಸಕಾಂಗ ಸಭೆಗಳ ಅವಧಿಯು ಡಿಸೆಂಬರ್ 2023 ಮತ್ತು ಜನವರಿ 2024 ರ ನಡುವೆ ಅಂತ್ಯಗೊಳ್ಳಲಿದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಕ್ಷಣ ಕ್ಷಣದ ಮಾಹಿತಿ 'ಒನ್‌ಇಂಡಿಯಾ ಕನ್ನಡ'ದ ಲೈವ್ ಪ್ರಸಾರದಲ್ಲಿ ವೀಕ್ಷಿಸಬಹುದು.
ಸದ್ಯದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶಗಳು ಮುಂದಿನ ಚುನಾವಣೆಗಳ ಮೇಲೆ ಪ್ರಭಾವ ಬೀರಲಿದೆ. ಈ ಈ ಫಲಿತಾಶವು ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ), ಪ್ರಧಾನ ವಿರೋಧ ಪಕ್ಷವಾದ ಕಾಂಗ್ರೆಸ್ ಮತ್ತು ವಿವಿಧ ಪ್ರಾದೇಶಿಕ ಪಕ್ಷಗಳಿಗೆ ಮಹತ್ವದ ಘಟ್ಟವಾಗಿದೆ.

* ದೇಶದ 'ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ' ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಪ್ರಕಟ ಪ್ರಕ್ರಿಯೆ ಡಿಸೆಂಬರ್ 03 ಬೆಳಗ್ಗೆ ಆರಂಭವಾಗಲಿದೆ. ರಾಜಕೀಯ ಪಕ್ಷಗಳು ಗಮನವೆಲ್ಲ ಮತ ಎಣಿಕಾ ಕೇಂದ್ರಗಳತ್ತ ನೆಟ್ಟಿದೆ.
* ತೆಲಂಗಾಣದಲ್ಲಿ ನವೆಂಬರ್ 30ರಂದು ಎಲ್ಲ 119 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಈ ಕ್ಷೇತ್ರದ ಮತ ಎಣಿಕೆ ಆರಂಭವಾಗಿದೆ. ಇಲ್ಲಿ ಆಡಳಿತ ಪಕ್ಷ ಬಿಆರ್‌ಎಸ್ ಮತ್ತು ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಸದ್ಯ ಬಿಆರ್‌ಎಸ್ ಮುನ್ನಡೆ ಕಾಯ್ದುಕೊಂಡಿದೆ.
* ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಏಕಕಾಲಕ್ಕೆ ಪ್ರಕಟಗೊಳ್ಳುತ್ತಿದೆ. ಎಲ್ಲಿಯೂ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಮತ ಎಣಿಕಾ ಕೇಂದ್ರಗಳ ಸುತ್ತಮುತ್ತ ಹೆಚ್ಚುವರಿ ಬಿಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಸಮಗ್ರ ಚುನಾವಣಾ ಪ್ರಕ್ರಿಯೆಗಳ ಮಾಹಿತಿ ತಿಳಿಸುವ ಭಾಗವಾಗಿ Dailyhunt ತನ್ನ ಹೊಸದಾಗಿ ಪರಿಷ್ಕರಿಸಿದ ಚುನಾವಣಾ ವಲಯವನ್ನು ಅನಾವರಣಗೊಳಿಸಿದೆ. ಮೂಲಭೂತ ಅಂಶಗಳ ಜೊತೆಗೆ ಪಕ್ಷದ ಮಾಹಿತಿ, ಅಭ್ಯರ್ಥಿ ಪಟ್ಟಿಗಳು, ನೈಜ-ಸಮಯದ ಅಪ್ಟೇಡ್ ಸುದ್ದಿಗಳು, ಚುನಾವಣಾ ಕಾರ್ಡ್‌ಗಳು, ಸಮಗ್ರ ಅಭ್ಯರ್ಥಿ ಪ್ರೊಫೈಲ್‌ಗಳು ಮತ್ತು ಪಕ್ಷಪಾತವಿಲ್ಲದ ವಿಶ್ಲೇಷಣೆಯ ಒಳನೋಟ ಪ್ರಕಟಗೊಳಿಸಲಿದೆ.
ಚುನಾವಣೆಗೆ ಸಂಬಂಧಿತ ವಿಡಿಯೋ ಲೈವ್ ಅಪ್‌ಡೇಟ್‌ಗಳು, ಆಕರ್ಷಕವಾಗಿ ರಸಪ್ರಶ್ನೆಗಳು ಮತ್ತು ಹೆಚ್ಚಿನದನ್ನು ಒಳಗೊಂಡಿರುವ ಸಂಪೂರ್ಣ ಮಲ್ಟಿ ಮೀಡಿಯಾದ ಸಂಪೂರ್ಣ ಅನುಭವವನ್ನು ಪಡೆಯಿರಿ. ನಿಮ್ಮ ಎಲ್ಲ ಚುನಾವಣಾ ಅಗತ್ಯಗಳಿಗಾಗಿ ಡೈಲಿ ಹಂಟ್ ಅನ್ನು ವೀಕ್ಷಿಸುವ ಮೂಲಕ ತತಕ್ಷಣದ ಮಾಹಿತಿ ಪಡೆದುಕೊಳ್ಳಬಹುದಾಗಿದೆ.












Click it and Unblock the Notifications