25 ಜನರ ಬಲಿಪಡೆದ ಸಾಗರ್ ಸರೋವರ
ಶಿಮ್ಲಾ, ಸೆ. 24 : ಬಿಸ್ಲಾಪುರದ ಸಮೀಪದ ರಾಯನ್ ಗೋಬಿಂದ್ ಸಾಗರ್ ಸರೋವರಕ್ಕೆ ಬುಧವಾರ ಬೆಳಗ್ಗೆ ಬಸ್ ಉರುಳಿದ ಪರಿಣಾಮ 25 ಜನ ಸಾವನ್ನಪ್ಪಿದ್ದು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈಗಾಗಲೇ 25 ಶವಗಳನ್ನು ಮೇಲೆತ್ತಲಾಗಿದ್ದು ಅನೇಕರು ನಾಪತ್ತೆಯಾಗಿರುವ ಶಂಕೆಯಿದೆ. ಗಂಭೀರ ಗಾಯಗೊಂಡಿದ್ದ 15 ಜನ ಪ್ರಯಾಣಿಕರನ್ನು ಬಿಸ್ಲಾಪುರ ಆಸ್ಪತ್ರಗೆ ದಾಖಲಿಸಲಾಗಿದೆ. ನಾಪತ್ತೆಯಾದವರ ಹುಡುಕಾಟಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಬಿಸ್ಲಾಪುರ ಜಿಲ್ಲಾಧಿಕಾರಿ ಅಜಯ್ ಶರ್ಮಾ ತಿಳಿಸಿದ್ದಾರೆ.(ಖಾಸಗಿ ಬಸ್ ದುರಂತ, ಆರು ಮಂದಿ ದುರ್ಮರಣ)

40 ಸೀಟು ಸಾಮರ್ಥ್ಯದ ಬಸ್ ಸಂಪೂರ್ಣ ತುಂಬಿಕೊಂಡು ಸಾಗುತ್ತಿತ್ತು. ಕೆಲವರು ಬಸ್‌ನ ಟಾಪ್‌ಮೇಲೆಯೂ ಕುಳಿತಿದ್ದರು ಎಂದು ಕೆಲ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಹೃಷಿಕೇಶದಿಂದ ಬಿಸ್ಲಾಪುರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಅನೇಕ ವಿದ್ಯಾರ್ಥಿಗಳು ಮತ್ತು ಕಾಂರ್ಮಿಕರು ತುಂಬಿದ್ದರು ಎನ್ನಲಾಗಿದೆ.(ಪಿಟಿಐ ಚಿತ್ರ)
ಸ್ಥಳೀಯರೇ ತುಂಬಿದ್ದ ಬಸ್‌ನಿಂದ ಅರ್ಧ ಡಜನ್ ಜನ ಹಾರಿ ತಪ್ಪಿಸಿಕೊಂಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.












Click it and Unblock the Notifications