ವಿರಾಟ್ ಕೊಹ್ಲಿ ಗೆಳತಿ ಅನುಷ್ಕಾ ಶರ್ಮಾಗೆ ಬಿಎಂಸಿ ನೋಟಿಸ್

ಮುಂಬೈ, ಏಪ್ರಿಲ್ 11 : ಅಪಾರ್ಟ್ ಮೆಂಟ್‌ನಲ್ಲಿ ವಿದ್ಯುತ್‌ ಜಂಕ್ಷನ್‌ ಬಾಕ್ಸ್‌ ಅಳವಡಿಸಿದ ಆರೋಪ ಸಂಬಂಧ ಕ್ರಿಕೆಟಿಗ ವಿರಾಟ್ ಕೊಹ್ಲಿ ಗೆಳತಿ ನಟಿ ಅನುಷ್ಕಾ ಶರ್ಮಾ ಅವರಿಗೆ ಬೃಹನ್ ಮುಂಬಯಿ ಮಹಾನಗರ ಪಾಲಿಕೆಯು (ಬಿಎಂಸಿ) ನೋಟಿಸ್ ನೀಡಿದೆ.

ಮುಂಬೈನ ವರ್ಸೊವಾದಲ್ಲಿರುವ 20 ಅಂತಸ್ತಿನ ಕಟ್ಟಡದಲ್ಲಿ ಮೂರು ಪ್ಲಾಟ್‌ಗಳನ್ನು ಹೊಂದಿರುವ ಅನುಷ್ಕಾ ಶರ್ಮಾ, ಪಾಲಿಕೆಯಿಂದ ಅನುಮತಿ ಪಡೆಯದೇ ವಿದ್ಯುತ್ ಜಂಕ್ಷನ್ ಬಾಕ್ಸ್‌ಗಳನ್ನು ಕಟ್ಟಡದ ಸಾಮಾನ್ಯ ಮಾರ್ಗದಲ್ಲಿ ಅಳವಡಿಸಿದ್ದಾರೆ ಎಂದು ಅದೇ ಅಪಾರ್ಟ್ ಮೆಂಟ್ ನಿವಾಸಿಯೊಬ್ಬರು ನಟಿಯ ವಿರುದ್ಧ ಬಿಎಂಸಿಗೆ ದೂರು ನೀಡಿದ್ದರು.[ರಾಜ್‌ಕೋಟ್‌ನಲ್ಲಿ ವಿರಾಟ್ ಜೊತೆ ಮನದನ್ನೆ ಅನುಷ್ಕಾ!]

Anushka Sharma Issued Letter by BMC Over Illegal Electrical Installation

'ವಿದ್ಯುತ್‌ ಜಂಕ್ಷನ್‌ ಬಾಕ್ಸ್‌ ಅನ್ನು ತಕ್ಷಣವೇ ತೆಗೆದುಹಾಕಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ' ಏಪ್ರಿಲ್‌ 6ರಂದು ಬಿಎಂಸಿ ನೀಡಿದ ನೋಟಿಸ್ ನಲ್ಲಿ ಅನುಷ್ಕಾ ಅವರಿಗೆ ತಿಳಿಸಲಾಗಿದೆ.

ಆದರೆ, ಈ ಆರೋಪವನ್ನು ನಿರಾಕರಿಸಿರುವ ಅನುಷ್ಕಾ ವಕ್ತಾರರು, 'ಅನುಷ್ಕಾ ಯಾವುದೇ ತಪ್ಪು ಮಾಡಿಲ್ಲ. 2013ರಲ್ಲೇ ಜಂಕ್ಷನ್ ಬಾಕ್ಸ್ ಹಾಕಲು ಅನುಮತಿ ಪಡೆಯಲಾಗಿದೆ.

ಅನುಷ್ಕಾ ಕುಟುಂಬವು ಜವಾಬ್ದಾರಿಯುತ ಪ್ರಜೆಗಳಾಗಿದ್ದು, ದೇಶದ ಕಾನೂನನ್ನು ಪಾಲಿಸುತ್ತಿದ್ದಾರೆ. ಯಾರಿಗೂ ತೊಂದರೆ ಉಂಟು ಮಾಡುವಂತಹ ಕೆಲಸ ಮಾಡಿಲ್ಲ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+