ಸೇನೆ ಮೇಲೆ ದಾಳಿ ಮಾಡಿದ ಉಗ್ರರು ಉಡೀಸ್ ಆಗೋದು ಪಕ್ಕಾ!

ಉದಂಪೂರ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಭೀಕರ ದಾಳಿ ನಡೆಸಿ, 5 ಯೋಧರ ಸಾವಿಗೆ ಕಾರಣವಾಗಿರುವ ಉಗ್ರರ ಹೆಣ ಬೀಳಿಸಲು ಸೇನೆ ಪಣತೊಟ್ಟಿದೆ. ಸುತ್ತಲ ಪ್ರದೇಶದಲ್ಲಿ ಉಗ್ರರ ಹುಡುಕಾಟ ಸಾಗಿರುವಾಗಲೇ, ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಉಗ್ರರ ವಿರುದ್ಧ ಖಡಕ್ ಸಂದೇಶ ರವಾನಿಸಿದ್ದಾರೆ.

ಗುರುವಾರ ಪೂಂಚ್ ಜಿಲ್ಲೆಯಲ್ಲಿ ರಜೌರಿ ಸೆಕ್ಟರ್‌ನಲ್ಲಿ ಭಾರತೀಯ ಸೇನಾ ವಾಹನದ ಮೇಲೆ ದಾಳಿ ನಡೆದಿತ್ತು. ದಾಳಿಯಲ್ಲಿ ಐವರು ಸೈನಿಕರು ಹುತಾತ್ಮರಾಗಿದ್ದರು. ಉಗ್ರರು ನಡೆಸಿದ ದಾಳಿಯಲ್ಲಿ ಸೇನಾ ವಾಹನಕ್ಕೆ ಬೆಂಕಿ ಬಿದ್ದು ಐವರು ಯೋಧರು ಸಜೀವ ದಹನವಾಗಿದ್ದರು. ಹೀಗಾಗಿ ಉಗ್ರರ ಹೆಡೆಮುರಿ ಕಟ್ಟಲು ಭಾರತೀಯ ಸೇನೆ ಪಣತೊಟ್ಟು ಕಾರ್ಯಾಚರಣೆ ಆರಂಭಿಸಿತ್ತು. ಇದೀಗ ಸೇನಾ ವಾಹನದಲ್ಲಿ ಬೆಂಕಿ ಬಿದ್ದಾಗ ಜೀವ ಉಳಿಸಿಕೊಂಡು, ಚಿಕಿತ್ಸೆ ಪಡೆಯುತ್ತಿರುವ ಯೋಧನ ಯೋಗಕ್ಷೇಮ ವಿಚಾರಿಸಿ ಮಾಹಿತಿ ಪಡೆದಿದ್ದಾರೆ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ.

Army officer said that Poonch terror attack perpetrators would soon face consequences

ಉಗ್ರರು ಉಡೀಸ್ ಆಗುವುದು ಪಕ್ಕಾ!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಉದಂಪೂರ್‌ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಓರ್ವ ಯೋಧ ಪ್ರಾಣಾಪಾಯದಿಂದ ಪಾರಾಗಿದ್ದು, ಅಂದು ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಈ ಯೋಧನ ಆರೋಗ್ಯ ವಿಚಾರಿಸಿದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಉಗ್ರರು ಇದಕ್ಕೆ ತಕ್ಕ ಬೆಲೆ ತೆರುತ್ತಾರೆ ಎಂದಿದ್ದಾರೆ. ಈ ಮೂಲಕ ಉಗ್ರರ ವಿರುದ್ಧದ ಕಾರ್ಯಾಚರಣೆ ಕೂಡ ತೀವ್ರಗೊಂಡಿರುವುದು ಪಕ್ಕಾ ಆಗಿದೆ. ಸೇನೆ ಮೇಲೆ ದಾಳಿ ನಡೆಸಿದ್ದ ಉಗ್ರರು ಶೀಘ್ರದಲ್ಲೇ ಹೆಣವಾಗುವ ಗ್ಯಾರಂಟಿ ಕೂಡ ಸಿಗುತ್ತಿದೆ.

Army officer said that Poonch terror attack perpetrators would soon face consequences

ಪುಲ್ವಾಮಾ ದಾಳಿಯ ಭೀಕರತೆ

4 ವರ್ಷಗಳ ಹಿಂದೆ ನಡೆದಿದ್ದ ಪುಲ್ವಾಮಾ ದಾಳಿ ಕೂಡ ಉಗ್ರರ ಇಂತಹದ್ದೇ ಭೀಕರ ಕೃತ್ಯಗಳಿಗೆ ಸಾಕ್ಷಿಯಾಗಿತ್ತು. ಫೆಬ್ರವರಿ 14, 2019ರಂದು ಭಾರತೀಯ ಸೇನಾ ವಾಹನದ ಮೇಲೆ ದಾಳಿ ನಡೆದ ಪರಿಣಾಮ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಜೊತೆಗೆ ಪದೇಪದೆ ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆಯನ್ನೇ ಗುರಿಯಾಗಿಸಿಕೊಂಡು ಉಗ್ರರು ಅಟ್ಯಾಕ್ ಮಾಡುತ್ತಿದ್ಧಾರೆ. ಈಗಲೂ ಅಂತಹದ್ದೇ ಕೃತ್ಯ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಂಡಿದೆ. ಘಟನೆ ನಡೆದ ಪ್ರದೇಶದ ಸಮೀಪದಲ್ಲೇ ಉಗ್ರರು ಅಡಗಿರುವ ಸಾಧ್ಯತೆ ಇದೆ.

ಪಾಪಿ ಪಾಕಿಸ್ತಾನದ ಬೆಂಬಲ

ಕಣಿವೆ ರಾಜ್ಯದಲ್ಲಿ ಉಗ್ರರು ಇಷ್ಟೊಂದು ಗಾಢವಾಗಿ ಬೇರೂರಲು ಪಾಪಿ ಪಾಕಿಸ್ತಾನದ ಕೈವಾಡ ಕೂಡ ಇದೆ. ಅದರಲ್ಲೂ ಭಾರತಕ್ಕೆ ಉಪಟಳ ನೀಡಲೆಂದೇ ಉಗ್ರರನ್ನ ಪಾಕಿಸ್ತಾನ ಬೆಳೆಸುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರ ಉಗ್ರರ ಸ್ವರ್ಗವಾಗುತ್ತಿದೆ. ಇಲ್ಲಿ ತರಬೇತಿ ಪಡೆಯುವ ಉಗ್ರರ ಪಡೆ ಭಾರತದ ಗಡಿಯೊಳಗೆ ನುಸುಳಿ, ಭಾರತೀಯ ಸೇನೆ ಹಾಗೂ ಸೈನಿಕರ ಮೇಲೆ ದಾಳಿ ಮಾಡುತ್ತಿದೆ. ಪುಲ್ವಾಮಾ ದಾಳಿ ಬಳಿಕ ಭಾರತ ಕೂಡ ಸರಿಯಾಗೇ ಪಾಠ ಕಲಿಸಿದೆ. ಆದರೂ ಉಗ್ರರು ಮಾತ್ರ ತಮ್ಮ ಬುದ್ಧಿ ಬಿಡುತ್ತಿಲ್ಲ. ಪಾಕಿಸ್ತಾನದ ರಾಜಕೀಯ ವ್ಯವಸ್ಥೆ ಹಾಳಾಗಿ ಹೋಗಿರುವುದು ಉಗ್ರರಿಗೆ ಮತ್ತಷ್ಟು ಬಲ ನೀಡಿದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+