ವಿಧಾನಸಭೆ ಚುನಾವಣೆ 2025: ಈ ಕ್ಷೇತ್ರದಲ್ಲಿ 20 ವರ್ಷಗಳ ಬಳಿಕ ಮತದಾನ: ತಾತ ಏನ್‌ ಹೇಳಿದ್ರು ನೋಡಿ..

Bihar Assembly Election 2025: ಬಿಹಾರದಲ್ಲಿ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ನವೆಂಬರ್ 6) ನಡೆಯುತ್ತಿದೆ. 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇನ್ನೂ ಇಲ್ಲೊಂದು ಕ್ಷೇತ್ರದ ಜನರಿಗೆ 20 ವರ್ಷಗಳ ಬಳಿಕ ಈ ಭಾಗ್ಯ ಸಿಕ್ಕಿದೆ. ಹಾಗಾದ್ರೆ ಎಲ್ಲಿ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬಿಹಾರದಲ್ಲಿ ಒಟ್ಟು 2 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈ ಪೈಕಿ ಇಂದು (ನವೆಂಬರ್ 6) 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದೆ. ನವೆಂಬರ್ 11ರಂದು 2ನೇ ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

Assembly Election 2025 Historic Voting in Bihar s Naxal-Affected Bhimband After 20 Years

ಇದೀಗ ಬಿಹಾರದ ನಕ್ಸಲ್ ಪ್ರಭಾವಿತ ಮುಂಗೇರ್‌ನ ಭೀಂಬಾಂಡ್ ಪ್ರದೇಶದಲ್ಲಿ 20 ವರ್ಷಗಳ ಬಳಿಕ ಮೊದಲ ಬಾರಿಗೆ ಮತದಾನ ನಡೆಯುತ್ತಿದೆ. ಈ ಬಗ್ಗೆ ಸ್ಥಳೀಯ ವೃದ್ಧರೊಬ್ಬರು ಮಾತನಾಡಿದ್ದು, "ನಮಗೆ ಮತದಾನ ಮಾಡಿದ್ದಕ್ಕೆ ತುಂಬಾ ತುಂಬಾ ಸಂತೋಷ ಆಗಿದೆ. ನೀವು ಎಲ್ಲರೂ ಇಲ್ಲಿ ಬಂದಿದ್ದಕ್ಕೆ ನನಗೆ ಬಹಳ ಖುಷಿಯಾಗಿದೆ. 20 ವರ್ಷಗಳ ನಂತರ ಇಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ," ಎಂದು ಹೇಳಿದ್ದಾರೆ.

"2005ರಿಂದ ಇಲ್ಲಿನ ಪರಿಸ್ಥಿತಿ ಅನುಕೂಲಕರವಾಗಿರಲಿಲ್ಲ. ಈಗ ಯಾವುದೇ ಭಯವಿಲ್ಲ. ಇಲ್ಲಿ ಭದ್ರತಾ ಪಡೆಗಳ ಶಿಬಿರ ಸ್ಥಾಪನೆಯಾದ ನಂತರದಿಂದ ನಾವು ಶಾಂತಿಯುತವಾಗಿ ಬದುಕುತ್ತಿದ್ದೇವೆ. ಸರ್ಕಾರದ ಸೌಲಭ್ಯಗಳು ಈಗ ಬಹಳ ಉತ್ತಮವಾಗಿವೆ. ಕಳೆದ ಕೆಲವು ವರ್ಷಗಳಿಂದ ನಮಗೆ ಉಚಿತ ಪಡಿತರ ದೊರಕುತ್ತಿದೆ. ಇದಕ್ಕಾಗಿ ನಾವು ಧನ್ಯರಾಗಿದ್ದೇವೆ," ಎಂದು ಹೇಳಿದರು.

"ಈಗ ನಮಗೆ ಯಾವುದೇ ತೊಂದರೆಗಳಿಲ್ಲ. ನಾವು ಕಾಡಿನೊಳಗೆ ಶಾಂತಿಯುತವಾಗಿ ಜೀವನ ನಡೆಸುತ್ತಿದ್ದೇವೆ. ಇಲ್ಲಿ ಮತಗಟ್ಟೆ ಸ್ಥಾಪನೆ ಆಗಿರುವುದು ನಮಗೆ ಬಹಳ ಸಂತೋಷದ ವಿಷಯ. ಯುವಕರು ಮತ್ತು ವಯೋವೃದ್ಧರು ಎಲ್ಲರೂ ಮತ ಚಲಾಯಿಸಲು ಸಾಧ್ಯವಾಗಿದೆ," ಎಂದು ಸಂತಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+