Vande Bharat; ಹೊಸ ವಿನ್ಯಾಸದ ವಂದೇ ಭಾರತ್ ರೈಲು ನೋಡಿ

ಚೆನ್ನೈ, ಜುಲೈ 09; ಭಾರತೀಯ ರೈಲ್ವೆಯ ಸೆಮಿ ಹೈ-ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾರೀ ಬೇಡಿಕೆ ಇದೆ. ದೇಶದ 26 ಮಾರ್ಗದಲ್ಲಿ ಈಗಾಗಲೇ ಈ ರೈಲುಗಳು ಸಂಚಾರ ನಡೆಸುತ್ತಿವೆ. ವಿವಿಧ ರಾಜ್ಯಗಳು ತಮ್ಮ ರಾಜ್ಯದಲ್ಲಿ ಇನ್ನೂ ಕೆಲವು ಮಾರ್ಗದಲ್ಲಿ ವಂದೇ ಭಾರತ್ ರೈಲು ಆರಂಭಿಸಬೇಕು ಎಂದು ಬೇಡಿಕೆ ಇಟ್ಟಿವೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್‌)ಯಲ್ಲಿ ತಯಾರು ಮಾಡಲಾಗುತ್ತದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಐಸಿಎಫ್‌ಗೆ ಭೇಟಿ ನೀಡಿ, ರೈಲು ತಯಾರಿಕೆಯನ್ನು ಪರಿಶೀಲನೆ ನಡೆಸಿದರು.

Vande Bharat express train

ಈ ಕುರಿತು ಫೋಟೋವನ್ನು ಅವರು ಟ್ವೀಟ್ ಮಾಡಿದ್ದಾರೆ. ಇಷ್ಟು ದಿನ ದೇಶದಲ್ಲಿ ಬಿಳಿ ಮತ್ತು ನೀಲಿ ಬಣ್ಣದ ವಂದೇ ಭಾರತ್ ರೈಲುಗಳು ಓಡುತ್ತಿದ್ದವು. ಮೊದಲ ಬಾರಿಗೆ ಸಚಿವರು ಬಿಳಿ ಮತ್ತು ಕೇಸರಿ ಬಣ್ಣದ ರೈಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹಲವು ಬದಲಾವಣೆ; ಬಣ್ಣ ಸೇರಿದಂತೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದೆ. ಸೀಟಿನ ವಿನ್ಯಾಸ, ರೈಲಿನ ವಿನ್ಯಾಸ, ಸುರಕ್ಷತೆಗಾಗಿ ಹಲವು ತಾಂತ್ರಿಕ ಅಂಶಗಳನ್ನು ಸೇರಿಸಲಾಗಿದೆ. ಈ ಮಾದರಿಯ ರೈಲಿನ ತಯಾರಿಕೆಯನ್ನು ಕೇಂದ್ರ ಸಚಿವರು ವೀಕ್ಷಣೆ ಮಾಡಿದರು, ಕೋಚ್ ಫ್ಯಾಕ್ಟರಿ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದರು.

ನೂತನವಾಗಿ ವಿನ್ಯಾಸಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲಿಯೇ ಸಂಚಾರವನ್ನು ಆರಂಭಿಸಲಿದೆ. ಈಗ ತಯಾರಾಗುತ್ತಿರುವ ರೈಲುಗಳು ಡಿಸೆಂಬರ್ ವೇಳಗೆ ದೇಶದಲ್ಲಿ ಸಂಚಾರ ನಡೆಸಲಿವೆ ಎಂದು ಅಂದಾಜಿಲಾಸಲಾಗಿದೆ. ಆಗಸ್ಟ್‌ನಲ್ಲಿ 75 ವಂದೇ ಭಾರತ್ ರೈಲುಗಳು ಸಂಚಾರ ನಡೆಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಈಗ ಕೇವಲ 26 ರೈಲುಗಳು ಸಂಚಾರ ನಡೆಸುತ್ತಿವೆ.

