Army Tent Caught Fire: ಸೇನಾ ಟೆಂಟ್‌ನಲ್ಲಿ ಬೆಂಕಿ: ಓರ್ವ ಅಧಿಕಾರಿ ಮೃತ, 6 ಮಂದಿಗೆ ಗಾಯ!

ಚಂಡೀಗಢ ಜುಲೈ 19: ಸೇನಾ ಟೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ಅಧಿಕಾರಿ ಮೃತಪಟ್ಟು, ಆರು ಮಂದಿ ಗಾಯಗೊಂಡ ದಾರುಣ ಘಟನೆ ಸಿಯಾಚಿನ್ ಹಿಮನದಿಯ ಬಳಿ ನಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಮೂವರು ಯೋಧರನ್ನು ಚಂಡೀಗಢಕ್ಕೆ ಸ್ಥಳಾಂತರಿಸಲಾಗಿದೆ. ಮದ್ದುಗುಂಡುಗಳ ಟೆಂಟ್‌ಗೆ ಬೆಂಕಿ ತಾಗುವ ಮೊದಲು ಬೆಂಕಿಯನ್ನು ನಂದಿಸಲಾಯಿಗಿದೆ. ಬೆಂಕಿಯಲ್ಲಿ ಕೆಲವು ಟೆಂಟ್‌ಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಮೃತ ಅಧಿಕಾರಿಯನ್ನು ರೆಜಿಮೆಂಟಲ್ ಮೆಡಿಕಲ್ ಆಫೀಸರ್ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಎಂದು ಗುರುತಿಸಲಾಗಿದೆ. ಘಟನೆಯ ವೇಳೆ ಉಂಟಾದ ಗಂಭೀರ ಸುಟ್ಟ ಗಾಯಗಳಿಂದ ಅವರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಪಿಆರ್‌ಒ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಗಾಯಗೊಂಡಿರುವ ಅಧಿಕಾರಿಗಳ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Army Tent Caught Fire

"ಜುಲೈ 19, 2023 ರಂದು ಸುಮಾರು ಬುಧವಾರ ಮುಂಜಾನೆ 3 ಗಂಟೆಗೆ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಬೆಂಕಿಯ ಘಟನೆ ಸಂಭವಿಸಿದೆ. ಅಹಿತಕರ ಘಟನೆಯ ಸಂದರ್ಭದಲ್ಲಿ ಉಂಟಾದ ಗಂಭೀರ ಸುಟ್ಟ ಗಾಯಗಳಿಂದ ರೆಜಿಮೆಂಟಲ್ ಮೆಡಿಕಲ್ ಆಫೀಸರ್ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಸಾವನ್ನಪ್ಪಿದ್ದಾರೆ.

ಇತರ ಮೂವರು ಸಿಬ್ಬಂದಿಗೆ ಹೊಗೆ ಉಸಿರಾಟದ ತೊಂದರೆ ಮತ್ತು ಸುಟ್ಟಗಾಯಗಳು ಆಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸುರಕ್ಷಿತವಾಗಿ ಗಾಳಿಗೆ ಸ್ಥಳಾಂತರಿಸಲಾಗಿದೆ. ಗಾಯಗೊಂಡ ಸಿಬ್ಬಂದಿಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ" ಎಂದು ರಕ್ಷಣಾ ಪಿಆರ್‌ಒ, ಲೇಹ್ ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, ಬೆಂಕಿಯ ಹಿಂದಿನ ಆರಂಭಿಕ ಕಾರಣ ಶಾಟ್ ಸರ್ಕ್ಯೂಟ್ ಆಗಿದೆ. ಬೆಂಕಿಗೆ ಕಾರಣವಾದ ಸಂದರ್ಭಗಳನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+