ಬಿಳಿ ಮತ್ತು ನೀಲಿ ಬಣ್ಣದ ವಂದೇ ಭಾರತ್, ವಂದೇ ಭಾರತ್ 2.0 ಮಾದರಿಯ ರೈಲುಗಳು ದೇಶದಲ್ಲಿ ಯಶಸ್ವಿಯಾಗಿವೆ. ಈಗ ವಿನ್ಯಾಸ ಸೇರಿ ಹಲವು ಬದಲಾವಣೆಯೊಂದಿಗೆ ಹೊಸ ಬಣ್ಣದ ವಂದೇ ಭಾರತ್ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆಯು ನಿರ್ಧರಿಸಿದೆ.

ಚೆನ್ನೈನ ಐಸಿಎಫ್‌ ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಜಿವಿ ವೆಂಕಟೇಶನ್ ಮಾತನಾಡಿ, "ಪ್ರಾಯೋಗಿಕವಾಗಿ ಕೇಸರಿ, ಬಳಿ ಬಣ್ಣದ ವಂದೇ ಭಾರತ್ ವಿನ್ಯಾಸವನ್ನು ಮಾಡಲಾಗಲಾಗಿದೆ. ಭಾರತೀಯ ರೈಲ್ವೆಯ ಅಂತಿಮ ಒಪ್ಪಿಗೆ ಬಳಿಕ ಇದನ್ನು ಸಂಚಾರಕ್ಕೆ ಸಿದ್ಧಡಿಸಲಾಗುತ್ತದೆ" ಎಂದು ಹೇಳಿದ್ದಾರೆ.

ಮುಂದೆ ಸಂಚಾರ ನಡೆಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸೀಟುಗಳ ಸಂಖ್ಯೆಯೂ ಹೆಚ್ಚಿರಲಿದೆ. ಅಲ್ಲದೇ ಸೀಟಿನ ಕುಷನ್‌ನಲ್ಲಿಯೂ ಹಲವು ಬದಲಾವಣೆ ಮಾಡಲಾಗಿದೆ. ಪ್ರತಿ ಸೀಟಿಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ದಿವ್ಯಾಂಗರು ಸುಲಭವಾಗಿ ಸಂಚಾರ ನಡೆಸಲು ಸಾಧ್ಯವಾಗುವಂತೆ ರೈಲಿನ ಸೀಟಿಗೆ ವೀಲ್‌ ಚೇರ್ ಜೋಡಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ರೈಲಿನ ಬೆಳಕಿನ ವ್ಯವಸ್ಥೆಯಲ್ಲಿ ಸಹ ಕೆಲವು ಬದಲಾವಣೆಗಳನ್ನು ಹೊಸ ವಿನ್ಯಾಸದಲ್ಲಿ ಮಾಡಲಾಗಿದೆ.

ಭಾರತೀಯ ರೈಲ್ವೆ ಭವಿಷ್ಯದಲ್ಲಿ ವಂದೇ ಭಾರತ್ ರೈಲನ್ನು ಶತಾಬ್ದಿಗೆ ಪರ್ಯಾಯವಾಗಿ ದೇಶದಲ್ಲಿ ಸಂಚಾರ ನಡೆಸಲು ಬಯಸಿದೆ. ಇದಕ್ಕಾಗಿ ದೇಶದ ವಿವಿಧ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಶತಾಬ್ದಿ ಮಾರ್ಗದಲ್ಲಿ ಈ ರೈಲನ್ನು ಓಡಿಸುತ್ತಿದೆ.

ಗಂಟೆಗೆ 120 ರಿಂದ 130 ಕಿ. ಮೀ. ವೇಗದಲ್ಲಿ ಸಂಚಾರ ನಡೆಸುವಂತೆ ವಂದೇ ಭಾರತ್ ರೈಲನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ಮೂಲ ಸೌಕರ್ಯಗಳು, ಹಳಿಗಳ ಸಾಮರ್ಥ್ಯದ ಆಧಾರದ ಮೇಲೆ ಸದ್ಯ ರೈಲುಗಳ ವೇಗವನ್ನು ನಿಗದಿ ಪಡಿಸಲಾಗುತ್ತಿದೆ.

ಕರ್ನಾಟಕದಲ್ಲಿ ಎರಡು ಮಾರ್ಗದಲ್ಲಿ ವಂದೇ ಭಾರತ್ ರೈಲುಗಳು ಓಡುತ್ತಿವೆ. ಮೈಸೂರು-ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ಮಾರ್ಗಲ್ಲಿ ಈ ರೈಲುಗಳು ಸಂಚಾರ ನಡೆಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+